ಶಿವಮೊಗ್ಗ: ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರ ಸಂಬಂಧಿ ಡಿ.ಟಿ.ಪರಮೇಶ್ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ವೇಳೆ 6 ಕೋಟಿ 23 ಲಕ್ಷ ಹಣ ಪತ್ತೆಯಾಗಿದೆ.
ನಿನ್ನೆ ತಡರಾತ್ರಿ ಬಹಿರಂಗವಾಗಿರುವಂತಹ ಲೆಕ್ಕದ ಪ್ರಕಾರ ಸುಮಾರು 23 ಲಕ್ಷ ಹಣ ಪತ್ತೆಯಾಗಿದೆ. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಡಿ.ಟಿ. ಪರಮೇಶ್ ಅವರು ಶೃತಿ ಮೋಟಾರ್ಸ್ ನ ಮಾಲಕರಾಗಿದ್ದಾರೆ. ಮಾರ್ಚ್ 28ರಂದು ಶಿವಮೊಗ್ಗದಲ್ಲಿ ಪರಮೇಶ್ ನಿವಾಸ ಮತ್ತು ಶೃತಿ ಮೋಟಾರ್ಸ್ ಮೇಲೆ ಐಟಿ ದಾಳಿ ನಡೆದಿತ್ತು. ಆದರೆ ಏನೂ ಪತ್ತೆಯಾಗಿರಲಿಲ್ಲ.
ಪರಮೇಶ್ ಗೆ ಸಂಬಂಧಿಸಿದ ಲಾಕರ್ ಪತ್ತೆ ಮಾಡಿದ ಐಟಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆ ಮುಂದುವರಿಸಿದ್ದರು. ಈ ಒಂದು ಲಾಕರ್ ನಲ್ಲಿ ನಾಲ್ಕು ಕೋಟಿ, ಮತ್ತೊಂದರಲ್ಲಿ 2 ಕೋಟಿ ಪತ್ತೆಯಾಗಿದೆ. ಎಲ್ಲವೂ 2 ಸಾವಿರ ಹಾಗೂ 500 ರೂ. ಮುಖಬೆಲೆಯ ನೋಟುಗಳಾಗಿವೆ.