ಕಾಸರಗೋಡು: ಶಬರಿಮಲೆ ಸನ್ನಿದಾನ ದಲ್ಲಿ ಬಾನುವಾರ ರಾತ್ರಿ ಅಯ್ಯಪ್ಪ ಭಕ್ತರ ಬಂಧನವನ್ನು ಪ್ರತಿಭಟಿಸಿ ಬಿ ಜೆ ಪಿ ಕಾರ್ಯಕರ್ತರು ಕಾಸರಗೋಡು ನಗರ ಠಾಣಾ ಪೊಲೀಸ್ ಠಾಣೆಗೆ ತಡರಾತ್ರಿ ಮುಂಜಾನೆ ಮುತ್ತಿಗೆ ಹಾಕಿದರು.
ರಾತ್ರಿ ಒಂದು ಗಂಟೆ ಸುಮಾರಿಗೆ ೫೦ ರಷ್ಟು ಕಾರ್ಯಕರ್ತರು ಠಾಣೆ ಗೆ ಮುತ್ತಿಗೆ ಹಾಕಿದ್ದು, ನಾಲ್ಕು ಗಂಟೆ ತನಕ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ .ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಮುರಳಿ , ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮೊದಲಾದವರು ನೇತೃತ್ವ ನೀಡಿದರು