ಕಾರವಾರ: ಕೂರ್ಮಗಡ ದ್ವೀಪದಲ್ಲಿನ ಜಾತ್ರೆಗೆ ತೆರಳಿದ್ದ ಪಾತಿ ದೋಣಿ ಮುಳುಗಿದ ಪರಿಣಾಮ ಎಂಟಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಇನ್ನೂ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.
ಕಾಳಿ ನದಿ ಸಮುದ್ರದ ಸೇರುವ ಸಂಗಮದಲ್ಲಿ ಸೋಮವಾರ ಘಟನೆ ಸಂಭವಿಸಿದ್ದು ದೋಣಿಯಲ್ಲಿ 30 ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದರು. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ದೇವಬಾಗ್ ಅಡ್ವೇಂಚರ್ ಬೋಟಿಂಗ್ ಸೆಂಟರ್ಗೆ ಸೇರಿದ ದೋಣಿ ಇದಾಗಿದೆ. ಕೂರ್ಮಗಡ ದ್ವೀಪದಲ್ಲಿ ನಡೆಯುತ್ತಿದ್ದ ಜಾತ್ರೆಗೆ ಹೋದ ಭಕ್ತರು ಮರಳಿ ಬರುತ್ತಿರುವಾಗ ಈ ಘಟನೆ ನಡೆದಿದೆ.
ದೋಣಿ ಮುಳುಗಿದ ದೃಶ್ಯ ನೋಡಿದ ಮೀನುಗಾರಿಕೆ ಬೋಟ್ ಮತ್ತು ಕರಾವಳಿ ಕಾವಲು ಪಡೆ ಕೂಡಲೇ ಸ್ಥಳಕ್ಕೆ ಧಾವಿಸಿ ಅಪಾಯದಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ.
ಜಾತ್ರೆಗೆ ಹೋಗುತ್ತಿರುವ ಸಂದರ್ಭ ದಲ್ಲಿ ಈ ದುರ್ಘಟನೆ ನಡೆದಿದೆ. ದೋಣಿ ಹೋಗುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಕ್ಕಿ ದೋಣಿ ಸಮುದ್ರದಲ್ಲಿ ಮುಗುಚಿದ್ದರಿಂದ ಈ ಘಟನೆ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.