News Kannada
Sunday, October 02 2022

ಕರ್ನಾಟಕ

ಮಹಿಳಾ ಗೋಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂತಿರುಗುತ್ತಿದ್ದ ವಾಹನಗಳ ಮೇಲೆ ಕಲ್ಲೆಸೆತ - 1 min read

Photo Credit :

ಮಹಿಳಾ ಗೋಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂತಿರುಗುತ್ತಿದ್ದ ವಾಹನಗಳ ಮೇಲೆ ಕಲ್ಲೆಸೆತ

ಕಾಸರಗೋಡು: ಮಂಗಳವಾರ ಸಂಜೆ ನಡೆದ ಮಹಿಳಾ ಗೋಡೆಯಲ್ಲಿ ಪಾಲ್ಗೊಂಡು ತೆರಳುತ್ತಿದ್ದ ಬಸ್, ವಾಹನಗಳ ಮೇಲೆ ಕಲ್ಲೆಸೆದ ಘಟನೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಈ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಕೃತ್ಯದ ಹಿಂದೆ ಬಿಜೆಪಿ-ಸಂಘ ಪರಿವಾರ ಕಾರ್ಯಕರ್ತರು ಕೈವಾಡ ಆರೋಪಿಸಲಾದ ಕಾಸರಗೋಡಿನಿಂದ ಅಂಗಡಿಮೊಗರಿಗೆ ತೆರಳುತ್ತಿದ್ದ ಬಸ್ಸಿನ ಮೇಲೆ ಕುದ್ರೆಪ್ಪಾಡಿಯಲ್ಲಿ ಕಲ್ಲೆಸೆದ ಪರಿಣಾಮ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ. ಪುತ್ತಿಗೆ ಕಂದಾಲ್ ನ ಅವ್ವಾಬಿ (35), ಪುತ್ತಿಗೆಯ ಸರಸ್ವತಿ ಅವರನ್ನು ಮಂಗಳೂರು ಹಾಗೂ ಪುತ್ತಿಗೆಯ ಬಿಂದು (36), ಪೆರ್ಲಡ್ಕದ ಪಿ.ಎಂ. ಅಬ್ಬಾಸ್(45) ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರಸ್ವತಿ ಮತ್ತು ಅವ್ವಾಬಿಯವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಚೇಟುಕುಂಡುವಿನಲ್ಲಿ ಮಹಿಳಾ ಗೋಡೆ ಕಾರ್ಯಕ್ರಮವನ್ನು ವಿಫಲಗೊಳಿಸುವ ಯತ್ನ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಕಲ್ಲೆಸೆತದಿಂದ ಪೊಲೀಸರು, ಬಿಜೆಪಿ-ಸಿಪಿಎಂ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಚೇಟುಕುಂಡುವಿನಲ್ಲಿ ಮಹಿಳಾ ಗೋಡೆ ಹಾದುಹೋಗುವ ರಸ್ತೆ ಬದಿಯ ಹುಲ್ಲು, ಪೊದೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ದಟ್ಟಹೊಗೆಯು ಆವರಿಸಿತ್ತು. ಮಹಿಳಾ ಗೋಡೆಗೆ ಆಗಮಿಸಿದ್ದವರ ಮೇಲೆ ಕಲ್ಲೆಸೆಯಲಾಗಿದ್ದು, ಈ ಸಂದರ್ಭದಲ್ಲಿ ಸಿಪಿಎಂ-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಹಿಂಸಾಚಾರ ನಡೆಯಿತು. ಸ್ಥಳಕ್ಕೆ ತಲಪಿದ ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ವರದಿಗಾರರ ಮೇಲೂ ಹಲ್ಲೆ ನಡೆಸಿದ್ದು, ಎರಡು ಖಾಸಗಿ ವಾಹಿನಿಗಳ ಕ್ಯಾಮರಾಗಳನ್ನು ಹುಡಿ ಮಾಡಲಾಗಿದೆ. ಅಹಿತಕರ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ 200ರಷ್ಟು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಮಾಜಿ ಸಂಸದೆ ರಮ್ಯಾಗೆ ಆಟಿಕೆಗಳೊಂದಿಗೆ ಬಾಗಿನ ರವಾನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು