News Kannada
Wednesday, November 30 2022

ಕರ್ನಾಟಕ

ಧಾನ್ ಫೌಂಡೇಷನ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ - 1 min read

Photo Credit :

ಧಾನ್ ಫೌಂಡೇಷನ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಮಳವಳ್ಳಿ: ತಮಿಳುನಾಡಿನ ಮಧುರೈ ಮೂಲದ ಧಾನ್ ಪೌಂಡೇಶನ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವಿಶ್ವೇಶ್ವರಯ್ಯ ಮಹಿಳಾ ಕಳಂಜಿ ಒಕ್ಕೂಟದ ಮಹಿಳೆಯರು ತಮ್ಮ ಒಕ್ಕೂಟವನ್ನು ಸದರಿ ಸಂಸ್ಥೆಯಿಂದ ವಿಮುಕ್ತಿಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಧಾನ್ ಫೌಂಡೇಷನ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿರುವ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಮಹಿಳೆಯರು, ಈ ಹಿಂದೆ ಒಕ್ಕೂಟದ ಕಚೇರಿ ಕಟ್ಟಡ ನಿರ್ಮಾಣಕ್ಕೆಂದು 11 ಗುಂಟೆ ಜಾಗ ಖರೀದಿ ಮಾಡಿದ್ದು, ಆದರೆ ಕೆಲವು ಕಾನೂನು ತೊಡಕುಗಳ ನೆಪವೊಡ್ಡಿ ಸಂಸ್ಥೆಯ ಪ್ರತಿನಿಧಿಗಳು ಅವರ ಸಂಬಂಧಿಕರೊಬ್ಬರ ಹೆಸರಿಗೆ ತಾತ್ಕಾಲಿಕ ನೋಂದಣಿ ಮಾಡಿಸಿದ್ದು, ನಂತರ ಒಕ್ಕೂಟದ ಹೆಸರಿಗೆ ಬದಲಾವಣೆ ಮಾಡಲಾಗುವುದು ಎಂದು ಹೇಳಿದ್ದರು.

ಆದರೆ ಸದರಿ ಆಸ್ತಿಯ ಬೆಲೆ ಗಗನಕ್ಕೇರಿದ್ದು, ಈ ಸಂಸ್ಥೆಯವರು ಸದರಿ ಆಸ್ತಿಗೂ ನಮಗೂ ಯಾವುದೇ ಸಂಬಂಧವಿಲ್ಲ. ನೀವು ಸದರಿ ವ್ಯಕ್ತಿಯ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳುತ್ತಿದ್ದು ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ದೂರಿದ್ದಾರೆ.

ಇದಲ್ಲದೆ ಒಕ್ಕೂಟದ ಹಣವನ್ನು ಸಂಸ್ಥೆಯವರು ನಮ್ಮಗಳ ವಿರೋಧದ ನಡುವೆಯೂ ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡಿಕೊಳ್ಳುತ್ತಿದ್ದು, ಇಲ್ಲಿವರೆಗೆ ಲಕ್ಷಾಂತರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿದೆ ಎಂದು ಆರೋಪಿಸಿರುವ ಒಕ್ಕೂಟದ ಮಹಿಳೆಯರು ಇದೆಲ್ಲವನ್ನೂ ಮನಗಂಡ ನಾವು ಒಕ್ಕೂಟವನ್ನು ಸಂಸ್ಥೆಯಿಂದ ವಿಮುಕ್ತಿಗೊಳಿಸುವಂತೆ ಕೇಳಿದರೆ ಒಕ್ಕೂಟ ನಮ್ಮದು ಬೇಕಿದ್ದರೆ ನಿಮ್ಮ ಸಂಘಗಳನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದು ದೂರಿದ್ದಾರೆ.

ಒಕ್ಕೂಟ ಪ್ರಾರಂಭ ಮಾಡುವಾಗ ಒಕ್ಕೂಟ ನಿಮ್ಮದೆ, ನಮ್ಮದೇನಿದ್ದರೂ ಮಾರ್ಗದರ್ಶನ ಎಂದು ಹೇಳಿದ್ದ ಸಂಸ್ಥೆಯವರು ಈಗ ವರಸೆ ಬದಲಿಸುತ್ತಿದ್ದು, ಒಕ್ಕೂಟದಿಂದ ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವ ನೌಕರರಿಂದ ಹಿಡಿದು ಮಧುರೈನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೂ ಸಹ ನಮ್ಮಿಂದಲೇ ಸೇವಾಶುಲ್ಕ ಸುಲಿಗೆ ಮಾಡುತ್ತಿದ್ದು, ಸಂಸ್ಥೆಯ ಈ ಧೋರಣೆಯಿಂದ 3 ಸಾವಿರಕ್ಕೂ ಹೆಚ್ಚು ಒಕ್ಕೂಟದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಕಿಡಿ ಕಾರಿದರು.

ಇದಲ್ಲದೆ ಸಂಸ್ಥೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರತಿನಿಧಿಗಳು ತಮಗೂ ಸಹ ಸಂಸ್ಥೆ ವತಿಯಿಂದ ತೀವ್ರ ಅನ್ಯಾಯವಾಗುತ್ತಿದ್ದು, ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಕನಿಷ್ಠ ವೇತನ, ಸೇವಾ ಭದ್ರತೆ, ಇಪಿಎಫ್ ಮುಂತಾದ ಯಾವುದೇ ಸೌಲಭ್ಯವಿಲ್ಲದೆ ಅತಂತ್ರ ಸ್ಥಿತಿ ನಮ್ಮದಾಗಿದೆ ಎಂದು ಅಳಲು ತೋಡಿಕೊಂಡರು.

ಒಕ್ಕೂಟದ ಸದಸ್ಯರಿಂದ ಖಾಲಿ ಪತ್ರಗಳಿಗೆ ಸಹಿ ಮಾಡಿಸಿಕೊಂಡು ಬನ್ನಿ ಎಂದು ಸಂಸ್ಥೆಯ ಅಧಿಕಾರಿಗಳು ನಮಗೆ ಒತ್ತಡ ಹೇರುತ್ತಿದ್ದಾರೆ ಎಂದು ಸಹ ಸದರಿ ಸಿಬ್ಬಂದಿ ಆರೋಪಿಸಿದರು. ಒಕ್ಕೂಟದ ಅದ್ಯಕ್ಷೆ ಸುನಂದಮ್ಮ, ಕಾರ್ಯದರ್ಶಿ ಜಯಲಕ್ಷ್ಮಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

See also  ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು