ಕಾರವಾರ:ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಸಣ್ಣ ಜಗಳಕ್ಕೆ ತನ್ನ ಪತ್ನಿಗೆ ಚಾಕು ಹಾಕಿದ ಘಟನೆ ಕಾರವಾರ ತಾಲೂಕಿನ ಶಿರವಾಡದ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದೆ.
ಉತ್ತರ ಪ್ರದೇಶ ಮೂಲದ ಅಲೆಮಾರಿಗಳಾದ ಸೋನು ಅಹಮ್ಮದ್ ಖಾನ್ ಹೆಂಡತಿಗೆ ಚಾಕು ಹಾಕಿದ ಆರೋಪಿ. ಲೀಲಾವತಿ ಖಾನ್ ಗಾಯಾಳು. ಇವರು ಗೋವಾದಿಂದ ಕಾರವಾರಕ್ಕೆ ರೈಲ್ವೆಯಲ್ಲಿ ತಮ್ಮಮೂವರು ಮಕ್ಕಳೊಂದಿಗೆ ಬಂದಿಳಿದಿದ್ದಾರೆ. ಅದೇ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ಪತಿ-ಪತ್ನಿಯರ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದೆ.
ಇದರಿಂದ ಕೋಪಗೊಂಡ ಸೋನು ಖಾನ್ ತನ್ನ ಪತ್ನಿ ಲೀಲಾವತಿಯ ಬೆನ್ನಿಗೆ ಚಾಲಿ ಹಾಕಿದ್ದಾನೆ. ಇದರಿಂದ ತೀವ್ರಗಾಯಗೊಂಡಿರುವ ಲೀಲಾವತಿಗೆ ೧೦೮ನಲ್ಲಿ ನಗರ ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆಗೆದಾಖಲಿಸಲಾಗಿದೆ. ಅಲೆಮಾರಿಗಳಾದ ಇವರು ಕೆಲವು ದಿನಗಳ ಕಾಲ ಗೋವಾದಲ್ಲೇ ಇದ್ದು ರೈಲ್ವೆ ಮೂಲಕ ಕಾರವಾರಕ್ಕೆ ಆಗಮಿಸಿದ್ದರು. ಇವರ ಜೊತೆಗೆ ಮುಸ್ಕಾನ್, ಸಲ್ಮಾನ್ ಹಾಗೂ ಕೋಮಲ್ ಎನ್ನುವಮೂವರು ಮಕ್ಕಳಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದು ನಗರದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.