News Kannada
Thursday, December 08 2022

ಕರ್ನಾಟಕ

ತೋಟಕ್ಕೆ ಬೆಂಕಿ: ಅಂದಾಜು 20 ಲಕ್ಷ ರೂ. ಹಾನಿ

Photo Credit :

ತೋಟಕ್ಕೆ ಬೆಂಕಿ: ಅಂದಾಜು 20 ಲಕ್ಷ ರೂ. ಹಾನಿ

ಕಾರವಾರ: ವಿದ್ಯುತ್ ಕಂಬದಲ್ಲಿ ಆಕಸ್ಮಿಕವಾಗಿ ಅಗ್ನಿ ಕಾಣಿಸಿಕೊಂಡು ಅದೇ ಬೆಂಕಿ ಹತ್ತಿರದಲ್ಲೇ ಇದ್ದ ಎರಡು ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ, ತೋಟ ಸಂಪೂರ್ಣ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂ. ಹಾನಿಯಾದ ಘಟನೆ ಉತ್ತರ ಕನ್ನಡದ ‌ಶಿರಸಿಯಲ್ಲಿ ಸಂಭವಿಸಿದೆ.

ಶಿರಸಿಯ ಪಂಚಲಿಂಗದ ಕರಡಿಕೈ ನಿವಾಸಿ ಸಾವಿತ್ರಿ ಹೆಗಡೆ ಅವರಿಗೆ ಸೇರಿದ 2 ಎಕರೆ ಅಡಕೆ ತೋಟ ನಾಶವಾಗಿದೆ. ಬೆಂಕಿಯ ತೀವ್ರತೆಗೆ ಒಂದು ಸಾವಿರಕ್ಕೂ ಅಧಿಕ ಅಡಕೆ ಮರ, ನೂರಾರು ಬಾಳೆ ಮರಗಳು ಬೆಂಕಿಗಾಹುತಿಯಾಗಿದೆ.

ವಿದ್ಯುತ್ ಕಂಬದ ಮೇಲೆ ತೆಂಗಿನ ಮರದ ಹೆಡೆ ಬಿದ್ದು ಬೆಂಕಿ ಉಂಟಾಗಿ ಅಡಿಕೆ ತೋಟ ನಾಶವಾಗಿದೆ. ಅನಾಹುತದಿಂದ ಸುಮಾರು 20 ಲಕ್ಷ ರೂಪಾಯಿ ಹಾನಿ ಅಂದಾಜಿಸಲಾಗಿದೆ. ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಕಂದಾಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

See also  ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು