News Kannada
Thursday, December 01 2022

ಕರ್ನಾಟಕ

ಚಿಕ್ಲಿಹೊಳೆ ಜಂಕ್ಷನ್ ಪ್ರಕರಣ : ಕೊಲೆ ಆರೋಪಿ ಬಂಧನ

Photo Credit :

ಚಿಕ್ಲಿಹೊಳೆ ಜಂಕ್ಷನ್ ಪ್ರಕರಣ : ಕೊಲೆ ಆರೋಪಿ ಬಂಧನ

ಮಡಿಕೇರಿ: ನರ್ಸರಿ ಮಾಡಲು ಜಾಗ ಭೋಗ್ಯಕ್ಕೆ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ರಂಗಸಮುದ್ರದ ವಿರೂಪಾಕ್ಷಪುರ ನಿವಾಸಿ ಪರ್ಲಕೋಟಿ ಹೇಮರಾಜ್ ಅಲಿಯಾಸ್ ಕಂದ (45) ಎಂದು ಗುರುತಿಸಲಾಗಿದೆ.

ರಂಗಸಮುದ್ದ ಗ್ರಾಮದಲ್ಲಿರುವ ಚಿಕ್ಲಿಹೊಳೆ ಜಂಕ್ಷನ್‍ನಲ್ಲಿ ನರ್ಸರಿ ಮಾಡಲು ಕೆ.ಕೆ. ರಾಜು ಎಂಬವರ ಜಾಗವನ್ನು ಹೇಮರಾಜ್ ಭೋಗ್ಯಕ್ಕೆ ಕೇಳಿದ್ದರೆನ್ನಲಾಗಿದ್ದು, ಇದಕ್ಕೆ ಒಪ್ಪದ ರಾಜು ಅವರನ್ನು ಕಳೆದ ಜ.11ರಂದು ದೊಣ್ಣೆಯಿಂದ ಹೊಡೆದು, ನೆಲದಲ್ಲಿ ಎಳೆದಾಡಿ ಗಾಯಗೊಳಿಸಿದ್ದರೆನ್ನಲಾಗಿದೆ.
ಆದರೆ ರಾಜು ಅವರಿಗೆ ಚಿಕಿತ್ಸೆಗೆ ಒಳಪಡಿಸಿದ್ದರೂ, ಫಲಕಾರಿಯಾಗದೆ ಏ.14ರಂದು ಸಾವಿಗೀಡಾಗಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ಆರೋಪಿ ತಲೆ ಮರೆಸಿಕೊಂಡಿದ್ದು, ಕಾಟಗೇರಿ ಗ್ರಾಮದಲ್ಲಿ ಆರೋಪಿ ಇರುವ ಬಗ್ಗೆ ಸುಳಿವು ದೊರೆತ ಪೊಲೀಸರು ಮೇ 9ರಂದು ದಾಳಿ ನಡೆಸಿ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಡಿವೈಎಸ್‍ಪಿ ದಿನಕರ ಶೆಟ್ಟಿ ಮತ್ತು ತನಿಖಾಧಿಕಾರಿ ಬಿ.ಎಸ್.ದಿನೇಶ್‍ಕುಮಾರ್ ಅವರ ನೇತೃತ್ವದಲ್ಲಿ ಪಿಎಸ್‍ಐ ನಂದೀಶ್‍ಕುಮಾರ್, ವಿಶೇಷ ಅಪರಾಧ ಪತ್ತೆ ತಂಡದ ಹೆಚ್.ಎಸ್.ರವಿ, ಎ.ಮಂಜುನಾಥ್, ನಾಗರಾಜ್. ಎನ್.ಆರ್.ರಮೇಶ್, ಸಂಪತ್ ರೈ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಯವರು ಶ್ಲಾಘಿಸಿದ್ದಾರೆ.

See also  ಸ್ಕೂಟರ್ ನೊಂದಿಗೆ ಒಂದು ಕೆ.ಜಿ.ಗಾಂಜಾ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು