News Kannada
Wednesday, October 05 2022

ಕರ್ನಾಟಕ

ಹಾಸನ-ಬೇಲೂರು ರೈಲ್ವೆಗೆ ಸಂಪುಟ ಸಭೆ ಅನುಮೋದನೆ - 1 min read

Photo Credit :

ಹಾಸನ-ಬೇಲೂರು ರೈಲ್ವೆಗೆ ಸಂಪುಟ ಸಭೆ ಅನುಮೋದನೆ

ಬೇಲೂರು: ಹಾಸನ-ಬೇಲೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಲಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಹೆಚ್.ಡಿ.ರೇವಣ್ಣ ಹೇಳಿದರು.

ತಾಲೂಕಿನ ದಬ್ಬೆ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡವಾಗಿ ನೂತನವಾಗಿ ನಿರ್ಮಿಸುವ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದ ಪಾಲಿನ ಹಣವನ್ನು ಬಿಡುಗಡೆ ಮಾಡುವುದರ ಜೊತೆಗೆ ರಾಜ್ಯ ಸರ್ಕಾರದಿಂದ ಆದೇಶ ಪತ್ರವನ್ನು ನೀಡಲಾಗುವುದು. ಈಗಾಗಲೇ ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗಕ್ಕೆ ಸರ್ವೆ ಕಾರ್ಯ ನಡೆದಿದೆ. ಆದರೂ ಚಿಕ್ಕಮಗಳೂರು-ಬೇಲೂರು-ಹಾಸನ ರೈಲ್ವೆ ಮಾರ್ಗ ನಿರ್ಮಿಸುವ ಮೂಲಕ ರಾಜಧಾನಿ ಬೆಂಗಳೂರಿಗೆ ಸುಲಭ ಸಂಚಾರ ಮಾಡಬೇಕು ಎಂಬ ಕಾರಣದಿಂದಲೇ ಸದ್ಯ ಕೇಂದ್ರ ರೈಲ್ವೆ ಮಂತ್ರಿಗಳಲ್ಲಿ ಮಾತನಾಡಿದ್ದು, ಈ ಯೋಜನೆಗೆ ಕೇಂದ್ರ ರೈಲ್ವೆ ಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಅತೀ ಶೀಘ್ರದಲ್ಲಿಯೇ ಈ ರೈಲ್ವೆ ಯೋಜನೆಗೆ ಅಡಿಗಲ್ಲನ್ನು ಹಾಕಲಾಗುತ್ತದೆ ಎಂದರು.

ಬೇಲೂರು ಪಟ್ಟಣದಲ್ಲಿ ಎಂಜಿನಿಯರ್ ಕಾಲೇಜು ತೆರೆಯಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಚರ್ಚೆ ನಡೆಸಲಾಗಿದೆ. ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದ ಅವರು ವಿಮಾನನಿಲ್ದಾಣದ ಬಗ್ಗೆ ಕೆಲ ರಾಜಕೀಯ ಮುಖಂಡರು ಇಲ್ಲ-ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ, ಅವರ ಕಾಲದಲ್ಲಿ ಏನು ಕೆಲಸ ಆಗಿದೆ ಎಂಬ ಬಗ್ಗೆ ಉತ್ತರ ನೀಡಬೇಕು. ವಿಮಾನನಿಲ್ದಾಣದ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು ಎಂದು ಪರೋಕ್ಷವಾಗಿ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

See also  ಮಂಡ್ಯದಲ್ಲಿ ಸಂಸದ, ಶಾಸಕರು ರಾಜೀನಾಮೆಗೆ ನಿರ್ಧಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು