News Kannada
Tuesday, November 29 2022

ಕರ್ನಾಟಕ

ಶ್ರೀಲಂಕಾ ಬಾಂಬ್ ಸ್ಫೋಟಕ್ಕೂ ಕಾಸರಗೋಡು ವ್ಯಕ್ತಿಗೂ ಸಂಬಂಧವಿಲ್ಲ: ಎನ್ ಐಎ - 1 min read

Photo Credit :

ಶ್ರೀಲಂಕಾ ಬಾಂಬ್ ಸ್ಫೋಟಕ್ಕೂ ಕಾಸರಗೋಡು ವ್ಯಕ್ತಿಗೂ ಸಂಬಂಧವಿಲ್ಲ: ಎನ್ ಐಎ

ಕಾಸರಗೋಡು: ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಸರಗೋಡಿನ ಇಬ್ಬರು ಶಂಕಿತ ವ್ಯಕ್ತಿಗಳಿಗೆ ಯಾವುದೇ ನಂಟು ಇಲ್ಲ ಎಂದು ರಾಷ್ಟ್ರೀಯ ತನಿಖಾ ದಳ ಸ್ಪಷ್ಟ ಪಡಿಸಿದೆ.

ಇಬ್ಬರಿಂದ ಎನ್ ಐ ಎ ತನಿಖಾ ದಳ ಇಂದು ಮಾಹಿತಿ ಕಲೆ ಹಾಕಿದ್ದು, ಇವರು ಯಾವುದೇ ರೀತಿ ಪಾತ್ರ ಹಿಂದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಶ್ರೀಲಂಕಾ ಸ್ಫೋಟದ ಆರೋಪಿ ಸಹರಾನ್ ಹಾಶೀಮ್ ತತ್ವ ಹಾಗೂ ಆದರ್ಶಗಳ ಬಗ್ಗೆ ಈ ವ್ಯಕ್ತಿಗಳು ಆಕರ್ಷಿತಗೊಂಡಿದ್ದರು ಎನ್ನಲಾಗಿದೆ.

ಸಹರಾನ್ ಹಾಶೀಮ್ ಜತೆ ಇವರಿಗೆ ನಿಕಟ ಸಂಪರ್ಕ ಇರುವ ಬಗ್ಗೆ ಎನ್ಐಎ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು . ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಆದಿತ್ಯವಾರ ಗುಪ್ತವಾಗಿ ಕೊಚ್ಚಿಯಿಂದ ಆಗಮಿಸಿದ ತನಿಖಾ ತಂಡ ನಗರ ಹೊರವಲಯದ ವಿದ್ಯಾನಗರ ಮತ್ತು ಕೂಡ್ಲು ಸಮೀಪದ ಮನೆಗೆ ದಾಳಿ ನಡೆಸಿ ಮೊಬೈಲ್ ಮತ್ತು ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಶ್ರೀಲಂಕಾದಲ್ಲಿ ಸ್ಫೋಟ ನಡೆಸಿದ ಉಗ್ರಗಾಮಿಗಳು 2017 ರಲ್ಲಿ ಕೇರಳ ಹಾಗೂ ತಮಿಳುನಾಡಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು.

ಹೆಚ್ಚಿನ ವಿಚಾರಣೆಗಾಗಿ ಸೋಮವಾರ ಕೊಚ್ಚಿಯ ಎನ್ಐಎ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುಂತೆ ಸೂಚನೆ ನೀಡಲಾಗಿದೆ. ಕಾಸರಗೋಡು ಅಲ್ಲದೆ ಪಾಲಕ್ಕಾಡ್ ಗೂ ದಾಳಿ ನಡೆಸಿ ಅಲ್ಲಿ ಓರ್ವನನ್ನು ವಶಕ್ಕೆ ತೆಗೆದುಕೊಂಡಿತ್ತು

 

See also  ಮಡಿಕೇರಿ-ವಿರಾಜಪೇಟೆ ಮತಗಟ್ಟೆಗೆ ಅಧಿಕಾರಿಗಳ ನಿಯೋಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು