ಕಾಸರಗೋಡು: ಹೊಳೆಗೆ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರುಪಾಲು ಕಾಸರಗೋಡು : ಸಹಪಾಠಿಗಳ ಜೊತೆ ಹೊಳೆಗೆ ಸ್ನಾನಕ್ಕಿಳಿದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಆದಿತ್ಯವಾರ ಅಡೂರು ಸಮೀಪದ ಪಯಸ್ವಿನಿ ಹೊಳೆ ಯಲ್ಲಿ ನಡೆದಿದೆ.
ಅಡೂರು ಬಾಬಯ್ಯಮೂಲೆಯ ಜನಾರ್ಧನ ರವರ ಪುತ್ರ ಸ್ವರ್ಣಜಿತ್ (೧೪) ಮೃತಪಟ್ಟ ವಿದ್ಯಾರ್ಥಿ.
ಅಡೂರು ಸರಕಾರಿ ಹೈಸ್ಕೂಲಿನ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದನು. ಜೊತೆಗಿದ್ದವರು ಬೊಬ್ಬೆ ಹಾಕಿ ಸ್ಥಳೀಯರು ಧಾವಿಸಿ ಬಂದು ಮೇಲೆಕ್ಕೆತ್ತಿದರೂ ಆಗಲೇ ಮೃತಪಟ್ಟಿದ್ದನು .ಆದೂರು ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ