News Kannada
Thursday, October 06 2022

ಕರ್ನಾಟಕ

ಬಂಡೀಪುರ ಅರಣ್ಯದಿಂದ ಹೊರಬಂದಿರುವ ಹುಲಿಗೆ ಹುಡುಕಾಟ - 1 min read

Photo Credit :

ಬಂಡೀಪುರ ಅರಣ್ಯದಿಂದ ಹೊರಬಂದಿರುವ ಹುಲಿಗೆ ಹುಡುಕಾಟ

ಗುಂಡ್ಲುಪೇಟೆ: ಬಂಡೀಪುರ ನ್ಯಾಷನಲ್ ಪಾರ್ಕಿನಿಂದ ಹೊರಬಂದಿರುವ ಹುಲಿಯ ಸೆರೆಗೆ ಅರಣ್ಯ ಇಲಾಖೆಯು ಸಾಕಾನೆಗಳ ಸಹಾಯದಿಂದ ಹುಡುಕಾಟವನ್ನು ಮುಂದುವರೆಸಲಾಗಿದೆ.

ತಾಲೂಕಿನ ಹುಂಡಿಪುರ ಗ್ರಾಮದ ಸಮೀಪವೇ ಬಂಡೀಪುರ ಅಭಯಾರಣ್ಯವಿದ್ದು, ಕಳೆದ ಎರಡು ತಿಂಗಳಿಂದ ಹುಲಿಯೊಂದು ರೈತರ ಜಮೀನಿಗಳಲ್ಲಿ ಅಡ್ಡಾಡಿ ಜನರಲ್ಲಿ ಭಯಹುಟ್ಟಿಸಿತ್ತು. ಸಾಲದೆಂಬಂತೆ ಇತ್ತೀಚೆಗೆ ಸ್ವಾಮಿ ಎಂಬುವರ ಮೇಲೆ ದಾಳಿಗೆ ಯತ್ನಿಸಿತ್ತು. ಆತ ವಿದ್ಯುತ್ ಕಂಬವನ್ನೇರಿ ಜೀವ ರಕ್ಷಿಸಿಕೊಂಡಿದ್ದನು. ಇದರಿಂದ ಆತಂಕಗೊಂಡಿದ್ದ ಗ್ರಾಮಸ್ಥರು ಹುಲಿಯ ಸೆರೆಗೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಹೀಗಾಗಿ ಅರಣ್ಯಾಧಿಕಾರಿಗಳು ಹುಲಿಯ ಸೆರೆಗಾಗಿ ಸಾಕಾನೆಗಳ ಸಹಾಯದಿಂದ ಹುಡುಕಾಟ ನಡೆಸಲಾಗುತ್ತಿದೆ.

ಆದರೆ ಈ ವ್ಯಾಪ್ತಿಯಲ್ಲಿ ಹುಲಿ ಸಂಚರಿಸಿರುವ ಯಾವುದೇ ಕುರುಹು ಕಾಣಿಸುತ್ತಿಲ್ಲ. ಆದರೂ ಅಧಿಕಾರಿಗಳು ಬಂಡೀಪುರ ನ್ಯಾಷನಲ್ ಪಾರ್ಕ್‍ನ ರಾಂಪುರ ಕ್ಯಾಂಪಿನ ಸಾಕು ಆನೆಗಳಾದ ಜಯಪ್ರಕಾಶ್, ರೋಹಿತ್, ಪುಟ್ಟ ಎಂಬ ಮೂರು ಆನೆಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸುತ್ತಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡುತ್ತಿರುವ ಆರ್‍ಎಫ್‍ಓ ನವೀನ್ ಕುಮಾರ್ ಅವರು ಕಳೆದೆರಡು ವಾರಗಳಿಂದ ಕಾಡಂಚಿನಲ್ಲಿರುವ ಹುಂಡೀಪುರಕೆರೆಯಲ್ಲಿ ಹುಲಿ ಬಂದು ನೀರು ಕುಡಿದು ಹೋಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಗ್ರಾಮದತ್ತ ಹುಲಿ ಸುಳಿದಾಡಿರುವ ಯಾವುದೇ ಹೆಜ್ಜೆ ಗುರುತು ಹಾಗೂ ಸುಳಿವು ಸಿಕ್ಕಿಲ್ಲ. ಜನರು ಹುಲಿಯ ಆತಂಕದಲ್ಲಿದ್ದು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಹುಲಿಯ ಸೆರೆಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಅರಣ್ಯಸಂರಕ್ಷಣಾಧಿಕಾರಿ ಹಾಗೂ ಹುಲಿಯೋಜನೆ ನಿರ್ದೇಶಕರಾದ ಬಾಲಚಂದ್ರ ಮಾತನಾಡಿ ಹುಲಿ ಕಾಣಿಸಿಕೊಂಡಿದೆ ಎನ್ನಲಾದ ಹುಂಡಿಪುರ ವ್ಯಾಪ್ತಿಯಲ್ಲಿ ಹುಲಿಯ ಸೆರೆಗೆ ಅರಣ್ಯ ಸಿಬ್ಬಂದಿ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

See also  ಏ.27ರಂದು ಗೋಣಿಕೊಪ್ಪಕ್ಕೆ ರಾಹುಲ್ ಗಾಂಧಿ ಭೇಟಿ: ಪೊಲೀಸ್ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು