News Kannada
Thursday, December 08 2022

ಕರ್ನಾಟಕ

ಕೊಡಗಿನಲ್ಲಿ ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನಕ್ಕೆ ಆಕ್ರೋಶ

Photo Credit :

ಕೊಡಗಿನಲ್ಲಿ ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನಕ್ಕೆ ಆಕ್ರೋಶ

ಗೋಣಿಕೊಪ್ಪ: ಸಂವಾದ ಕಾರ್ಯಕ್ರವೊಂದರಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ್ದನ್ನೇ ಪುಷ್ಠೀಕರಿಸಿ ಅಂಕಣಕಾರ, ಪತ್ರಕರ್ತ ಎಂ.ಸಂತೋಷ್ ತಮ್ಮಯ್ಯನವರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಸಂಘ ಪರಿವಾರದ ಪ್ರಮುಖರು ಗೋಣಿಕೊಪ್ಪ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘ ಪರಿವಾರದ ಪ್ರಮುಖರಾದ ಚಕ್ಕೇರ ಮನು ಅವರ ನೇತೃತ್ವದಲ್ಲಿ ಸ್ಥಳೀಯ ಉಮಾಮಹೇಶ್ವರಿ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಸಂಘ ಪರಿವಾರದ ಚಕ್ಕೇರ ಮನು ಅವರು, ವೀರರನಾಡು ಕೊಡಗಿನಲ್ಲಿ ಸತ್ಯಕ್ಕೆ ಬೆಲೆ ಕೊಡುವವರು ನಾವು. ಇಲ್ಲಿ ಟಿಪ್ಪು ಜಯಂತಿ ಮಾಡುವುದಕ್ಕೆ ವಿರೋಧ ಮಾಡುತ್ತಲೇ ಬಂದಿದ್ದೇವೆ. ಇದಕ್ಕಾಗಿ ನಮ್ಮ ಕಾರ್ಯಕರ್ತರ ಬಲಿದಾನವಾಗಿದೆ. ಆದರೂ ನಾವು ಯಾವುದಕ್ಕೂ ಅಂಜುವುದಿಲ್ಲ, ಹೆದರುವುದಿಲ್ಲ. ಸಂತೋಷ್ ತಮ್ಮಯ್ಯನವರು ಭಾಷಣದಲ್ಲಿ ಹೇಳಿರುವ ಮಾತು ಸತ್ಯವಿದೆ. ಇದರ ಬಗ್ಗೆ ಚರ್ಚೆ ಮಾಡಲು ನಾವು ತಯಾರಿದ್ದೇವೆ. ಪೊಲೀಸ್ ಕೇಸಿನ ಮೂಲಕ, ಬೆದರಿಕೆಯ ಮುಖಾಂತರ ತಮ್ಮನ್ನು ಬಾಯಿ ಮುಚ್ಚಿಸಲು ಪ್ರಯತ್ನ ನಡೆಸಿದರೆ ಇದು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘ ಪರಿವಾರದ ಪ್ರಮುಖರಾದ ಮಾಚಿಮಾಡ ರವೀಂದ್ರ, ಅರಮಣಮಾಡ ರಂಜನ್ ಚಂಗಪ್ಪ, ಮಂಜು ರೈ, ಸುಬ್ರಮಣ್ಯ, ಗಣೇಶ್, ನೆಲ್ಲೀರ ಚಲನ್, ಚೀರಂಡ ಕಂದಾ ಸುಬ್ಬಯ್ಯ, ಮಧು ದೇವಯ್ಯ, ಕೊಲ್ಲೀರ ಧರ್ಮಜ, ಗಿರೀಶ್ ಗಣಪತಿ, ಸೇರಿದಂತೆ ನೂರಾರು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಡಿವೈಎಸ್ಪಿ ನಾಗಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 12 ಗಂಟೆಯಿಂದ 1 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಪ್ರತಿಭಟನೆಯಿಂದ ಕೆಲ ಕಾಲ ವಾಹನ ಸಂಚಾರದಲ್ಲಿ ಆಡಚಣೆಯಾಗಿತ್ತು.

See also  ಬಿಜೆಪಿಯವರು ಟಿಪ್ಪುವನ್ನು ತಲೆ ಮೇಲಿರಿಸಿದ್ದರು: ದೇಶಪಾಂಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು