ಕಾರವಾರ: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಾಕಿದ್ದ ಗಂಡು ಆನೆ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿಯಲ್ಲಿ ನಡೆದಿದೆ.
ಇಲ್ಲಿನ ಅರಣ್ಯ ಪ್ರದೇಶದಲ್ಲಿ ಸಫರಿಗಾಗಿ ಮೂರು ಆನೆಗಳನ್ನು ಅರಣ್ಯ ಇಲಾಖೆ ಸಾಕಿತ್ತು. ಪಣಸೋಲಿಯ ಅರಣ್ಯಕ್ಕೆ ಆನೆಗಳನ್ನು ಮೇಯಲು ಬಿಟ್ಟಾಗ ಕಾಡಿನಲ್ಲಿದ್ದ ಎರಡು ಗಂಡಾನೆ ರಾಜೇಶ್ ಎನ್ನುವ ಗಂಡಾನೆ ಮೇಲೆ ಮಾರಣಾಂತಿಕ ರೀತಿಯಲ್ಲಿ ದಾಳಿ ನಡೆಸಿತ್ತು.
ಇದರಿಂದಾಗಿ ತೀವ್ರ ಗಾಯಗೊಂಡಿದ್ದ ಗಂಡಾನೆ ಜೋಯಿಡಾ ವಲಯ ಅರಣ್ಯಾಧಿಕಾರಿಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದರು. ಅದರೆ ಚಿಕಿತ್ಸೆ ಫಲಿಸದೆ ರಾಕೇಶ್ ಎನ್ನುವ ಗಂಡಾನೆ ಕೊನೆಯುಸಿರೆಳೆದಿದೆ.