News Kannada
Friday, December 09 2022

ಕರ್ನಾಟಕ

ಮಳವಳ್ಳಿಯಲ್ಲಿ ಪಿಂಚಣಿ ವಿತರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Photo Credit :

ಮಳವಳ್ಳಿಯಲ್ಲಿ ಪಿಂಚಣಿ ವಿತರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಮಳವಳ್ಳಿ: ವೃದ್ದರು, ಅಂಗವಿಕಲರು, ವಿಧವೆಯರು, ಸಂಧ್ಯಾ ಸುರಕ್ಷ ಮತ್ತು ಮಂಗಳಮುಖಿಯರ ಮಾಸಾಶನವನ್ನು ಸ್ಥಳದಲ್ಲೇ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟವತಿಯಿಂದ ಮಳವಳ್ಳಿ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಮಳವಳ್ಳಿಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಹೊರಟ ನೂರಾರು ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಜುಲೈ ತಿಂಗಳ ಬಜೆಟ್‍ನ ಘೋಷಣೆಯಂತೆ ಮಾಸಿಕ 1000 ಗಳಂತೆ ಇಂದಿನಿಂದಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ನೂರಾರು ಜನರಿಗೆ ಮಾಸಾಶನದ ಆದೇಶದ ಪ್ರತಿ ನೀಡಿ ಒಂದು ವರ್ಷ ಕಳೆದಿದ್ದರೂ ಇದುವರೆಗೆ ಮಾಸಾಶನ ನೀಡಿಲ್ಲ. ಆ ಎಲ್ಲ್ಲಬಾಕಿಯನ್ನು ಒಳಗೊಂಡಂತೆ ಇನ್ನೂ ಒಂದು ವಾರದೊಳಗೆ ಪಾವತಿಮಾಡಬೇಕು, ಮಾಸಾಶನ ಮಂಜೂರು ಮಾಡಲು ಅನುಸರಿಸುತ್ತಿರುವ ನಿಯಮಗಳನ್ನು ಸರಳೀಕರಿಸಬೇಕು, ನೌಕರರು ಹಾಗೂ ಕಾರ್ಮಿಕರಿಗೆ ಪ್ರತಿವರ್ಷ ಸಂಬಳಕ್ಕೆ ಅನುಗುಣವಾಗಿ ಬೆಲೆ ಹೆಚ್ಚಳ ಪರಿಗಣಿಸಿ ತುಟ್ಟಿ ಭತ್ಯೆ ನೀಡುವಂತೆ ಈ ಸಮುದಾಯಕ್ಕೆ ನೀಡಬೇಕು, ವಿಜಯಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಮಾಸಾಶನ ತಲುಪಿಸಲು ವಿಳಂಬವಾಗುತ್ತಿರುವುದನ್ನು ತಪ್ಪಿಸಬೇಕು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು, ಶವಸಂಸ್ಕಾರ ಮಾಡಿ ವರ್ಷಗಳೇ ಕಳೆದಿದ್ದರೂ ಅವರ ಶವಸಂಸ್ಕಾರದ ಸಹಾಯಧನ ಪಾವತಿಯಾಗಿಲ್ಲ. ಆದರ ಲೋಪಗಳನ್ನು ಸರಿಪಡಿಸಿ ತಡಮಾಡದೆ ಹಣ ಬಿಡುಗಡೆ ಮಾಡಬೇಕು ಮತ್ತು ರಾಷ್ಟ್ರೀಯ ಭದ್ರತಾ ಯೋಜನೆಯ ಹಣವನ್ನು ತುರ್ತು ಬಿಡುಗಡೆ ಮಾಡಬೇಕು. ಅಂಗವಿಕಲರು ವೃದ್ಧರು, ವಿಧವೆಯರು, ಮಂಗಳಮುಖಿಯರ ಸಮಸ್ಯೆಯನ್ನು ಹೋಗಲಾಡಿಸಲು ಪ್ರತಿ ಗ್ರಾಮದಲ್ಲೂ ಅದಾಲತ್ ನಡೆಸಬೇಕು. ಪ್ರತಿ ತಿಂಗಳಿಗೊಮ್ಮೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕುಂದುಕೊರೆತೆಯ ಸಭೆ ನಡೆಸಬೇಕು ಎಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಚಂದ್ರಮೌಳಿರವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ತಾಲೂಕು ಅಧ್ಯಕ್ಷ ಶಿವಮಲ್ಲಯ್ಯ, ಕಾರ್ಯದರ್ಶಿ ಸರೋಜಮ್ಮ, ಶಿವಕುಮಾರ್, ಬಸವಣ್ಣ, ಜಯಶೇಖರಮೂರ್ತಿ, ಚಿಕ್ಕಮರೀಗೌಡ ಸೇರಿದಂತೆ ಮತ್ತಿತ್ತರರು ಇದ್ದರು.

See also  ಪ್ರಿಯಕರನ ಜತೆ ಸೇರಿ ಪತಿಯ ಕೊಲೆ: ೬ ವರ್ಷಗಳ ಬಳಿಕ ಪತ್ನಿ ಅರೆಸ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು