News Kannada
Wednesday, November 30 2022

ಕರ್ನಾಟಕ

ದಾಂಡೇಲಿಯಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬ - 1 min read

Photo Credit :

ದಾಂಡೇಲಿಯಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬ

ಕಾರವಾರ:ಅರಣ್ಯದ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಬಹು ಹಂತದ ಬೆಳೆ ಯೋಜನೆ (ಮಲ್ಟಿ ಸ್ಟೇಜ್ ಕ್ರಾಪ್)  ಜಾರಿಗೊಳಿಸುವುದಾಗಿ ಅರಣ್ಯ ಸಚಿವ ಸತೀಶ್ ಜಾರಕಿ ಹೊಳಿ ತಿಳಿಸಿದ್ದಾರೆ.

ಕೆನರಾ ವೃತ್ತ ಅರಣ್ಯ ಇಲಾಖೆ ದಾಂಡೇಲಿಯಲ್ಲಿ ಇಂದಿನಿಂದ ಆಯೋಜಿಸಲಾದ ಎರಡು ದಿನಗಳ ಹಾರ್ನಬಿಲ್ ಹಕ್ಕಿ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ಮಲ್ಟಿ ಸ್ಟೇಜ್ ಕ್ರಾಪ್ ಯೋಜನೆಯಿಂದ ಅರಣ್ಯದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಹೂ, ಹಣ್ಣು ಕಾಯಿಗಳ ಆಹಾರ ಒದಗಿಸಿದಂತಾಗುತ್ತದೆ. ಅಲ್ಲದ ಅರಣ್ಯ ಸಸಿಗಳ ಬೆಳವಣಿಗೆಗೂ ಇದು ಅನುಕೂಲವಾಗಲಿದೆ ಎಂದರು.  

ಅಲ್ಲದೆ, ಅರಣ್ಯ ಸಂಪತ್ತನ್ನು ಹೆಚ್ಚಿಸುವ ಹಾಗೂ ಸಂರಕ್ಷಿಸುವ ದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಅರಣ್ಯಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.

ಪ್ರತಿ ಜಿಲ್ಲೆಗೂ ಒಂದು ಪ್ರಾಣಿ ಸಂಗ್ರಹಾಲಯ ಸ್ಥಾಪಿಸುವ ಚಿಂತನೆ ಇದ್ದು ಶೀಘ್ರವೆ ಈ ಯೋಜನೆಗೆ ಚಾಲನೆ ನೀಡಲಾಗುವುದು. ಬೆಳಗಾವಿ ಜಿಲ್ಲೆಯಲ್ಲಿ 50 ಕೋಟಿ ರೂ. ವೆಚ್ಚದ ಯೋಜನೆಗೆ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಅಲ್ಲದೆ ಘಟಪ್ರಭ ಹಿನ್ನೀರು ಭಾಗ ಹಾಗೂ ಆಲಮಟ್ಟಿಯಲ್ಲಿ ಎರಡು ಪಕ್ಷಿಧಾಮ ಸ್ಥಾಪಿಸುವ ಉದ್ದೇಶವಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 8ಲಕ್ಷ ಚದರ ಕಿಲೋಮೀಟರ್ ಅರಣ್ಯ ಪ್ರದೇಶ ಇರುವುದು ಸಂತೋಷದ ವಿಷಯ, ಈ ಭಾಗದ ಅರಣ್ಯ ಹಕ್ಕು ಸಂಬಂಧಿಸಿದ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಹಾರ್ನಬಿಲ್ ಹಕ್ಕಿ ಹಬ್ಬವನ್ನು ಈವರೆಗೆ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಆಚರಿಸಲಾಗುತ್ತಿದ್ದು ಇನ್ನುಮುಂದೆ ಅರಣ್ಯ ಇಲಾಖೆಯ ಅನುದಾನದಲ್ಲೇ ಆಚರಿಸುವುದು ಸೂಕ್ತ ಎಂದರು.

ಈ ಸಲುವಾಗಿ ಪ್ರತಿ ವರ್ಷ ಪ್ರತ್ಯೇಕ ಬಜೆಟ್ ಮೀಸಲಿಡಬೇಕು. ಈ ಮೂಲಕ ನಶಿಸುತ್ತಿರುವ ಹಾರ್ನಬಿಲ್ ಸಂತತಿಯನ್ನು ರಕ್ಷಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಕ್ಷಿ ತಜ್ಞ ಕೃಪಾಕರ ಸೇನಾನಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಘೋಟ್ನೇಕರ್ ಮಾತನಾಡಿ, ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಅತ್ಯಾಧುನಿಕ ಆಯುಧಗಳನ್ನು ಒದಗಿಸಬೇಕಿದೆ ಎಂದರು.

ಅತಿ ಹೆಚ್ಚು ನೈಸರ್ಗಿಕ ಕಾಡು ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಈ ಭಾಗದ ಜನರಿಂದಲೇ ಕಾಡು ಸಂರಕ್ಷಣೆ ಆಗಿದೆ. ಜನರಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿದೆ. ಅರಣ್ಯ ಭಾಗದ ಪಾರಂಪರಿಕ ಅರಣ್ಯವಾಸಿಗಳಿಗೆ ಶೀಘ್ರ ಹಕ್ಕುಪತ್ರಗಳು ಸಿಗುವಂತಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಅಶೋಕ ಬಾಸರಕೋಡು ಮಾತನಾಡಿ, ದೇಶದಲ್ಲಿರುವ ಒಂಬತ್ತು ಹಾರ್ನಬಿಲ್ ಪ್ರಭೇದಗಳಲ್ಲಿ ನಾಲ್ಕು ಪ್ರಭೇದಗಳು ದಾಂಡೇಲಿ ಭಾಗದ ಪ್ರದೇಶದಲ್ಲಿರುವುದು ಕರ್ನಾಟಕದ ಹೆಮ್ಮೆ. 2011ರಲ್ಲಿ ಸರ್ಕಾರ ಈ ಭಾಗವನ್ನು ಹಾರ್ನಬಿಲ್ ಸಂರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ. ಹಾರ್ನ್ ಬಿಲ್ ಹಕ್ಕಿ ಹಬ್ಬ ಅಂಗವಾಗಿ ಜಾಗೃತಿ ಜಾಥಾ, ಚಿತ್ರ ರಚನಾ ಶಿಬಿರ, ಪಕ್ಷಿ ವೀಕ್ಷಣೆ, ಸೈಕಲ್ ಜಾಥಾ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

See also  ಬಸ್ ಮುಷ್ಕರ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಿಕೆ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣ ಅಧಿಕಾರಿ ಪುನಾಟಿ ಶ್ರೀಧರ್ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ಪಾಟೀಲ್ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್ ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು