News Kannada
Friday, December 02 2022

ಕರ್ನಾಟಕ

ಚುನಾವಣಾ ಫಲಿತಾಂಶದಂದು ಮಂಡ್ಯ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ

Photo Credit :

ಚುನಾವಣಾ ಫಲಿತಾಂಶದಂದು ಮಂಡ್ಯ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ

ಮಂಡ್ಯ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯೊಳಗೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೇ 23 ಮತ್ತು 24ರಂದು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಆದೇಶ ಹೊರಡಿಸಿದ್ದಾರೆ.

ಮೇ 23 ಬೆಳಗ್ಗೆ 6 ಗಂಟೆಯಿಂದ 24ರ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮಂಡ್ಯ ನಗರದಲ್ಲಿ ಮತ ಎಣಿಕೆ ನಡೆಯಲಿರುವುದರಿಂದ ಮತ ಎಣಿಕಾ ಕಾರ್ಯ ಮುಗಿಯುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳು ಅವರ ಬೆಂಬಲಿಗರೊಡನೆ ಪಟಾಕಿ ಸಿಡಿಸಿ ಮೆರವಣಿಗೆ ಮೂಲಕ ವಿಜಯೋತ್ಸವ ಅಚರಿಸುವುದನ್ನು ನಿಷೇಧಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯ ಪಟ್ಟಣ ಮತ್ತು ಗ್ರಾಮಗಳಿಗೆ ತೆರಳಿ ಅಲ್ಲಿಯೂ ಸಹ ಮೆರವಣಿಗೆ ಹಾಗೂ ವಿಜಯೋತ್ಸವ ಆಚರಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಹಾಗೂ ಗೆದ್ದ ಅಭ್ಯರ್ಥಿಗಳ ನಡುವೆ ಘರ್ಷಣೆ ಸಂಭವಿಸಿ ಗ್ರಾಮಗಳಲ್ಲಿ ಹಲ್ಲೆಗಳು ನಡೆದು ಒಬ್ಬರು ಮತ್ತೊಬ್ಬರ ಮನೆಗಳಿಗೆ ಕಲ್ಲುಗಳನ್ನು ಹೊಡೆದು ಬೆಂಕಿ ಹಚ್ಚಿ ದುಷ್ಕೃತ್ಯ ನಡೆಸುವುದರೊಂದಿಗೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಂಭವವಿರುವುದರಿಂದ ಈಗಾಗಲೇ ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ನಿಷೇಧಾಜ್ಞೆ ಇರುವ ಯಾವ ಪ್ರದೇಶದಲ್ಲೂ ದೊಣ್ಣೆ, ಮಚ್ಚು, ಕಲ್ಲು ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ವಿಜೇತ ಅಭ್ಯರ್ಥಿಗಳು ಯಾವುದೇ ರೀತಿಯ ವಿಜಯೋತ್ಸವ, ಮೆರವಣಿಗೆ ನಡೆಸುವಂತಿಲ್ಲ. ಪಟಾಕಿ, ಇತರೆ ಸಿಡಿಮದ್ದುಗಳನ್ನು ಸಿಡಿಸುವಂತಿಲ್ಲ. ಪರಾಜಿತ ಅಭ್ಯರ್ಥಿಗಳ ಮನೆ ಎದುರು ಯಾವುದೇ ಘೋಷಣೆ ಕೂಗುವಂತಿಲ್ಲ ಯಾವುದೇ ಧ್ವನಿವರ್ಧಕಗಳ ಮೂಲಕ ವಿಜಯೋತ್ಸವದ ಪ್ರಚೋದನಾತ್ಮಕ ಹಾಡುಗಳನ್ನು ಹಾಡುವಂತಿಲ್ಲ. ಮನುಷ್ಯ ಶವಗಳ ಅಥವಾ ಪ್ರತಿಕೃತಿಯ ಅಣಕು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.

ಈ ನಿಷೇಧಾಜ್ಞೆ ಸದುದ್ದೇಶದ ಮದುವೆ, ಶವಸಂಸ್ಕಾರ ಕಾರ್ಯಗಳಿಗೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ನೇಮಿಸಲ್ಪಟ್ಟಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಮೇ 23ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಅಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಮೊದಲಿಗೆ ಅಂಚೆ ಮತ್ತು ಸೇವಾ ಮತಗಳ ಎಣಿಕೆ ಬಳಿಕ ಪ್ರತಿ ಕ್ಷೇತ್ರದ ಎರಡು ವಿವಿ ಪ್ಯಾಟ್ ಮತ್ತು ಇವಿಎಂಗಳಲ್ಲಿರುವ ಚುನಾವಣಾ ದಾಖಲಾತಿಗಳನ್ನು ಚುನಾವಣಾ ವೀಕ್ಷಕರು ಎಣಿಕೆ ಮಾಡಿ ತಾಳೆ ನೋಡುವರು ಎಂದು ನುಡಿದರು.

ಮಂಡ್ಯ, ಮದ್ದೂರು ಕ್ಷೇತ್ರಗಳ ತಲಾ ಒಂದು ಕೊಠಡಿ, ಉಳಿದ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಎರಡು ಕೊಠಡಿಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಶ್ರೀರಂಗಪಟ್ಟಣ ಮತ್ತು ಮಳವಳ್ಳಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಕಾಲೇಜಿನ ಸ್ನಾತಕೋತ್ತರ ವಿಭಾಗದ ಕಟ್ಟಡದಲ್ಲಿ ನಡೆದರೆ, ಉಳಿದ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸರ್ಕಾರಿ ಮಹಾ ವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ನಡೆಯಲಿದೆ.

See also  ಕೇರಳದಲ್ಲಿ ಫೇಸ್‌ ಬುಕ್‌ ಪ್ರ್ಯಾಂಕ್‌ ಗೆ ಮೂರು ಬಲಿ

ಈಗಾಗಲೇ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗೆ ತರಬೇತಿ ನೀಡಿದ್ದು, ಒಟ್ಟಾರೆ 113 ಟೇಬಲ್‍ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಪ್ರತಿ ಟೇಬಲ್‍ಗೂ ತಲಾ ಒಬ್ಬರಂತೆ ಏಜೆಂಟರನ್ನು ನೇಮಿಸಿಕೊಳ್ಳಲು ಈಗಾಗಲೇ ಸಂಬಂýಸಿದ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಹಾಗೂ ಕೆಲವು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಸಿಬ್ಬಂದಿ ಮತ್ತು ಏಜೆಂಟರಿಗೆ ಮತ ಎಣಿಕಾ ಕೇಂದ್ರಗಳಿಗೆ ಮೊಬೈಲ್‍ಗಳನ್ನು ತರದಂತೆ ಸೂಚಿಸಲಾಗಿದೆ.

ಹೈವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯ ಕ್ಷೇತ್ರದಲ್ಲಿ ಮತ ಎಣಿಕಾ ಕಾರ್ಯಕ್ಕೆ ವಿಶೇಷ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿದೆ. ಕೇಂದ್ರ ಸಶಸ್ತ್ರ ಮೀಸಲು ಪಡೆ, ಗಡಿ ಭದ್ರತಾ ಪಡೆ,ಎರಡು ಅರೆಸೇನಾಪಡೆ ಸೇರಿದಂತೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.

ಮತ ಎಣಿಕೆ ಕಾರ್ಯದ ಮುನ್ನಾ ದಿನವಾದ ಮೇ 22ರ ಮಧ್ಯರಾತ್ರಿಯಿಂದ ಮೇ 23ರ ಮಧ್ಯರಾತ್ರಿಯವರೆಗೆ ಜಿಲ್ಲಾದ್ಯಂತ ಮದ್ಯಪಾನ ನಿಷೇಧಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು