News Kannada
Saturday, October 08 2022

ಕರ್ನಾಟಕ

ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಲಭಿಸದ ಸಮಸ್ಯೆ ಪರಿಹಾರ - 1 min read

Photo Credit :

ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಲಭಿಸದ ಸಮಸ್ಯೆ ಪರಿಹಾರ

ಕಾಸರಗೋಡು: ರಾಜ್ಯ ಯುವಜನ ಕಲ್ಯಾಣ ಅಧ್ಯಕ್ಷೆ ಕುಮಾರಿ ಚಿಂತಾ ಜೆರೋಮ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅದಾಲತ್ ನಲ್ಲಿ ಆರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ಆಯೋಗದ ಮುಂದೆ 15 ದೂರುಗಳು ಬಂದಿದ್ದವು. ಈ ಪೈಕಿ 14 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಯಿತು. ಕಾಸರಗೋಡಿನ ಏಜೆನ್ಸಿ ಮೂಲಕ ಮಂಗಳೂರಿನ ಬಿಎಸ್ ಸಿ ನರ್ಸಿಂಗ್ ಗೆ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಲಭಿಸದ ಸಮಸ್ಯೆ ಬಗೆಹರಿಸಲಾಯಿತು.

ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮಧ್ಯಸ್ಥಿಕೆ ವಹಿಸಿ ಮೂರು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ಎಂ. ಪ್ಯಾನಲ್ ಮೂಲಕ ಕೆಎಸ್ ಆರ್ ಟಿಸಿ ನಿರ್ವಾಹಕನಿಗೆ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಉದ್ಯೋಗ ಕಳಕೊಂಡ ಬಗ್ಗೆ ಲಭಿಸಿದ ದೂರಿನಂತೆ ಮರು ನೇಮಕ ಮಾಡಲು ಇಲಾಖಾ ಮುಖ್ಯಸ್ಥರು ತೀರ್ಮಾನ ತೆಗೆದುಕೊಳ್ಳುವುದರೊಂದಿಗೆ ಸಮಸ್ಯೆ ಪರಿಹರಿಸಲಾಯಿತು.

ಕೇಂದ್ರ ವಿಶ್ವವಿದ್ಯಾನಿಲಯದ ಹಾಸ್ಟೆಲ್ ನಿಂದ ವಿದ್ಯಾರ್ಥಿಯೋರ್ವನನ್ನು ಹೊರಹಾಕಿದ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ವಿದ್ಯಾರ್ಥಿಯನ್ನು ಮರು ಸೇರ್ಪಡೆಗೊಳಿಸಲು ತೀರ್ಮಾನಿಸಲಾಯಿತು. ಮಂಗಲ್ಪಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಬಗ್ಗೆ ನಿರ್ಲಕ್ಷ ಧೋರಣೆ ತಳೆಯಲಾಗುತ್ತಿದೆ ಎಂಬ ದೂರು ಲಭಿಸಿದೆ. ಆದರೆ ಈ ಬಗ್ಗೆ ನಿರ್ಲಕ್ಷ ನಡೆಯುತ್ತಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.

ಆಯೋಗದ ಸದಸ್ಯ ಕೆ. ಮಣಿಕಂಠನ್, ಡಿ. ಸಂತೋಷ್ ಕುಮಾರ್, ಎಂ. ಸಲಿಂ, ಜಿಲ್ಲಾ ಯುವ ಜನ ಸಂಯೋಜಕ ಎ. ವಿ. ಶಿವಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

See also  ಮಂಗನಕಾಯಿಲೆ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳಿಬ್ಬರು ಅಮಾನತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು