News Kannada
Wednesday, December 07 2022

ಕರ್ನಾಟಕ

ವಿಶ್ವ ತಾಯಂದಿರ ದಿನದಂದು ಉಚಿತ ಆರೋಗ್ಯ ತಪಾಸಣೆ

Photo Credit :

ವಿಶ್ವ ತಾಯಂದಿರ ದಿನದಂದು ಉಚಿತ ಆರೋಗ್ಯ ತಪಾಸಣೆ

ಮೈಸೂರು: ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಅಪೂರ್ವ ಸ್ನೇಹ ಬಳಗ ಹಾಗೂ ಲಯನ್ಸ್ ಕ್ಲಬ್ ನಿಸರ್ಗ ಮತ್ತು ಲಯನ್ಸ್ ಕ್ಲಬ್ ಮಯೂರಿ ಹಾಗೂ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವರ ಸಹಯೋಗದೊಂದಿಗೆ ಆರೋಗ್ಯವಂತ ತಾಯಿ ಎಂಬ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಮತ್ತು ವೈದ್ಯರೊಂದಿಗೆ ಸಮಾಲೋಚನಾ ಕಾರ್ಯಕ್ರಮ ನಡೆಯಿತು.

ನಗರದ ಜನತಾ ನಗರದಲ್ಲಿರುವ ಶ್ರೀ ಕನಕ ಮಂದಿರದಲ್ಲಿ ನಡೆದ ಶಿಬಿರದಲ್ಲಿ 300ಕ್ಕೂ ಹೆಚ್ಚು ಮಂದಿಗೆ ರಕ್ತದೊತ್ತಡ ,ಜಿಆರ್ ಬಿಎಸ್, ಇಸಿಜಿ, ಎಕೋ, ಹಾಗೂ ನುರಿತ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ನಾಗೇಂದ್ರ ಅವರು ಮಾತನಾಡಿ ಭಾರತದ ಹಿಂದೂ ಸಂಸ್ಕೃತಿಗಳಲ್ಲಿ ಪ್ರತಿಯೊಬ್ಬರಿಗೂ ಭೂದೇವಿ, ಭೂಮಿ, ಗೋಮಾತೆ, ನದಿ ಮತ್ತು ಜನುಮ ನೀಡಿದ ತಾಯಿ ಮುಖ್ಯ, ವಿಶ್ವ ತಾಯಂದಿರ ದಿನಾಚರಣೆ ಕೇವಲ ಆಚರಣೆಯಲ್ಲ ತಾಯಿ ಮಗುವಿಗೆ ಜೀವ ನೀಡಿದ್ದನ್ನು ಸಂಭ್ರಮಿಸುವ ದಿನ, ನಾವು ಎಷ್ಟೇ ಸಂಪಾದಿಸಿದರೂ ಸಮಾಜದಲ್ಲಿ ಕೀರ್ತಿಗಳಿಸಿದರೂ ತಾಯಿಯ ಮುಂದೆ ನಾವೆಲ್ಲರೂ ಮಕ್ಕಳೇ. ಇಂದಿನ ತಾಂತ್ರಿಕ ದಿನದಲ್ಲಿ ಜನರು ಮೊಬೈಲ್ ಬಳಕೆಗೆ ನೀಡುವ ಸಮಯ ತಂದೆ-ತಾಯಿಯೊಂದಿಗೆ ಸಮಯ ಹಂಚಿಕೊಳ್ಳದಿರುವುದು ಬೇಸರದ ಸಂಗತಿ ಹಾಗಾಗಿ ಪ್ರತಿದಿನ ತಂದೆ ತಾಯಿಯೊಂದಿಗೆ ನಾವು ಪ್ರೀತಿ ಕಾಳಜಿಯಿಂದ ಮಾತನಾಡಿದರೆ ನೂರಾರು ವರುಷ ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೆ ನಮ್ಮ ಪೋಷಕರು ನೂರಾರು ವರುಷ ಬದುಕಿ ಬಾಳುತ್ತಾರೆ. ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ದುಡಿಯಲು ಪೋಷಕರು ಬೇಕು, ದೇವರ ಮುಂದೆ ಕೈಮುಗಿಯುತ್ತೇವೆ ಆದರೆ ದುಡಿದ ಮೇಲೆ ಮಕ್ಕಳು ಜನುಮ ನೀಡಿದ ದೇವರಂತ ಪೋಷಕರನ್ನು ವೃದ್ದಾಶ್ರಮಕ್ಕೆ ಸೇರಿಸಿದರೇ ಯಾವ ನ್ಯಾಯ? ಈ ಕೆಲಸವನ್ನು ಯಾವ ಮಕ್ಕಳು ಮಾಡಬಾರದು ಅದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ ಎಂದರು.

ಹಿರಿಯ ಸಮಾಜ ಸೇವಕರಾದ ಕೆ.ರಘುರಾಂ ವಾಜಪೇಯಿ ಅವರು ಮಾತನಾಡಿ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿ ತ್ಯಜಿಸಬೇಕು, ಆರೋಗ್ಯವಿದ್ದರೆ ಮಾತ್ರ ಸಾಧನೆ ಸಂಪಾದನೆ ಮಾಡಲು ಸಾಧ್ಯ, ವೇದ ಆಯುರ್ವೇದಲ್ಲಿ ಆರೋಗ್ಯ ಸ್ಥಿರತೆ ನಿಯಂತ್ರಣದ ಬಗ್ಗೆ ಮಾಹಿತಿಯಿದೆ, ಯೋಗ, ಧ್ಯಾನ, ಹೋಮ ಹವನ, ವಾಯುವಿಹಾರ ಸಂಗೀತದಿಂದ ಆರೋಗ್ಯ ವೃದ್ಧಿಸುತ್ತದೆ. ಹಿರಿಯ ನಾಗರೀಕರು ಆರೋಗ್ಯ ತಪಾಸಣೆಯಲ್ಲಿ ಹೆಚ್ಚಾಗಿ ಭಾಗವಹಿಸಿ ಆರೋಗ್ಯ ಸಮಸ್ಯೆಗಳ ಸೂಕ್ಷ್ಮತೆ ಅರಿತರೆ ನಿವಾರಣೆಯಾಗುತ್ತದೆ. ನಾವೆಲ್ಲರೂ ಆರೋಗ್ಯ ವಿಮೆ ಮಾಡಿಸುತ್ತೇವೆ ಹೊರತು ಪರಿಸರ ಸಂರಕ್ಷಣೆಯ ಕಡೆ ಮುಂದಾಗುವುದಿಲ್ಲ ವಿದ್ಯಾರ್ಥಿಗಳು ಪದವೀಧರರಾಗಬೇಕು ಮತ್ತು ಮರಗಿಡಗಳ ಹಸಿರಿನ ಸಂಪತ್ತು ಹೆಚ್ಚಾದರೆ ಮಾತ್ರ ದೇಶದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು

ಉದ್ಯಮಿ ಅಪೂರ್ವ ಸುರೇಶ್ ಮಾತನಾಡಿ ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ 1ಲಕ್ಷ ಜನರಲ್ಲಿ 217 ಮಂದಿ ಕ್ಷಯ ರೋಗ ಪೀಡಿತರಾಗಿದ್ದಾರೆ. ಈ ರೋಗ ನಿಯಂತ್ರಿಸಲು ಕೇಂದ್ರ ಆರೋಗ್ಯ ಇಲಾಖೆಗಳಿಗೆ ಸರಕಾರಿ ಅಲ್ಲದೆ, ಖಾಸಗಿ ವೈದ್ಯರು ಮತ್ತು ಔಷದ ವ್ಯಾಪಾರಸ್ಥರುಗಳಿಂದ ಕೂಡ ಟಿ.ಬಿ. ಪಾಸಿಟಿವ್ ಇರುವವರು ಮಾಹಿತಿ ಸಂಗ್ರಹಿಸಿ ಕ್ಷಯರೋಗ ಗುಣಪಡಿಸಲು ಯೋಜನೆ ರೂಪಿಸಿ ಟಿ.ಬಿ. ರೋಗ ಮುಕ್ತ ಮಾಡಲು ಯೋಜನೆ ರೂಪಿಸಬೇಕೆಂದು ಸೂಚಿಸಿದೆ. ನಮ್ಮ ಆರೋಗ್ಯ ಇಲಾಖೆ ಕೂಡ ಈ ಕುರಿತು ಗಮನ ಹರಿಸಿದೆ. ಆದರೆ ಖಾಸಗಿ ವೈದ್ಯರು ಮತ್ತು ಔಷಧ ವ್ಯಾಪಾರಿಗಳು ಸರಕಾರದ ಆದೇಶವನ್ನು ಪಾಲಿಸದೇ ತಾತ್ಸರ ತೋರಿಸುತ್ತಿದ್ದಾರೆ. ಟಿ.ಬಿ.ರೋಗ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಎ.ಸಿ.ಎಫ್. (ಆಕ್ಸುವಲ್ ಕೇಸ್ ಫೇಂಡಿಂಗ್ ಕ್ಯಾಂಪೇನ್) ಅಭಿಯಾನ ಪ್ರಾರಂಭಿಸಿದೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯದ 11 ಜಿಲ್ಲೆಗಳನ್ನು ಗುರುತಿಸಿ ಅಭಿಯಾನ ಪ್ರಾರಂಭಿಸಿದೆ. ಈ ಕಾರ್ಯದಲ್ಲಿ ಎಲ್ಲ ವೈದ್ಯರು ಕೈ ಜೋಡಿಸಬೇಕು. ಇದನ್ನು ಪರಮ ಸೇವೆ ಎಂದು ಭಾವಿಸಬೇಕು. ಈ ಕುರಿತು ಆರೋಗ್ಯ ಇಲಾಖೆ ಜಾಗೃತಿ ಮೂಡಿಸಬೇಕು. ಎಂದರು

See also  ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಮುಂಬೈ ತಂಡ

ನಗರ ಪಾಲಿಕಾ ಸದಸ್ಯರಾದ ಗೋಪಿ, ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಕೆ.ಶಂಕರ್, ಉದ್ಯಮಿ ಅಪೂರ್ವ ಸುರೇಶ್, ಲಯನ್ಸ್ ಕ್ಲಬ್ ಆಫ್ ಮೈಸೂರಿನ ಡಾ. ಪ್ರಭಾಮಂಡಲ, ಲಯನ್ಸ್ ಕ್ಲಬ್ ನಿಸರ್ಗ ಮೈಸೂರು ಅಧ್ಯಕ್ಷರಾದ ಲಯನ್ ಮೂರ್ತಿ, ಲಯನ್ಸ್ ಕ್ಲಬ್ ಮಯೂರಿ ಅಧ್ಯಕ್ಷರಾದ ಉಮಾಪ್ರಸಾದ್, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಮಲ್ಲಿಕಾರ್ಜುನ್, ಬಿಜೆಪಿ ಯುವ ಮುಖಂಡರಾದ ಜೋಗಿ ಮಂಜು, ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು ಹಾಗೂ ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು