News Kannada
Tuesday, December 06 2022

ಕರ್ನಾಟಕ

ಕಾಸರಗೋಡಿನಲ್ಲಿ ನಕಲಿ ಮತದಾನ: ತನಿಕೆಗೆ ಕಾಂಗ್ರೆಸ್ ಆದೇಶ

Photo Credit :

ಕಾಸರಗೋಡಿನಲ್ಲಿ ನಕಲಿ ಮತದಾನ: ತನಿಕೆಗೆ ಕಾಂಗ್ರೆಸ್ ಆದೇಶ

ಕಾಸರಗೋಡು: ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಪ್ರಮಾಣದ ನಕಲಿ ಮತದಾನವಾಗಿರುವುದಾಗಿ ಕಾಂಗ್ರೆಸ್ ಆರೋಪಿಸಿದ್ದು ,ನಕಲಿ ಮತದಾನದ ಕೆಲ ದ್ರಶ್ಯಗಳು ಹೊರ ಬಂದಿವೆ.

ಸಿಪಿಎಂ ನ ಭದ್ರಕೋಟೆಗಳಾದ ಪಯ್ಯನ್ನೂರು , ಕಲ್ಯಾಶ್ಯೇರಿ ಮತ್ತು ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ನಕಲಿ ಮತದಾನ ವಾಗಿರುವುದಾಗಿ ಕಾಂಗ್ರೆಸ್ ಆರೋಪಿಸುವುದರ ಜೊತೆಗೆ ದ್ರಶ್ಯಗಳು ಹೊರಬಂದಿರುವುದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಸಿ ಪಿಲಾತ್ತರ ಎ ಯು ಪಿ ಶಾಲೆಯ ೧೯ ನೇ ಮತಗಟ್ಟೆಯ ಯಲ್ಲಿ ನಕಲಿ ಮತದಾನದ ಆರು ಮಂದಿಯ ದ್ರಶ್ಯ ಹೊರಬಂದಿದೆ.

ಓರ್ವ ಇನ್ನೊಬ್ಬನ ಮತವನ್ನು ಹಾಕುತ್ತಿರುವುದು. ಈತ ಎರಡು ಮತಗಳನ್ನು ಈ ಮತಗಟ್ಟೆಯಲ್ಲಿ ಚಲಾಯಿಸಿರುವುದು ದ್ರಶ್ಯದಲ್ಲಿದೆ.

ನಕಲಿ ಗುರುತು ಚೀಟಿ ಬಳಸಿ ಇನ್ನೊಂದು ಮತಗಟ್ಟೆಯವರು ಈ ಮತಗಟ್ಟೆಯಲ್ಲಿ ಮತಚಲಾಯಿಸಿರುವುದು ಕಂಡು ಬರುತ್ತಿದೆ.

ಮತಗಟ್ಟೆ ಅಧಿಕಾರಿಯ ಕಣ್ಮುಂದೆ ನಕಲಿ ಮತದಾನ ನಡೆಯುತ್ತಿರುವುದು ಇನ್ನೊಂದು ವಿಶೇಷ. ಈ ಮತಗಟ್ಟೆಯ ೭೭೪ ನೇ ಮತದಾರ ಪದ್ಮಿನಿ ಎಂಬ ಮಹಿಳೆ ಎರಡು ಬಾರಿ ಮತಚಲಾಯಿಸಲು ಬಂದಿರುವುದು ದ್ರಶ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ .
ಕೈ ಬೆರಳಿಗೆ ಹಾಕಿದ ಶಾಯಿ ಯನ್ನು ಕೂಡಲೇ ತಲೆಗೆ ಸವರುತ್ತಿರುವುದು ದ್ರಶ್ಯದಲ್ಲಿದೆ .

ಇದೆ ಮಹಿಳೆ ಚೆರುತ್ತಾಯ ಪಂಚಾಯತ್ ನ ೫೦ ನೇ ನಂಬ್ರದ ಮತಗಟ್ಟೆಯಲ್ಲಿ ೧೯ ನೇ ನಂಬ್ರದ ಮತದಾರಳಾಗಿ ಮತ್ತೆ ಮತದಾನ ಮಾಡುತ್ತಿರುವ ದ್ರಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ .

ಇದೆ ರೀತಿ ಒಂದೇ ಮತಗಟ್ಟೆಯಲ್ಲಿ ಆರರಷ್ಟು ಮಂದಿಯ ನಕಲಿ ಮತದಾನದ ದ್ರಶ್ಯ ಕಂಡುಬಂದಿದೆ.

ಇನ್ನೋರ್ವ ಮಹಿಳೆ ಒಂದು ಗಂಟೆಗೂ ಅಧಿಕ ಕಾಲ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಬಂದಾಗ ತನ್ನ ಮತ ಯಾರೂ ಚಲಾಯಿಸಿರುವುದು ಕಂಡುಬಂದಿದೆ. ಬಳಿಕ ಕೆಲ ಹೊತ್ತು ಮತಗಟ್ಟೆಯಲ್ಲೇ ಕುಳಿತ ಈಕೆ ಮತ ಚಲಾಯಿಸಲು ಸಾಧ್ಯವಾಗದೆ ಮರಳುತ್ತಿರುವುದು ದ್ರಶ್ಯದಲ್ಲಿ ಕಂಡು ಬರುತ್ತಿದೆ .

ರಾಜಕೀಯ ಪಕ್ಷದ ಮುಖಂಡರು ಮತಗಟ್ಟೆಯೊಳಗೆ ಪ್ರವೇಶಿಸಿ ನಿಂತಿರುವುದು ದ್ರಶ್ಯದಲ್ಲಿ ಕಂಡು ಬರುತ್ತಿದೆ .

ಪಕ್ಷವೊಂದರ ಸ್ಥಳೀಯ ಮುಖಂಡರು ಮತಗಟ್ಟೆಯಲ್ಲಿರುವುದು ದ್ರಶ್ಯದಲ್ಲಿ ಕಂಡುಬರುತ್ತಿದೆ .

ಹೀಗೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ ಪ್ರತಿ ಚುನಾವಣಾ ಸಂದರ್ಭದಲ್ಲಿ ಚರ್ಚೆಯಾಗುತ್ತಿದ್ದು , ಈ ಬಾರಿ ಮತದಾನ ಹೆಚ್ಚಳ ಹಾಗೂ ೧೦೦ ಕ್ಕೂ ಅಧಿಕ ಮತಗಟ್ಟೆಗಳಲ್ಲಿ ೯೦ ಶೇಕಡಾ ಹಾಗೂ ಕೆಲ ಮತಗಟ್ಟೆಗಳಲ್ಲಿ ೯೯ ಶೇಕಡಾ ಮತದಾನವಾಗಿರುವುದು ಮತ್ತಷ್ಟ ಸಂಶಯಕ್ಕೆ ಪುಷ್ಟಿ ನೀಡಿದ್ದು , ಇದೀಗ ದ್ರಶ್ಯಗಳು ಹೊರಬಂದಿರುವುದು ಸಂಚಲನ ಮೂಡಿ

 

See also  36ರ ಸಂಭ್ರಮದಲ್ಲಿ ಕಾಸರಗೋಡು ಜಿಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು