News Kannada
Thursday, December 01 2022

ಕರ್ನಾಟಕ

ಚಾಮರಾಜನಗರದಲ್ಲಿ ಮಳೆಗಾಳಿ ತಂತು ರೈತರಿಗೆ ಸಂಕಷ್ಟ..! - 1 min read

Photo Credit :

ಚಾಮರಾಜನಗರದಲ್ಲಿ ಮಳೆಗಾಳಿ ತಂತು ರೈತರಿಗೆ ಸಂಕಷ್ಟ..!

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಸುರಿದ ಪರಿಣಾಮ ಲಾಭಕ್ಕಿಂತ ರೈತರಿಗೆ ನಷ್ಟವೇ ಹೆಚ್ಚಾಗಿದ್ದು, ಒಂದೆಡೆ ಮರಗಳು ಉರುಳಿ ಬಿದ್ದಿದ್ದರೆ, ಮತ್ತೊಂದೆಡೆ ಮನೆಗಳ ಮೇಲ್ಛಾವಣಿ, ವಿದ್ಯುತ್ ಕಂಬಗಳು ನೆಲಕ್ಕುರುಳಿ ಭಾರೀ ಅನಾಹುತಗಳನ್ನೇ ಸೃಷ್ಠಿಸಿವೆ.

ಇನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ಮೇಲುಕಾಮನಹಳ್ಳಿ, ಹಂಗಳ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಗೋಪಾಲಪುರ, ತೆರಕಣಾಂಬಿ ಹೋಬಳಿಯ ವಡ್ಡಗೆರೆ, ದೇಪಾಪುರ, ಶೀಲವಂತಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯೊಂದಿಗೆ ಗಾಳಿ ಬೀಸಿದ್ದರಿಂದ ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ.

ರೈತರು ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಮೀನುಗಳಲ್ಲಿ ಬೆಳೆದಿದ್ದ ಬಾಳೆಗಿಡಗಳು ಮುರಿದು ಬಿದ್ದಿವೆ. ಇದರಿಂದ ಬಾಳೆ ಬೆಳೆದಿರುವ ರೈತರು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.

ಊಟಿ ರಸ್ತೆಯ ಹಂಗಳ ಗ್ರಾಮದಲ್ಲಿ ಹಳೆಯ ಮರವೊಂದು ನೆಲಕ್ಕುರುಳಿ ಸುಮಾರು ಎರಡು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು. ತೆರಕಣಾಂಬಿ ದೇಪಾಪುರ ರಸ್ತೆಯ ಬದಿಯಲ್ಲಿದ್ದ ಮರಗಳು ನೆಲಕ್ಕುರುಳಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಬಳಿಕ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಮರಗಳ ಕೊಂಬೆಗಳನ್ನು ಕತ್ತರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಚಾಮರಾಜನಗರ ಹಾಗೂ ತಾಲೂಕಿನ ವ್ಯಾಪ್ತಿಯ ಕಿಲಗೆರೆ ಗ್ರಾಮದಲ್ಲಿ ಸುಮಾರು 205 ಎಕರೆ ವಿಸ್ತೀರ್ಣದ ಬಾಳೆ, 57ಎಕರೆ ವಿಸ್ತೀರ್ಣದ ಕಬ್ಬು, 150ಕ್ಕೂ ಹೆಚ್ಚಿನ ತೆಂಗಿನ ಮರಗಳು ನೆಲಕಚ್ಚಿದ್ದರೆ 5 ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ.

ಗೋಪಾಲಪುರ, ಹೊನ್ನೇಗೌಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಸುಮಾರು ಇನ್ನೂರು ಎಕರೆಗೂ ಹೆಚ್ಚಿನ ಬಾಳೆ ಬೆಳೆ ನೆಲಕಚ್ಚಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಳೆ ಇನ್ನೂ ಬಂದಿಲ್ಲ ಎಂದು ಮುಗಿಲತ್ತ ದೃಷ್ಠಿ ನೆಟ್ಟಿದ್ದ ರೈತರು ಕೊನೆಗೂ ಮಳೆ ಬಂತಲ್ಲ ಎಂದು ಖುಷಿಪಡುವ ಹೊತ್ತಿಗೆ ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಭಾರೀ ನಷ್ಟ ಸಂಭವಿಸಿದ್ದು ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದ್ದಾರೆ.

See also  ಕೊಡಗು: ಆಟವಾಡುತ್ತಿದ್ದ ಬಾಲಕಿಗೆ ಹುಚ್ಚು ನಾಯಿ ಕಚ್ಚಿ ಗಂಭೀರ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು