News Kannada
Monday, December 05 2022

ಕರ್ನಾಟಕ

ಮೋದಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ : ಸಿದ್ದರಾಮಯ್ಯ ವಾಗ್ಧಾಳಿ

Photo Credit :

ಮೋದಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ : ಸಿದ್ದರಾಮಯ್ಯ ವಾಗ್ಧಾಳಿ

ಮಡಿಕೇರಿ: ಕೇಂದ್ರದಲ್ಲಿ 5 ವರ್ಷ ಅಧಿಕಾರ ನಡೆಸಿದ ಬಿಜೆಪಿ ಮತ್ತೆ ಅಧಿಕಾರ ನೀಡಿ ಎಂದು ಮತ ಯಾಚಿಸುತ್ತಿದೆ. ಮತ ಕೇಳುವಾಗ ಏನು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನೈತಿಕತೆ ಕೂಡ ಪ್ರಧಾನಿ ಮೋದಿಯವರಿಗೆ ಇಲ್ಲದಾಗಿದೆ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

 ಕುಶಾಲನಗರದಲ್ಲಿ ನಡೆದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಷ್ಟುದಿನ ಸುಮ್ಮನಿದ್ದು, ಇದೀಗ ಹಸಿ ಸುಳ್ಳುಗಳನ್ನು ನೂರು ಬಾರಿ ಹೇಳುತ್ತಾ ಸುಳ್ಳುಗಳನ್ನೆ ಸತ್ಯವೆಂದು ಬಿಂಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಖರಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ತೆರಿಗೆ ರೂಪದÀಲ್ಲಿ ನೀಡುತ್ತಿರುವ ಹಣ, ಅನಿಲ್ ಅಂಬಾನಿ, ಅದಾನಿ, ಚೋಕ್ಸಿಯಂತಹವರ ಖಾತೆಗೆ ಹೋಗುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಈ ರೀತಿಯ ಎಲ್ಲಾ ಅವ್ಯವಹಾರಗಳನ್ನು ನಾವು ಅಧಿಕಾರಕ್ಕೆ ಬಂದರೆ ತಡೆಗಟ್ಟುತ್ತೇವೆ ಎಂದು ಭರವಸೆ ನೀಡಿದರು. ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿರಲಿದೆ ಎಂದರು.

          ಆರ್ಟಿಕಲ್ 33 ಕೈಬಿಡುವ ಬಗ್ಗೆ ಜನಸಂಘ ಹುಟ್ಟಿದಲ್ಲಿಂದ ಹೇಳಿಕೊಂಡು ಬಂದಿದ್ದಾರೆ. ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಇಟ್ಟಿಗೆ, ಕಬ್ಬಿಣ , ಹಣ ಸಂಗ್ರಹಿಸಿದರು. ಇವುಗಳೆಲ್ಲ ಎಲ್ಲಿ ಹೋದವು ಎಂದು ಸಿದ್ದರಾಮಯ್ಯ ಪ್ರಶ್ನಿಸಿ,  ಇದಕ್ಕೆ ಮೋದಿಯವರು ಉತ್ತರಿಸಲೇ ಬೇಕೆಂದು ಒತ್ತಾಯಿಸಿದರು.

          ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ,  ಕೊಡಗಿನ ಕಾಳು ಮೆಣಸು ಬೆಳೆಗಾರರ ಅಭಿವೃದ್ಧಿಗೆ ಮತ್ತು ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಎಷ್ಟು ಹಣ ಕೊಡಿಸಿದ್ದೀಯಪ್ಪ ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಬಿಟ್ಟರೆ ಹೆಚ್ಚು ಸುಳ್ಳು ಹೇಳಿದ ವ್ಯಕ್ತಿ ಎಂದರೆ ಅದು ಪ್ರತಾಪ ಸಿಂಹ ಎಂದು ಟೀಕಿಸಿದರು.

          ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ 3 ವರ್ಷ ಜೈಲಿನಲ್ಲಿದ್ದು, ಈಗ ಜಾಮೀನಿನ ಮೇಲೆ ಹೊರಗಿದ್ದಾರೆಂದು ಆರೋಪಿಸಿದ ಸಿದ್ದರಾಮಯ್ಯ, ಮೋದಿಯ 56 ಇಂಚಿನ ಎದೆ ಪೈಲ್ವಾನರ ಬಳಿಯೂ ಇರುತ್ತದೆಂದು ವ್ಯಂಗ್ಯವಾಡಿದರು. ಐವತ್ತಾರು ಇಂಚಿನ ಎದೆ ಇದ್ದರೆ ಸಾಕೇ ರೈತರು, ಬಡವರ ಪರ ಸ್ಪಂದಿಸುವ ಹೃದಯ ಇರಬೇಡವೇ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ದೇಶದ ಸಂವಿಧಾನವನ್ನು ನಾಶಮಾಡಿ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಬೇಕೆನ್ನುವ ಹುನ್ನಾರ ನಡೆಯುತ್ತಿದೆÀಯೆಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರುಗಳಾದ ಬಿ.ಎ.ಜೀವಿಜಯ, ಎಂ.ಸಿ. ನಾಣಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಜೆಡಿಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಪ್ರಮುಖರಾದ ಸಂಕೇತ್ ಪೂವಯ್ಯ, ಮನೋಜ್ ಬೋಪಯ್ಯ, ಕೆ.ಪಿ. ಚಂದ್ರಕಲಾ , ಮಿಟ್ಟು ಚಂಗಪ್ಪ, ಅರುಣ್ ಮಾಚಯ್ಯ, ಬ್ರಿಜೇಶ್ ಕಾಳಪ್ಪ, ಟಿ.ಪಿ.ರಮೇಶ್, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ವಿ.ಪಿ. ಶಶಿಧರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಫೋಟೋ :: ಸಿದ್ದರಾಮಯ್ಯ

See also  ವೇದಿಕೆ ಹತ್ತಿ  ಮೈಕ್ ಕಿತ್ತೆಸೆದು ಬಿಜೆಪಿ ಮುಖಂಡನಿಂದ ದಾಂಧಲೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು