News Kannada
Friday, September 30 2022

ಕರ್ನಾಟಕ

ಆಸ್ಪತ್ರೆ ಇದ್ದರೂ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿರುವ ಗ್ರಾಮೀಣ ಜನ - 1 min read

Photo Credit :

ಆಸ್ಪತ್ರೆ ಇದ್ದರೂ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿರುವ ಗ್ರಾಮೀಣ ಜನ

ಕಾರವಾರ: ಎಲ್ಲ ಸವಲತ್ತುಗಳಿರುವ ನಗರ ಪ್ರದೇಶದಿಂದ ದೂರವಿರುವ ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸುವ ದೃಷ್ಟಿಯಿಂದ ನಿರ್ಮಿಸಿದ ಆರೋಗ್ಯ ಕೇಂದ್ರದ ಲಾಭ ಜನರಿಗೆ ಲಭ್ಯವಾಗುತ್ತಿಲ್ಲ. ಸರಕಾರ ಒಂದು ಕೈಯಿಂದ ಕೊಟ್ಟರೆ ಇನ್ನೊಂದು ಕೈಯಿಂದ ಕಸಿದುಕೊಂಡಿರುವಂಥ ಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗ್ರಾಮೀಣ ಪ್ರದೇಶವಾದ ದೇವಳಮಕ್ಕಿಯ ಜನರದ್ದಾಗಿದೆ.

ಆರೋಗ್ಯ ಸೌಲಭ್ಯ ಎಲ್ಲರಿಗೂ ಸಿಗಲಿ ಎಂದು ಯೋಜನೆ ರೂಪಿಸಿದ್ದರೂ ಸಹ ಅದನ್ನು ಕಾರ್ಯ ರೂಪಕ್ಕೆ ತರಲು ಆರೋಗ್ಯ ಇಲಾಖೆ ಆಸಕ್ತಿ ವಹಿಸುತ್ತಿಲ್ಲ. ದೇವಳಮಕ್ಕಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಆರೋಗ್ಯ ಸೌಲಭ್ಯ ನೀಡಲು ಸಿಬ್ಬಂದಿ ವರ್ಗ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡದ ಕಾರಣ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ರೋಗಿಗಳ ಪಾಲಿಗೆ ಇದ್ದು ಇಲ್ಲದಂತಾಗಿದೆ.

ಇದಕ್ಕೂ ಮೊದಲು ೨೪/೭ ಆರೋಗ್ಯ ಸೇವೆ ನೀಡುವುದಾಗಿ ಕೇಂದ್ರ ಪ್ರಾರಂಭಿಸಲಾಗಿತ್ತು. ಆದರೆ ಈಗ ದೇವಳಮಕ್ಕಿ ಪ್ರಾಥಮಿಕ ಆರೋಗ್ಯದ ಕೇಂದ್ರದಲ್ಲಿ ಕೇವಲ ಒಬ್ಬ ವೈದ್ಯರು ಮಾತ್ರ ಸೇವೆಸಲ್ಲಿಸುತ್ತಿದ್ದಾರೆ. ಖಾಯಂ ಶೂಶ್ರೂಕಿಯರನ್ನು ನೇಮಿಸಿದೇ ಕೇವಲ ಒಬ್ಬ ಅರೆಕಾಲಿಕ ಶೂಶ್ರೂಕಿಯರನ್ನು ನೇಮಕ ಮಾಡಿದೆ. ಈ ಬಗ್ಗೆ ಶೀಘ್ರವೇ ಇಲಾಖೆ ಕ್ರಮಕೈಗೊಂಡು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಕಲ್ಪಿಸಲು ಇಲಾಖೆ ಕ್ರಮವಹಿಸಬೇಕಾಗಿದೆ.

ದೇವಳಮಕ್ಕಿ ಆರೋಗ್ಯ ಕೇಂದ್ರದಲ್ಲಿ ಸಹಾಯಕನಾಗಲಿ, ಗುಮಾಸ್ತನಾಗಲಿ, ಫಾರ್ಮಾಸಿಸ್ಟ್ ವ್ಯವಸ್ಥೆ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಬೇಕಾದರೆ ದೂರದ ಕಾರವಾರದಿಂದ ಇಲ್ಲವೇ ಕದ್ರಾ ಗ್ರಾಮದ ಮೂಲಕ ಆ್ಯಂಬುಲೆನ್ಸ್ ತರಿಸಬೇಕು. ದೇವಳಮಕ್ಕಿ ಸುತ್ತ ಮುತ್ತಲು ಅತ್ಯಂತ ಕುಗ್ರಾಮವಾಗಿದ್ದು ಬಡ ಜನರೇ ವಾಸಿಸುತ್ತಾರೆ. ಅವರಿಗೆ ನಗರಕ್ಕೆ ಮತ್ತೆ ಮತ್ತೆ ಹೋಗಿ ಚಿಕಿತ್ಸೆ ಪಡೆಯುದುವು ಸಾಧ್ಯವಾಗತ್ತಿಲ್ಲ.

ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೆ ನಂಬಿರುವ ಕೇರವಡಿ, ಮಲ್ಲಾಪುರ, ಖಾರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಸ್ಥರಿಗೆ ಕೂಡ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಲಾಗುತ್ತಿದೆ. ಆರೋಗ್ಯ ಇಲಾಖೆ ಕ್ರಮ ಕೈಗೊಂಡು ಸರಕಾರದಿಂದ ಲಭ್ಯವಾಗುವ ಆರೋಗ್ಯ ಸೇವೆಯನ್ನು ಜನರಿಗೆ ಸಿಗುವಂತೆ ಮಾಡಬೇಕು ಎಂದು ದೇವಳಮಕ್ಕಿಯ ಯುವಮುಖಂಡ ಪ್ರಜ್ವಲ್ ಶೇಟ್ ಒತ್ತಾಯಿಸಿದ್ದಾರೆ.

 

See also  ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ: ಭಕ್ತಿಯ ಕ್ಷಣಕ್ಕೆ ಸಾಕ್ಷಿಯಾದ ಭಕ್ತ ಸಾಗರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು