News Kannada
Thursday, December 08 2022

ಕರ್ನಾಟಕ

ರೈತರ ಸಾಲದ ಮಾಹಿತಿ ವಾರದೊಳಗೆ ಸಲ್ಲಿಸಿ: ಡಿಸಿ ಕೆ.ಎ. ದಯಾನಂದ

Photo Credit :

ರೈತರ ಸಾಲದ ಮಾಹಿತಿ ವಾರದೊಳಗೆ ಸಲ್ಲಿಸಿ: ಡಿಸಿ ಕೆ.ಎ. ದಯಾನಂದ

ಶಿವಮೊಗ್ಗ: ರೈತರ ಸಾಲಮನ್ನಾ ಯೋಜನೆಯನ್ನುಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ರೈತರ ಸಾಲದ ವಿವರಗಳನ್ನು ಒಂದು ವಾರದ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಬ್ಯಾಂಕರ್‍ಗಳಿಗೆ ಸೂಚನೆ ನೀಡಿದರು. ಸಾಲಮನ್ನಾ ಯೋಜನೆ ಅನುಷ್ಟಾಟನಕ್ಕೆ ಪೂರ್ವಭಾವಿ ಸಿದ್ದತೆ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬ್ಯಾಂಕರ್‍ಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

2017ರ ಡಿಸೆಂಬರ್ 31ಕ್ಕೆ ಕೊನೆಗೊಂಡಂತೆ ರೈತರು ಪಡೆದಿರುವ ಸಾಲದ ವಿವರಗಳು ಪ್ರಸ್ತುತ ಬ್ಯಾಂಕ್‍ಗಳಲ್ಲಿ ಲಭ್ಯವಿದೆ. ಸದರಿ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಕ್ರೋಢೀಕರಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಎಲ್ಲಾ ವಿವರಗಳನ್ನು ಈ ತಿಂಗಳ ಅಂತ್ಯದ ಒಳಗಾಗಿ ಅಪ್‍ಲೋಡ್ ಮಾಡಬೇಕು. ಇದಕ್ಕಾಗಿ ಎರಡು ದಿನಗಳ ಕಾಲ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ. ಸಾಲದ ಮಾಹಿತಿಯನ್ನು ವಿಳಂಬಕ್ಕೆ ಆಸ್ಪದವಿಲ್ಲದೆ ಸಮರ್ಪಕವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಸಾಲಮನ್ನಾಕ್ಕಾಗಿ ಸರ್ಕಾರ ಈಗಾಗಲೇ ಮಾನದಂಡ ನಿಗದಿಪಡಿಸಿದ್ದು, ಸಾಲದ ಸಂಪೂರ್ಣ ವಿವರಗಳನ್ನು ಕ್ರೋಡೀಕರಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಾಲದ ವಿವರಗಳನ್ನು ಅಪ್‍ಲೋಡ್ ಮಾಡುವ ಸಂದರ್ಭದಲ್ಲಿ ಯಾರ ಹೆಸರು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು. ಸಹಕಾರ ಬ್ಯಾಂಕ್ಗ ಳು ಮಾಹಿತಿಯನ್ನು ಒದಗಿಸುವ ಸಂದರ್ಭದಲ್ಲಿ ಹೆಚ್ಚಿನ ಜಾಗೃತೆ ವಹಿಸಬೇಕು. ಸಾಲಮನ್ನಾದ ಲಾಭ ಎಲ್ಲಾ ಅರ್ಹ ರೈತರಿಗೆ ತಲುಪುವಂತೆ ನೋಡಿಕೊಳ್ಳುವುದು ಬ್ಯಾಂಕ್‍ಗಳ ಜವಾಬ್ದಾರಿ ಯಾಗಿದೆ. ಸಾಲ ಪಡೆದ ರೈತರ ಮಾಹಿತಿಯನ್ನು ನಿಗದಿತ ಅವಧಿಯ ಒಳಗಾಗಿ ಸಲ್ಲಿಸದಿರುವ ಬ್ಯಾಂಕ್‍ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಸಂಗಪ್ಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಸೊಲೋಮನ್, ವಿವಿಧ ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

See also  7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಒತ್ತಾಯಿಸಿ ಶಿಕ್ಷಕರ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು