News Kannada
Tuesday, February 07 2023

ಕರ್ನಾಟಕ

ಚುನಾವಣಾ ನೀತಿ ಸಂಹಿತೆ ಸಹಾಯವಾಣಿ ಕೊಠಡಿಗೆ ಮಹಿಳೆಯರ ಸಾರಥ್ಯ

Photo Credit :

ಚುನಾವಣಾ ನೀತಿ ಸಂಹಿತೆ ಸಹಾಯವಾಣಿ ಕೊಠಡಿಗೆ ಮಹಿಳೆಯರ ಸಾರಥ್ಯ

ಕಾಸರಗೋಡು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಹಿತ ದೂರುಗಳನ್ನು, ಮತದಾರರ ಸಹಾಯವಾಣಿ ಇತ್ಯಾದಿಗಳನ್ನು ನಿಯಂತ್ರಿಸುವ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಈ ನಿಯಂತ್ರಣ ಕೊಠಡಿ ಕಿರಿಯ ವರಿಷ್ಠಾಧಿಕಾರಿಗಳಾದ ಇಬ್ಬರು ಮಹಿಳೆಯರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ. ರಾಜ್ಯದಲ್ಲಿ ಮಹಿಳೆಯರೇ ನೇತೃತ್ವ ನೀಡುತ್ತಿರುವ ಏಕೈಕ ನಿಯಂತ್ರಣ ಕೊಠಡಿ ಇದಾಗಿದೆ.

ಕಿರಿಯ ವರಿಷ್ಠಾಧಿಕಾರಿಗಳಾದ ಸಿ.ಜಿ.ಶ್ಯಾಮಲಾ, ಇಂದು ಎಂ.ದಾಸ್ ಎಂಬವರನ್ನು ನೋಡೆಲ್ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇಮಕಗೊಳಿಸಿದ್ದಾರೆ. ಗುಮಾಸ್ತರಾದ ಷೀಜಾ ಎ., ನಮಿತಾ ಎ., ಸಜೀತಾ ಪಿ.ಎ. ಎಂಬವರು ಈ ಕೊಠಡಿಯಲ್ಲಿ ಸಕ್ರಿಯರಾಗಿದ್ದಾರೆ.

ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದ ಸಂಬಂಧ ದೂರು ಸ್ವೀಕರಿಸುವ ಸಿ-ವಿಜಿಲ್(ಸಿಟಿಝನ್ ವಿಜಿಲ್) ಆಪ್ಲಿಕೇಷನ್, 04994-255825, 04994-255676 ಎಂಬ ನಂಬರ್ ಗಳಿಗೆ ಲಭಿಸುವ ದೂರುಗಳು, ಮತದಾರರ ಸಹಾಯವಾಣಿಯಾಗಿರುವ “1950” ಎಂಬ ನಂಬ್ರಕ್ಕೆ ಬರುವ ಸಾರ್ವಜನಿಕ ಸಂಶಯಗಳು ಇತ್ಯಾದಿಗಳ ಪರಿಹಾರ ಉದ್ದೇಶದಿಂದ ಈ ನಿಯಂತ್ರಣ ಕೊಠಡಿ ಚಟುವಟಿಕೆ ನಡೆಸುತ್ತಿದೆ.

ಸಿ-ವಿಜಿಲ್ ಆ್ಯಪ್ ನಲ್ಲಿ ಈ ವರೆಗೆ 32 ದೂರುಗಳು ಲಭಿಸಿವೆ. ಅವುಗಳಿಗೆ ಪರಿಹಾರ ಲಭಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಾಪಿಸಲಾದ ಭಿತ್ತಪತ್ರ, ಬ್ಯಾನರ್, ಪತಾಕೆಗಳು ಇತ್ಯಾದಿ ಸಂಬಂಧ ದೂರುಗಳು ಸಿ-ವಿಜಿಲ್ ನಲ್ಲಿ ಅಧಿಕವಾಗಿ ಲಭಿಸಿವೆ. ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಮೊಬೈಲ್ ಫೋನ್ ಕ್ಯಾಮರಾದಲ್ಲಿ ಫೋಟೊ ಯಾ ವೀಡಿಯೋ ಚಿತ್ರೀಕರಿಸಿ ಸಿ-ವಿಜಿಲ್ ಗೆ ಕಳುಹಿಸಿದರೆ, ಆ ಮೂಲಕ ಜಿಲ್ಲಾ ಚುನಾವಣೆ ಕೇಂದ್ರಕ್ಕೆ ರವಾನಿಸಲಾಗುತ್ತದೆ. ತಕ್ಷಣ ಸ್ಕ್ವಾಡ್ ಪ್ರದೇಶಕ್ಕೆ ತಲುಪಿ ಕ್ರಮ ಕೈಗೊಳ್ಳುತ್ತದೆ. ದೂರು ಆ್ಯಪ್ ಲೋಡ್ ನಡೆಸಿದ ತಕ್ಷಣ ಯೂನಿಕ್ ಐಡಿಯೊಂದು ಲಭಿಸುತ್ತದೆ. ಈ ಮೂಲಕ ದೂರಿನ ಫಾಲೋಅಪ್ ಮೊಬೈಲ್ ನಲ್ಲೇ ಟ್ರ್ಯಾಕ್ ನಡೆಸಬಹುದಾಗಿದೆ. ಒಬ್ಬರಿಗೆ ಒಂದಕ್ಕಿಂತ ಅಧಿಕ ದೂರುಗಳನ್ನು ದಾಖಲಿಸಬಹುದು ಎಂಬುದು ಈ ಸೌಲಭ್ಯದ ವಿಶೇಷತೆಯಾಗಿದೆ. ದೂರುದಾತನ ಮಾಹಿತಿಗಳನ್ನು ಗುಪ್ತವಾಗಿರಿಸಲಾಗುವುದು.

ಮೊಬೈಲ್ ಫೋನ್ ನಲ್ಲಿ ಬಹಳ ಸುಲಭವಾಗಿ ಬಳಸಬಹುದಾದ ರೀತಿ ಆ್ಯಪ್ ರಚಿಸಲಾಗಿದೆ. ನೀತಿಸಂಹಿತೆ ಉಲ್ಲಂಘನೆ ನಡೆದಿರುವ ಪ್ರದೇಶಗಳಲ್ಲಿ ನೇರವಾಗಿ ತೆರಳಿ ಚಿತ್ರ ಪಡೆದರೆ ಮಾತ್ರ ಆ್ಯಪ್ ಮೂಲಕ ರವಾನಿಸಬಹುದಾಗಿದೆ. ಇತರರು ಪಡೆದ ಚಿತ್ರ ಪಡೆದು ಅಪ್ ಲೋಡ್ ನಡೆಸಲು ಸಾಧ್ಯವಿಲ್ಲ. ಈ ಮೂಲಕ ಹುಸಿ ದೂರುಗಳನ್ನು ದಾಖಲಿಸಲು ಸಾಧ್ಯವಿಲ್ಲ. ನಿರಂತರ 5 ನಿಮಿಷಗೋ ಕಾಲ ಮಾತ್ರ ಈ ಆ್ಯಪ್ ಚಟುವಟಿಕೆ ನಡೆಸುತ್ತದೆ. ಮತ್ತೆ ಆ್ಯಪ್ ತೆರೆದು ದೂರು 5 ನಿಮಿಷಗಳ ಅವಧಿಯಲ್ಲಿ ಸೀಮಿತಗೊಳಿಸಿ ರವಾನಿಸಬೇಕಾಗುತ್ತದೆ. ಸಿ-ವಿಜಿಲ್ ಆ್ಯಪ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ: www.ceo.kerala.gov.in/home.html

ಇತರ ರೂಪದ ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ 04994-255825, 04994-255676 ಎಂಬ ನಂಬರ್ ಗಳಲ್ಲಿ ನೀಡಬಹುದು. ಈ ದೂರುಗಳಿಗೂ ತಕ್ಷಣ ಪರಿಹಾರ ಲಭಿಸಲಿದೆ. ಮತದಾರರ ಸಹಾಯವಾಣಿ 1950 ನಂಬ್ರಕ್ಕೆ ಈಗಾಗಲೇ 175 ದೂರುಗಳು ಲಭಿಸಿವೆ. ಆನಿವಾಸಿ ಭಾರತೀಯರ ಮತದಾನ, ಗುರುತುಚೀಟಿ ಪಡೆಯುವಿಕೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ಈ ನಿಯಂತ್ರಣ ಕೊಠಡಿಯ ಸದಸ್ಯೆಯರು ತಾಳ್ಮೆಯಿಂದ ವ್ಯವಹರಿಸುತ್ತಾರೆ.

See also  ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಐವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು