News Kannada
Tuesday, November 29 2022

ಕರ್ನಾಟಕ

ಉತ್ತರ ಕನ್ನಡ ಲೋಕಸಭಾ ಚುನಾವಣೆ ವೆಚ್ಚದಲ್ಲಿ ಆನಂದ್ ಅಸ್ನೋಟಿಕರ್ ಪ್ರಥಮ - 1 min read

Photo Credit :

ಉತ್ತರ ಕನ್ನಡ ಲೋಕಸಭಾ ಚುನಾವಣೆ ವೆಚ್ಚದಲ್ಲಿ ಆನಂದ್ ಅಸ್ನೋಟಿಕರ್ ಪ್ರಥಮ

ಕಾರವಾರ: ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡಿದ ವೆಚ್ಚಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.

ಚುನಾವಣಾ ಆಯೋಗವು ಈ ಬಾರಿ ಪ್ರತಿಯೊಬ್ಬ ಅಭ್ಯರ್ಥಿಗೆ 70 ಲಕ್ಷ ರೂ.ಗಳವರೆಗೆ ಚುನಾವಣೆ ಖರ್ಚುವೆಚ್ಚ ಮಾಡಲು ಅವಕಾಶ ಕಲ್ಪಿಸಿತ್ತು. ಅದರಂತೆ ಆನಂದ ಅಸ್ನೋಟಿಕರ್ 46,37,245 ರೂ. ಖರ್ಚು ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ.

ಅನಂತಕುಮಾರ ಹೆಗಡೆ ಅವರು 38,35,644 ರೂ. ಚುನಾವಣಾ ವೆಚ್ಚವನ್ನು ತೋರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ  ಅಭ್ಯರ್ಥಿಗಳು ಮಾಡಿದ ಖರ್ಚುವೆಚ್ಚಗಳ ಬಗ್ಗೆ ಅಭ್ಯರ್ಥಿಗಳ ಚುನಾವಣಾ ಏಜೆಂಟರು ಆಯೋಗಕ್ಕೆ ಲೆಕ್ಕಪತ್ರ ಸಲ್ಲಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಮತದಾನದ ದಿನದವರೆಗೆ ಖರ್ಚುವೆಚ್ಚಗಳು ದಾಖಲೆ ಪುಸ್ತಕದಲ್ಲಿ ನಮೂದಿಸಿದ್ದು, ಕಾರ್ಯಕ್ರಮ ವೆಚ್ಚ, ವಾಹನ ಬಾಡಿಗೆ, ಸಾರ್ವಜನಿಕ ಸಳಗಳಲ್ಲಿ ಸಭೆಸಮಾರಂಭ ನಡೆಸಲು, ಪೆಂಡಾಲ್, ಧ್ವನಿವರ್ಧಕ, ವೃತ್ತ ಪತ್ರಿಕೆಗಳಲ್ಲಿ ಜಾಹೀರಾತು, ಕರಪತ್ರ ಮುದ್ರಣ ಮುಂತಾದವುಗಳಿಗೆ ತಗುಲಿದ ವೆಚ್ಚದ ಬಗ್ಗೆ ಸವಿವರವಾದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಲಾಗಿದೆ.

ಅನಂತಕುಮಾರ ಹೆಗಡೆ ಅವರು ಘಟ್ಟದ ಮೇಲೆ ನಾಗರಾಜ ಭಟ್ಟ ಮತ್ತು ಘಟ್ಟದ ಕೆಳಗೆ ನಾಗರಾಜ ನಾಯ್ಕ ಸೇರಿ ಇಬ್ಬರು ಏಜೆಂಟರನ್ನು ನೇಮಿಸಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪ್ರಕಾಶ ನಾಯ್ಕ ಎಂಬವರನ್ನು ಚುನಾವಣಾ ಏಜೆಂಟರಾಗಿ ನೇಮಿಸಿದ್ದರು .

ಉಳಿದ ಅಭ್ಯರ್ಥಿಗಳ ಚುನಾವಣಾ ವೆಚ್ಚ ಈ ರೀತಿ ಇದೆ. ಅನೀತಾ ಶೇಟ್-51 , 000 ರೂ., ಬಾಲಕೃಷ್ಣ ಪಾಟೀಲ್ – 43,000ರೂ., ಚಿದಾನಂದ ಹರಿಜನ-49,000 ರೂ., ಕುಂದಾಬಾಯಿ ಪರುಳೇಕರ-25,000 ರೂ., ಮಂಜುನಾಥ್ ಸದಾಶಿವ 27,000 ರೂ., ನಾಗರಾಜ ನಾಯ 41,000 ರೂ., ಮಹಮ್ಮದ್ ಖಾತೀಬ್-55,000 ರೂ., ನಾಗರಾಜ ಶೇಟ್ 37,000 ರೂ., ನಾಗರಾಜ ಶಿರಾಲಿ-1,19,000 ರೂ., ಸುಧಾಕರ ಜೋಗಳೇಕರ-67,000, ಸುನೀಲ್ ಪವಾರ್‌-19 ,000 ರೂ. ಎಂದು ಘೋಷಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

See also  ಮಾಸ್ಕ್ ಧರಿಸದವರಿಗೆ ಸರಕಾರಿ ಕಚೇರಿಗಳಿಗೆ ಪ್ರವೇಶವಿಲ್ಲ: ಹರೀಶಕುಮಾರ ಕೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು