News Kannada
Thursday, February 09 2023

ಕರ್ನಾಟಕ

ಮಾದೇಗೌಡ್ರು ಎಲೆಕ್ಷನ್‍ಗೆ ದುಡ್ ಕೇಳಿದ ಆಡಿಯೋ ವೈರಲ್

Photo Credit :

ಮಾದೇಗೌಡ್ರು ಎಲೆಕ್ಷನ್‍ಗೆ ದುಡ್ ಕೇಳಿದ ಆಡಿಯೋ ವೈರಲ್

ಮಂಡ್ಯ: ಮಂಡ್ಯ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜತೆಗೆ ಸಿಎಂ ಕುಮಾರಸ್ವಾಮಿ ಅವರು ತಮ್ಮ ಮಗನ ಗೆಲುವಿಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳು ಇವೆ. ಈ ನಡುವೆ ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಸಚಿವ ಪುಟ್ಟರಾಜು ಅವರನ್ನು ಹಣ ಕೇಳಿದರು ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದ್ದು ಈಗ ಅದೇ ಸುದ್ದಿ ಕ್ಷೇತ್ರದಾದ್ಯಂತ ಮನೆಮಾತಾಗಿದೆ. ಇಷ್ಟಕ್ಕೂ ಆ ಆಡಿಯೋದಲ್ಲಿ ಏನಿದೆ ಎಂಬುದು ಇಲ್ಲಿದೆ.

ಜಿ.ಮಾದೇಗೌಡ: ಪುಟ್ಟರಾಜು ಸಾಹೇಬ್ರೆ?

ಸಿ.ಎಸ್.ಪುಟ್ಟರಾಜು: ಓ ಅಪ್ಪಾಜಿ, ನಮಸ್ಕಾರ ಅಪ್ಪಾಜಿ…

ಜಿ.ಮಾದೇಗೌಡ: ಯಾಕೆ ನಮ್ಮ ಫೋನ್ ಎತ್ತುತ್ತಿಲ್ಲವಲ್ಲ ನೀವು?

ಸಿ.ಎಸ್.ಪುಟ್ಟರಾಜು: ಏ ಇಲ್ಲ ಇಲ್ಲ ಅಪ್ಪಾಜಿ, ರಾತ್ರೆ ಅದೆಲ್ಲೋ ಫಂಕ್ಷÀನ್‍ಗೆ ಸಿಕಾಗಿಬುಟ್ಟಿದೆ.

ಜಿ.ಮಾದೇಗೌಡ: ಹೂಂ.

ಸಿ.ಎಸ್.ಪುಟ್ಟರಾಜು: ಹತ್ತೂವರೆಗೆ ನೋಡಿದೆ, ಅಮೇಲೆ ಮಾಡೋಣ ಅಂತ ಟ್ರೈ ಮಾಡಿದೆ, ಈಗ ತಿರಗಾ ಬೆಳಗ್ಗೆಯಿಂದ ಟ್ರೈ ಮಾಡಿದೆ ಸಿಗಲಿಲ್ಲ.

ಜಿ.ಮಾದೇಗೌಡ: ಈಗ..?

ಸಿ.ಎಸ್.ಪುಟ್ಟರಾಜು: ಅಪ್ಪಾಜಿ..

ಜಿ.ಮಾದೇಗೌಡ: ಈಗ ಎಲೆಕ್ಷಷÀನ್ ಬತ್ತಾದೆ..

ಸಿ.ಎಸ್.ಪುಟ್ಟರಾಜು: ಅಪ್ಪಾಜಿ…

ಜಿ.ಮಾದೇಗೌಡ: ಈಗ ಜನ ದುಡ್ ಕೇಳ್ತಾರೆ ದುಡ್ಡನ್ನ..

ಸಿ.ಎಸ್.ಪುಟ್ಟರಾಜು: ಅದೆ, ಸರಿ ಅಪ್ಪಾಜಿ..

ಜಿ.ಮಾದೇಗೌಡ: ಈಗ ಮಧುಗೇಳಿದ್ದೀನಿ, ನನ್ನ ಮಗನಿಗೆ..

ಸಿ.ಎಸ್.ಪುಟ್ಟರಾಜು: ಸರಿ ಅಪ್ಪಾಜಿ..

ಜಿ.ಮಾದೇಗೌಡ: ಎಲ್ಲ ದುಡ್ ಕೇಳ್ತಾರೆ..

ಸಿ.ಎಸ್‍ಪುಟ್ಟರಾಜು: ಎಲ್ಲ ಎಲ್ಲ ಅರೆಂಜï ಮಾಡ್ತಿದೀನಿ ಅಪ್ಪಾಜಿ ಮಾಡ್ತಿನಿ..

ಜಿ.ಮಾದೇಗೌಡ: ಬೇಗ ಬೇಗ, ಚೀಪ್ ಮಿನಿಸ್ಟರ್ ಗೂ ಹೇಳಿ..

ಸಿ.ಎಸ್.ಪುಟ್ಟರಾಜು: ಈಗ್ಲೆ ಹೇಳ್ತಿನಿ ಅಪ್ಪಾಜಿ..

ಜಿ.ಮಾದೇಗೌಡ: ತಮ್ಮಣ್ಣ.., ನಿಮಗೆ ಗೊತ್ತಲ್ಲ? ತಮ್ಮಣ್ಣಂದೆ ಒಂದು ಗುಂಪದೆ, ನಮ್ಮದೆ ಒಂದು ಗುಂಪದೆ.

ಸಿ.ಎಸ್.ಪುಟ್ಟರಾಜು: ಆಂ ನಾನ್ ಮಾಡಿಸ್ತಿನಿ ಅಪ್ಪಾಜಿ, ಮಾಡಿಸ್ತಿನಿ.

ಜಿ.ಮಾದೇಗೌಡ: ಅವನಾಗ್ಲೆ ದುಡ್ ಕೊಟ್ಟು ಕರ್ಕಂಡೋಯ್ತನೆ, ನಮ್ಮೊರೆಲ್ಲ ದುಡ್ ಕೇಳ್ತಾವ್ರೆ.

ಸಿ.ಎಸ್.ಪುಟ್ಟರಾಜು: ಮಾಡಿಸ್ತಿನಿ, ಮಾಡಿಸ್ತಿನಿ ಅಪ್ಪಾಜಿ.

ಜಿ.ಮಾದೇಗೌಡ: ನಾನು ಓಡಾಡಲು ಆಗುದಿಲ್ಲ, ನನ್ನ ಮಗನಿಗೆ ಹೇಳಿದ್ದೀನಿ, ಓಡಾಡು ಅಂತ.

ಸಿ.ಎಸ್.ಪುಟ್ಟರಾಜು: ಸರಿ ಅಪ್ಪಾಜಿ.

ಜಿ.ಮಾದೇಗೌಡ: ಅವನು ಓಡಾಡ್ತನೆ, ದುಡ್ ಕೇಳ್ತವರೆ, ಅವನಿಗೊಂದಷ್ಟು ದುಡ್ ಕೊಟ್ಬುಡು.

ಸಿ.ಎಸ್.ಪುಟ್ಟರಾಜು: ಮಾಡಿಸ್ತಿವಿ ಅಪ್ಪಾಜಿ.

ಜಿ.ಮಾದೇಗೌಡ: ದಯವಿಟ್ಟು ಸ್ವಲ್ಪ ಬೇಗ ಮಾಡಿಕೊಡಬೇಕು ದಯವಿಟ್ಟು.

ಸಿ.ಎಸ್.ಪುಟ್ಟರಾಜು: ಆಯ್ತಾಯ್ತು ಅಪ್ಪಾಜಿ.

ಜಿ.ಮಾದೇಗೌಡ: ಈಗ ಹೋಯ್ತವ್ನೆ, ಕ್ಯಾನ್ವಸ್‍ಗೆ ಅವನು.

ಸಿ.ಎಸ್.ಪುಟ್ಟರಾಜು: ಸರಿ ಅಪ್ಪಾಜಿ.

ಜಿ.ಮಾದೇಗೌಡ: ಆಮೇಲೆ ನೀವು ಒಂದಿಸ ಬಂದೋಗಿ..

ಸಿ.ಎಸ್.ಪುಟ್ಟರಾಜು: ನಾನ್ ಬರ್ತಿನಿ ಅಪ್ಪಾಜಿ ಬತ್ತಿನಿ. ಅರೆಂಜï ಮಾಡ್ತೀನಿ ಈಗ..

ಜಿ.ಮಾದೇಗೌಡ: ಒಂದ್ ಫಂಕ್ಷನ್ ಮಾಡ್ತಿವಿ ಅಲ್ಲಿ ಮದ್ದೂರಲ್ಲಿ. ದಯವಿಟ್ಟು ಬಂದ್ ಹೋಗಬೇಕು.

ಸಿ.ಎಸ್.ಪುಟ್ಟರಾಜು: ಓಕೆ ಓಕೆ ಅಪ್ಪಾಜಿ.

ಜಿ.ಮಾದೇಗೌಡ: ನೀವು ತಕ್ಷÀಣ ಮಾಡಿ, ಟೈಮಿಲ್ಲ. ಅದ್ಯಾರು ಹೇಳಿ, ನಾನೇ ಹೇಳ್ತಿನಿ..

ಸಿ.ಎಸ್.ಪುಟ್ಟರಾಜು: ನಾನಲ್ಲೆ, ನಾನಲ್ಲೆ, ಮಿಡ್ಲಲ್ಲೆ ಅರೆಂಜï ಮಾಡಿ ನಿಮಗೆ ಫೋನ್ ಮಾಡ್ತಿನಿ ಅಪ್ಪಾಜಿ ಈಗ…

See also  ಅನುಮತಿ ಪಡೆಯದೆ ರಾಲಿ: ಬಂಧನಕ್ಕೊಳಗಾದ ಬಿಜೆಪಿ ಕಾರ್ಯಕರ್ತರ ಬಿಡುಗಡೆ

ಜಿ.ಮಾದೇಗೌಡ: ಅಲ್ಲಲ್ಲಾ ಅವರು ಕೊಡ್ತರಲ್ಲಾ ದುಡ್ಡುನ್ನ ಎಲ್ರುಗುವೆ, ಅವರು ಯಾರು ಹೇಳಿ? ನಾನೇ ಹೇಳ್ತಿನಿ ಅವ್ರಗೆ.

ಸಿ.ಎಸ್.ಪುಟ್ಟರಾಜು: ನಾನೇಳ್ತಿನಿ, ನಾನು ಅರೆಂಜ್ ಮಾಡಿಸ್ತಿನಿ ಬಿಡಿ ಈಗ.

ಜಿ.ಮಾದೇಗೌಡ: ದಯವಿಟ್ಟು ನಾಳೆ, ನಾಳಿದ್ರಲ್ಲಿ ಮಾಡಪ್ಪ…

ಸಿ.ಎಸ್.ಪುಟ್ಟರಾಜು: ಆಯ್ತಪ್ಪಾಜಿ.

ಜಿ.ಮಾದೇಗೌಡ: ಪ್ಲೀಸ್ ಪ್ಲೀಸ್…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು