ಬೆಳ್ತಂಗಡಿ: ಪ್ರತೀ ಸೋಮವಾರ ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಸಂತೆಯನ್ನು ಸನಿಹದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಸಂಬಂಧಪಟ್ಟ ವರ್ತಕರೊಂದಿಗೆ ಸಭೆ ನಡೆಸುವ ಮಹತ್ವದ ತೀರ್ಮಾನವನ್ನು ಬುಧವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯು ಶಾಸಕ ಹರೀಶ ಪೂಂಜ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ವಿವಿಧ ಇಲಾಖೆಗಳ ನಡವಳಿಕೆಗಳ ಬಗ್ಗೆ ಚರ್ಚೆ ನಡೆಯಿತು. ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಹೊರತು ಪಡಿಸಿ ರಾಜ್ಯದ ಉಳಿದೆಲ್ಲಾ ಕಡೆ ಕೃಷಿ ಉತ್ಪನ್ನ ಮಾರುಕಟ್ಟೆಗಳು ಸುಸ್ಥಿತಿಯಲ್ಲಿವೆ. ಬೆಳ್ತಂಗಡಿ ಮಾರುಕಟ್ಟೆಯ ಸ್ಥಿತಿಯನ್ನು ಉತ್ತಮ ಗೊಳಿಸುವ ಬಗ್ಗೆ ಏನು ಮಾಡಬಹುದು ಎಂಬುದನ್ನು ಚರ್ಚೆ ನಡೆಯಿತು. ಮುಖ್ಯವಾಗಿ ಬೆಳ್ತಂಗಡಿಯಲ್ಲಿ ನಡೆಯುವ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದರೆ ಉತ್ತಮ.ಇದರಿಂದ ಪೇಟೆಯಲ್ಲಿ ರಸ್ತೆ ಸಂಚಾರ ಸುಗಮವಾಗ ಬಲ್ಲುದು ಮತ್ತು ಎಪಿಎಂಸಿಗೆ ಅನುಕೂಲವೂ ಆಗಬಲ್ಲುದು ಎಂಬ ಸಲಹೆ ಬಂತು. ಒಂದೆರಡು ವಾರಗಳ ಕಾಲ ಪ್ರಾಯೋಗಿಕವಾಗಿ ಸ್ಥಳಾಂತರ ಮಾಡುವಂತೆ ಜಿ.ಪಂ.ಸದಸ್ಯ ಮಮತಾ ಶೆಟ್ಟಿ ಸೂಚಿಸಿದರು. ಯಾವುದಕ್ಕೂಶೀಘ್ರವಾಗಿ ವರ್ತಕರ ಸಭೆಯನ್ನುಕರೆದು ಚರ್ಚಿಸುವ ಎಂದು ಶಾಸಕರುತಿ ಳಿಸಿದರು.
ಅಕ್ರಮ ಮದ್ಯ ಮಾರಾಟದ ಬಗ್ಗೆ ಅನೇಕ ದೂರುಗಳು ಮಹಿಳೆಯರಿಂದಲೇ ಬರುತ್ತಿವೆ. ಅದನ್ನುತಡೆಯುವ ನಿಟ್ಟಿನಲ್ಲಿ ಅಬಕಾರಿ ಮತ್ತು ಪೋಲಿಸರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳು ಬಂದರೆ ಪತ್ತೆ ಹಚ್ಚಿಅಂತಹವರಿಗೆ ಕಾನೂನಿನ ಬಗ್ಗೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದುಅಬಕಾರಿ ಅಧಿಕಾರಿಗೆ ಶಾಸಕರು ಸೂಚಿಸಿದರು.
ಬೆಳ್ತಂಗಡಿ ಆಸ್ಪತ್ರೆಯಲ್ಲಿಅಂಬುಲೆನ್ಸ್‍ಇದೆಎಂದುಉಸ್ತುವಾರಿ ಸಚಿವರ ಸಭೆಯಲ್ಲಿ ವೈದ್ಯಾಧಿಕಾರಿಯವರು ಸುಳ್ಳು ಹೇಳಿರುವುದು ಯಾಕೆಎಂದು ಶಾಸಕರು ಪ್ರಶ್ನಿಸಿದರು. ಬೆಳ್ತಂಗಡಿಗೆ ಶೀಘ್ರವಾಗಿ ಅಂಬ್ಯುಲೆನ್ಸ್ ಬರುವಂತೆ ವೈದ್ಯಾಧಿಕಾರಿಗಳು ಗಮನ ಹರಿಸಬೇಕು. ಯಾವುದೇ ಅಧಿಕಾರಿಗಳು ಮರ್ಯಾದೆಹೋಗುತ್ತದೆಂದು ಸುಳ್ಳು ಹೇಳುವ ಅಗತ್ಯವಿಲ್ಲ. ಸಮಸ್ಯೆಇದ್ದರೆ ನೇರವಾಗಿ ತಿಳಿಸಬೇಕು. ತಾಲೂಕಿನಆಯುರ್ವೇದ ಆಸ್ಪತ್ರೆಗಳನ್ನು ಸುಸ್ಥಿತಿಯಲ್ಲಿಡಬೇಕು. ಹಲವು ಆಸ್ಪತ್ರೆಗಳಲ್ಲಿ ನರ್ಸ್‍ಗಳು ಇಲ್ಲ. ಅದರ ಬಗ್ಗೆಯೂಗಮನಹರಿಸಬೇಕುಎಂದು ಶಾಸಕರು ಸೂಚಿಸಿದರು.
ನ.ಪಂ. ವ್ಯಾಪ್ತಿಯಗುಂಪಲಾಜೆಯಲ್ಲಿ ಅನಧಿಕೃತ ಕಟ್ಟಡದ ಬಗ್ಗೆ ಗಮನ ಹರಿಸುವಂತೆ ನ.ಪಂ.ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಪಟ್ಟಣದಲ್ಲಿ ಮನೆಕಟ್ಟಲು ಸಮಸ್ಯೆಯಾಗಲುಕಾರಣವಾಗುವ ಮೂಡಾ ವ್ಯವಸ್ಥೆಯನ್ನು ಪ.ಪಂ.ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಸಂಬಂಧಪಟ್ಟಅಧಿಕಾರಿಗೆಮನವಿ ಮಾಡುವ ನಿರ್ಣಯವನ್ನು ಮಾಡಲಾಗುವುದುಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿಅಧ್ಯಕ್ಷ ವಿ.ಟಿ.ಸೆಬಾಸ್ಟಿಯನ್, ತಹಸೀಲ್ದಾರ್ ಮದನ ಮೋಹನ, ಕಾರ್ಯನಿರ್ವಹಣಾಧಿಕಾರಿಕುಸುಮಾಧರ್ ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಹೊಸದಾಗಿ ಸ್ಥಾಪನೆಯಾಗಿರುವತೆಕ್ಕಾರು, ಕಳೆಂಜ, ಕಡಿರುದ್ಯಾವರ, ನಾವೂರುಗ್ರಾ.ಪಂ,ಗಳ ಕಟ್ಟಡಗಳಿಗೆ ಸರಕಾರದಿಂದಅನುದಾನ ಬಿಡುಗಡೆಯಾಗಿ ವರ್ಷ ಕಳೆದರೂ ಜಾಗದ ಸಮಸ್ಯೆಯಿಂದಾಗಿಕಟ್ಟಲು ಸಾಧ್ಯವಾಗದಿರುವ ಬಗ್ಗೆ ಸಭೆಯಲ್ಲಿಚರ್ಚೆ ನಡೆಯಿತು. ಜಮೀನು ಮಂಜೂರುಕುರಿತು ಶೀಘ್ರ ಕಾರ್ಯ ಆಗಬೇಕು. ಅದಕ್ಕಾಗಿ ವಿಶೇಷವಾಗಿ ತಾ.ಪಂ.ನ ಶ್ರೀಧರ್ ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ ಶಾಸಕರು ನೇಮಿಸಿದರು.
ಜಿ.ಪಂ. ಇಂಜಿನಿಯರ್ ಉಪವಿಭಾಗಜಡ್ಡು ಹಿಡಿದಿದೆ. ಹಲವರುಕಡೆಆಗದ ಕೆಲಸಕ್ಕೆ ಹಣ ಬಿಡುಗಡೆಯಾದ ಮಾಹಿತಿ ಬಂದಿದೆ ಹೀಗಾಗಿ ಗ್ರಾ.ಪಂ. ಕಾಮಗಾರಿಗಳ ಬಗ್ಗೆ ಮಾರ್ಚನವರೆಗೆಕಾಯದೆ ಮುಂದಿನ ತಿಂಗಳೊಳಗೆ ಕ್ರಿಯಾಯೋಜನೆ, ಅಂದಾಜು ಪಟ್ಟಿ ತಯಾರಿಸಿ, ಗುತ್ತಿಗೆದಾರರನ್ನು ಗುರುತಿಸಿ ಒಪ್ಪಂದ ಪತ್ರ ಸಿದ್ದಮಾಡಿ ಕೊಡಬೇಕು- ಶಾಸಕ ಪೂಂಜ
ಎಲ್ಲಾ ಇಲಾಖೆಯವರು ಕಾಮಾಗಾರಿಗಳ ವಿಚಾರದಲ್ಲಿ ಉದಾಸೀನತೆ ತೋರಬಾರದು. ಟಪ್ಪಾಲು ಮಾಡಿ ಸುಮ್ಮನೆ ಕುಳಿತುಕೊಳ್ಳಬಾರದು. ಕಾಮಾಗಾರಿಗಳು ಗುರಿ ಮುಟ್ಟುವತನಕ ಬೆನ್ನು ಹಿಡಿಯಬೇಕು- ಶಾಸಕ ಪೂಂಜ