ಕಾಸರಗೋಡು: ಎರಡು ತಿಂಗಳ ಬೇಸಿಗೆ ರಜೆ ಬಳಿಕ ಕಾಸರಗೋಡಿನಲ್ಲಿ ಶಾಲೆಗಳು ಪುನರಾರಂಭಗೊಂಡವು.
ಅಕ್ಷರ ಲೋಕಕ್ಕೆ ಚಿಣ್ಣರು ಕಾಲಿರಿಸುವುದನ್ನು ಉತ್ಸವವಾಗಿ ಆಚರಿಸುವ ದೃಷ್ಟಿಯಿಂದ ಎಲ್ಲಾ ಶಾಲೆಗಳಲ್ಲಿ ಪ್ರವೇಶೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜಿಲ್ಲೆಯಲ್ಲಿ ಈ ಉತ್ಸವಕ್ಕಾಗಿ ಶಾಲೆಗಳು ಅಲಂಕಾರ ಸಹಿತವಾಗಿ ಸಿದ್ಧಗೊಂಡಿವೆ. ಬೇಸಗೆ ರಜೆ ಕಳೆದು ಶಾಲಾ ದಿನ ಆರಂಭವಾಗುವುದರ ಜೊತೆಗೆ ನೂತನ ಮಕ್ಕಳು ಶಾಲೆಗೆ ಬರುವ ವೇಳೆ ಪ್ರೀತಿಯಿಂದ ಸ್ವಾಗತಿಸುವ ನಿಟ್ಟಿನಲ್ಲಿ ಪ್ರವೇಶೋತ್ಸವ ನಡೆಯಿತು.
ಜಿಲ್ಲಾ ಮಟ್ಟದಲ್ಲೂ ಉಪಜಿಲ್ಲಾ ಮಟ್ಟದಲ್ಲೂ ಸಂಭ್ರಮದ ಸಮಾರಂಭಗಳು ಈ ನಿಟ್ಟಿನಲ್ಲಿ ಆಯೋಜಿಸಲಾಗಿತ್ತು. ಕುಂಬಳೆ ಉಪಜಿಲ್ಲಾ ಮಟ್ಟದ ಸಮಾರಂಭ ಕುಂಬಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಮಾರಂಭ ಪೆರ್ಮುದೆ ಬಿ.ಟಿ.ಸಿ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಬೇಕಲ ಉಪಜಿಲ್ಲಾ ಮಟ್ಟದ ಸಮಾರಂಭ ತಿರುವಕೋಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಉದ್ಘಾಟಿಸಿದರು. ಹೊಸದುರ್ಗ ಉಪಜಿಲ್ಲಾ ಮಟ್ಟದ ಸಮಾರಂಭ ಪಡನ್ನಕ್ಕಾಡ್ ಸರಕಾರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಉದ್ಘಾಟಿಸುವರು. ಚೆರುವತ್ತೂರು ಉಪಜಿಲ್ಲಾ ಮಟ್ಟದ ಸಮಾರಂಭ ಚೆರಿಯಾಕ್ಕರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಎಂ.ರಾಜಗೋಪಾಲನ್ ಉದ್ಗಟಿಸುವರು. ಚಿತ್ತಾರಿ ಕಲ್ಲ್ ಉಪಜಿಲ್ಲಾ ಮಟ್ಟದ ಸಮಾರಂಭ ಕುಂಬಳಪಳ್ಳಿ ಎಸ್.ಕೆ.ಜಿ.ಎಂ.ಶಾಲೆಯಲ್ಲಿ ನಡೆಯಿತು.
ವೈವಿಧ್ಯಮಯ ಸಮಾರಂಭಗಳು ಈ ಅಂಗವಾಗಿ ವಿವಿಧೆಡೆ ಆಯೋಜಿಸಲಾಗಿತ್ತು. ಶಾಲಾ ರಕ್ಷಕ-ಶಿಕ್ಷಕ ಸಂಘ ಮೊದಲಾದುವು ನೇತೃತ್ವ ವಹಿಸಿದ್ದವು. ಮಕ್ಕಳಿಗೆ ಕೊಡುಗೆಗಗಳನ್ನು, ಸಹಿಯನ್ನು ಹಂಚುವ ಮೂಲಕ ಸ್ವಾಗತಿಸಲಾಯಿತು. ಕೆಲವೆಡೆ ಸಮವಸ್ತ್ರ, ಪುಸ್ತಕಗಳು ಇರುವ ಕಿಟ್ ಗಳನ್ನು ಬಹುಮಾನವಾಗಿ ನೀಡಲಾಯಿತು.