News Kannada
Saturday, October 01 2022

ಕರ್ನಾಟಕ

ಡಿ. 9ರಿಂದ 16ರವರೆಗೆ ಟೂರ್ ಆಫ್ ನೀಲಗಿರೀಸ್: ವಿಶ್ವದ 110 ಸೈಕ್ಲಿಸ್ಟ್ ಗಳು ಭಾಗಿ - 1 min read

Photo Credit :

ಡಿ. 9ರಿಂದ 16ರವರೆಗೆ ಟೂರ್ ಆಫ್ ನೀಲಗಿರೀಸ್: ವಿಶ್ವದ 110 ಸೈಕ್ಲಿಸ್ಟ್ ಗಳು ಭಾಗಿ

ಮಡಿಕೇರಿ: ರೈಡ್ ಎ ಸೈಕಲ್ ಪ್ರತಿಷ್ಠಾನದ ವತಿಯಿಂದ ಆಯೋಜಿತ 11ನೇ ಆವೃತ್ತಿಯ ಟೂರ್ ಆಫ್ ನೀಲಗಿರೀಸ್ ನಲ್ಲಿ ಈ ಬಾರಿ ಸೈಕ್ಲಿಸ್ಟ್ ಗಳು ಕುಶಾಲಗರ ಮೂಲಕ ಕೊಡಗು ಪ್ರವೇಶಿಸಲಿದ್ದು, 950 ಕಿಲೋ ಮೀಟರ್ ಗೂ ಅಧಿಕ ದೂರವನ್ನು ತಮ್ಮ ಸೈಕಲ್ ಯಾತ್ರೆಯ ಸಂದರ್ಭ ಕ್ರಮಿಸಲಿದ್ದಾರೆ.

ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್ ಜೀವವೈವಿಧ್ಯತೆಯ ತಾಣಗಳಲ್ಲಿ ಈ ಸೈಕಲ್ ಪ್ರಯಾಣ ಸಾಗಲಿದೆ. ವಿಶ್ವದ 110 ಸೈಕಲ್ ಸವಾರರು 2018ರ ಟೂರ್ ಆಫ್ ನೀಲಗಿರೀಸ್ ನ ಪ್ರಯಾಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ 13 ದೇಶಗಳ 29 ಅಂತಾರಾಷ್ಟ್ರೀಯ ರೈಡರ್ ಗಳು (23 ಪುರುಷ ಹಾಗೂ 6 ಮಹಿಳೆಯರು) ಹಾಗೂ 17 ಮಹಿಳಾ ರೈಡರ್ ಗಳು ಭಾಗವಹಿಸಲಿದ್ದಾರೆ.

ಮೈಸೂರಿನಲ್ಲಿ ಆರಂಭವಾಗಲಿರುವ ಸೈಕಲ್ ಯಾತ್ರೆ ಹಾಸನ, ಕುಶಾಲನಗರ, ಸುಲ್ತಾನ್ ಬತೇರಿ, ಊಟಿ , ಕಲ್ಪೆಟ್ಟ ಮಾರ್ಗವಾಗಿ ಸಾಗಿ ಮೈಸೂರಿಗೆ ಮರಳುವುದರೊಂದಿಗೆ ಸಮಾಪನಗೊಳ್ಳಲಿದೆ. ಸೈಕಲಿಂಗ್ ನ 4ನೇ ದಿನ ಸುಲ್ತಾನ್ ಬತೇರಿಯಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸೈಕ್ಲಿಸ್ಟ್ ಗಳು ಕಡಿದಾದ ಕಲ್ಹಟ್ಟಿ ಘಾಟ್ ಏರಬೇಕಿರುತ್ತದೆ. ಇದು ವಿಶ್ವದ ಅತ್ಯಂತ ಕಠಿಣ ಸೈಕ್ಲಿಂಗ್ ಆರೋಹಣಗಳಲ್ಲಿ ಒಂದಾಗಿದೆ. ಡಿ. 10ರಂದು ಹಾಸನದಿಂದ ಪ್ರಾರಂಭವಾಗಿ ಸಕಲೇಶಪುರ ಹಾಗೂ ಸೋಮವಾರಪೇಟೆ ಮೂಲಕ 143 ಕಿ.ಮೀ ಕ್ರಮಿಸಿ ಸಂಜೆ 6 ಗಂಟೆಗೆ ಸೈಕಲಿಸ್ಟ್ ಗಳು ಕುಶಾಲನಗರ ತಲುಪಲಿದ್ದಾರೆ.

ಡಿ. 11ರಂದು ಬೆಳಗ್ಗೆ ಕುಶಾಲನಗರ ದಿಂದ ದುಬಾರೆ ಆನೆ ಶಿಬಿರ, ಗೋಣಿಕೊಪ್ಪಲು , ಕುಟ್ಟ ಹಾಗೂ ತೋಲ್ಪಟ್ಟಿ ಅರಣ್ಯ ಮೂಲಕ 145 ಕಿ.ಮೀ ಕ್ರಮಿಸಿ ಸುಲ್ತಾನ್ ಬತೇರಿಯನ್ನು ಸೈಕಲ್ ಸವಾರರು ತಲುಪಲಿದ್ದಾರೆ.

ಎಂಟು ದಿನಗಳ ಸೈಕ್ಲಿಂಗ್ ಪ್ರಯಾಣದಲ್ಲಿ (ಡಿ. 9 ರಿಂದ 16 ) ಸೈಕ್ಲಿಸ್ಟ್ ಗಳು ಹಲವಾರು ನೈಸರ್ಗಿಕ ತಾಣಗಳನ್ನು ವೀಕ್ಷಿಸಲಿದ್ದಾರೆ. ಕಡಿದಾದ ಕಣಿವೆಗಳು, ಕಾಫಿ-ಟೀ ಸಸ್ಯರಾಶಿಗಳು, ಮೂರು ವನ್ಯಜೀವಿ ಅಭಯಾರಣ್ಯಗಳು ಹಾಗೂ ಗಿರಿಶಿಖರಗಳನ್ನೂ ಹಾದುಹೋಗಲಿದ್ದಾರೆ .

ಸೈಕಲ್ ಮೂಲಕ ಪ್ರಕೃತಿಯ ಅನುಭವ ಪಡೆಯುವ ಅಪೂರ್ವ ಅವಕಾಶವೇ ಟೂರ್ ಆಫ್ ನೀಲಗಿರೀಸ್ ಆಗಿದ್ದು ಎಂದು ಹೇಳುವ ಈ ಸೈಕಲ್ ಯಾತ್ರೆಯ ಆಯೋಜಕ ಸಂಸ್ಥೆಯಾದ ರೈಡ್ ಎ ಸೈಕಲ್ ಪ್ರತಿಷ್ಟಾನದ ಸಹ ಸಂಸ್ಥಾಪಕ ದೀಪಕ್ ಮಾಜಿ ಪಾಟೀಲ್, ಪ್ರತಿ ಆವೃತ್ತಿಯ ಟಿಎಫ್‍ಎನ್ ಕೂಡ ರೈಡರ್ ಗಳ ನೆನಪಿನಲ್ಲಿ ಉಳಿಯುತ್ತದೆ. ಮತ್ತೊಮ್ಮೆ ನಿಸರ್ಗದ ಅನುಭವ ಪಡೆಯುವ ಸಲುವಾಗಿ ಮರಳಿ ಬರುತ್ತಾರೆ ಎಂದು ಹೇಳಿದರು.

ಭಾರತೀಯ ಸೈಕ್ಲಿಸ್ಟ್ ಗಳು ಮಾತ್ರವಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಸೈಕ್ಲಿಸ್ಟ್ ಗಳು ಈ ಪ್ರಯಾಣದಲ್ಲಿ ಪಾಲ್ಗೊಳ್ಳಲೆಂದೇ ಭಾರತಕ್ಕೆ ಆಗಮಿಸುತ್ತಿದ್ದಾರೆ. ಡೆನ್ಮಾರ್ಕ್ ನಿಂದ 7 ಸೈಕ್ಲಿಸ್ಟ್ ಗಳು, ಅಮೆರಿಕದಿಂದ 4, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಇಂಗ್ಲೆಂಡ್ ನಿಂದ ತಲಾ ಮೂರು, ಬೆಲ್ಜಿಯಂ ಮತ್ತು ಕೆನಡಾದಿಂದ ತಲಾ 2, ಆಸ್ಟ್ರಿಯಾ, ಗ್ರೀಸ್, ಮಲೇಷ್ಯಾ, ಫಿಲಿಫೈನ್ಸ್ ಮತ್ತು ಪೋಲೆಂಡ್ ನಿಂದ ತಲಾ ಒಬ್ಬ ಸೈಕ್ಲಿಸ್ಟ್ ಗಳು ಈ ಬಾರಿ ಪಾಲ್ಗೊಂಡಿದ್ದಾರೆ. ಈ ವರ್ಷ ಉಳಿದೆಲ್ಲಾ ವರ್ಷಗಳ ದಾಖಲೆಯ ಅಂತಾರಾಷ್ಟ್ರೀಯ ರೈಡರ್ ಗಳನ್ನು ಟಿಎಫ್‍ಎನ್ ಆಕರ್ಷಿಸುವುದರೊಂದಿಗೆ, ದೇಶ ಹಾಗೂ ವಿದೇಶದಿಂದ 17 ಮಹಿಳಾ ಸೈಕ್ಲಿಸ್ಟ್ ಗಳು ಸ್ಪರ್ಧಿಸುತ್ತಿದ್ದಾರೆ ಎಂದು ದೀಪಕ್ ಮಾಜಿ ಪಾಟೀಲ್ ಮಾಹಿತಿ ನೀಡಿದ್ದಾರೆ.

See also  ನೆರೆ ಪೀಡಿತ ಪ್ರದೇಶಕ್ಕೆ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು