News Kannada
Friday, September 30 2022

ಕರ್ನಾಟಕ

ಪರಿಸರವಾದಿಗಳ ಗಡಿಪಾರಿಗೆ ಭಾಗಮಂಡಲ, ಅಯ್ಯಂಗೇರಿ ಗ್ರಾಮಸ್ಥರ ಆಗ್ರಹ - 1 min read

Photo Credit :

ಪರಿಸರವಾದಿಗಳ ಗಡಿಪಾರಿಗೆ ಭಾಗಮಂಡಲ, ಅಯ್ಯಂಗೇರಿ ಗ್ರಾಮಸ್ಥರ ಆಗ್ರಹ

ಮಡಿಕೇರಿ: ವಿದೇಶಿ ಹಣದ ವ್ಯಾಮೋಹಕ್ಕೆ ಬಿದ್ದಿರುವ ಕೊಡಗಿನ ಕೆಲವರು ಪರಿಸರವಾದಿಗಳ ಸೋಗಿನಲ್ಲಿ ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಕೃಷಿಕರನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿರುವ ಭಾಗಮಂಡಲ ಹಾಗೂ ಅಯ್ಯಂಗೇರಿ ಗ್ರಾಮಸ್ಥರು, ಪರಿಸರವಾದಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಜನಾಂದೋಲನ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಪ್ರಮುಖ ಕುದುಕುಳಿ ಜೆ.ಭರತ್ ಅವರು, ತಮ್ಮನ್ನು ತಾವೇ ಪರಿಸರವಾದಿಗಳೆಂದು ಪ್ರತಿಬಿಂಬಿಸಿಕೊಳ್ಳುವ ಮೂಲಕ ಕೆಲವರು ಕೊಡಗಿನ ಬೆಳೆಗಾರರ ಆಸ್ತಿಗಳೆಲ್ಲಾ ಅರಣ್ಯ ಎಂದು ಪ್ರತಿಪಾದಿಸುತ್ತಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು. ಕೊಡಗಿನ ಕಂದಾಯ ಇಲಾಖೆ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಬಾಣೆ ಜಮೀನುಗಳ ಕಡತಗಳನ್ನು ವಿಲೇವಾರಿ ಮಾಡದಂತೆ ತಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೊಡಗಿನ ಪ್ರತಿಯೊಬ್ಬ ಬೆಳೆಗಾರರೂ ಪರಿಸರವಾದಿಗಳಾಗಿದ್ದು, ತಾವು ತೋಟ ಮಾಡಲು ಪ್ರಾರಂಭಿಸುವಾಗಲೇ ತೋಟದಲ್ಲಿ ಸಿಲ್ವರ್, ಪೊಂಗರೆ, ಕಿತ್ತಳೆ, ಬಾಳೆ, ತೆಂಗು, ಅಡಿಕೆ, ಹಲಸು ಮುಂತಾದ ಎಲ್ಲಾ ರೀತಿಯ ಮರ ಗಿಡಗಳನ್ನು ನೆಟ್ಟು ನಂತರ ಕಫಿ ಗಿಡಗಳನ್ನು ನೆಡುವುದು ಕೃಷಿ ಸಂಪ್ರದಾಯವಾಗಿ ಬೆಳೆದು ಬಂದಿದೆ. ಆದ್ದರಿಂದ ಕೊಡಗಿನ ಜನರಿಗೆ ಪಟ್ಟಣದಲ್ಲಿರುವ ಪರಿಸರವಾದಿಗಳು ಪರಿಸರದ ಬಗ್ಗೆ ಪಾಠ ಹೇಳುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಕೊಡಗಿನ ಜನತೆಯ ಸಂಪರ್ಕಕ್ಕೆ ಅಗತ್ಯವಾಗಿರುವ ಕರಿಕೆ, ಕಡಮಕಲ್ ರಸ್ತೆ ನಿರ್ಮಾಣಕ್ಕೂ ಅಡ್ಡಿಪಡಿಸಿರುವ ಈ ಪರಿಸರವಾದಿಗಳು ಜಿಲ್ಲೆಯ ಅಭಿವೃದ್ಧಿಗೂ ಅಡ್ಡಿಯಾಗಿದ್ದಾರೆ ಎಂದು ದೂರಿದರು.

ಪರಿಸರವಾದಿಗಳು ಕೆಲವು ಭೂಗರ್ಭ ತಜ್ಞರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಕೊಡಗಿನಲ್ಲಿ ಕೃಷಿಕರು ತಮ್ಮ ಕಾಫಿ ತೋಟಗಳಿಗೆ ತೋಡಿರುವ ಚರಂಡಿ, ಕೆರೆಗಳಿಂದ ಮತ್ತು ಮನೆಗಳನ್ನು ಕಟ್ಟಿರುವುದರಿಂದ ಭೂ ಕುಸಿತವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಕೊಡಿಸುವ ಮೂಲಕ ಕೃಷಿಕರನ್ನು ಅವರ ಜಾಗದಿಂದ ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಭರತ್ ಆರೋಪಿಸಿದರು. ಇತ್ತೀಚಿನ ವರ್ಷಗಳಲ್ಲಿ ಭಾರತದ ಇತರ ರಾಜ್ಯಗಳಲ್ಲೂ, ಹೊರ ದೇಶಗಳಲ್ಲೂ ಪ್ರವಾಹ ಭೂಕುಸಿತದಂತಹ ಪ್ರಕರಣಗಳು ನಡೆಯುತ್ತಿದ್ದು, ಅಲ್ಲಿಯ ಘಟನೆಗಳಿಗೂ ಕಾಫಿ ಚರಂಡಿ, ಕೆರೆಗಳು ಕಾರಣವೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ನಾಳಿಯಂಡ ಚಂಗಪ್ಪ, ಆಚೀರ ನಾಣಯ್ಯ, ಮೂಲೆಮಜಲು ನಾಗೇಶ ಹಾಗೂ ಗ್ರಾ.ಪಂ. ಸದಸ್ಯ ಕುದುಪಜೆ ಪುರುಷೋತ್ತಮ ಉಪಸ್ಥಿತರಿದ್ದರು.

See also  ವಿಶ್ವ ತುಳು ಸಮ್ಮೇಳನ ನೇರ ಪ್ರಸಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು