News Kannada
Tuesday, September 27 2022

ಕರ್ನಾಟಕ

ತಿತಿಮತಿ-ಹುಣಸೂರು ರಾತ್ರಿ ವಾಹನ ಸಂಚಾರ ನಿಷೇಧ ಪ್ರಸ್ತಾಪ : ಶಾಸಕ ಕೆ.ಜಿ.ಬೋಪಯ್ಯ ಅಸಮಾಧಾನ - 1 min read

Photo Credit :

ತಿತಿಮತಿ-ಹುಣಸೂರು ರಾತ್ರಿ ವಾಹನ ಸಂಚಾರ ನಿಷೇಧ ಪ್ರಸ್ತಾಪ : ಶಾಸಕ ಕೆ.ಜಿ.ಬೋಪಯ್ಯ ಅಸಮಾಧಾನ

ಮಡಿಕೇರಿ: ತಿತಿಮತಿ- ಹುಣಸೂರು ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸುವ ಪ್ರಸ್ತಾಪ ಡೋಂಗಿ ಪರಿಸರವಾದಿಗಳ ಹಾಗೂ ಅರಣ್ಯಾಧಿಕಾರಿಗಳ ಕೃಪಪೋಷಿತ ಹುನ್ನಾರ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊಡಗಿನ ಕೆಲ ಡೋಂಗಿ ಪರಿಸರವಾದಿಗಳು ತಿತಿಮತಿ- ಹುಣಸೂರು ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ಹಲವು ವರ್ಷಗಳಿಂದ ಷಡ್ಯಂತ್ರ ರೂಪಿಸುತ್ತಿದ್ದಾರೆ. ಹಾಗಾಗಿ ಈಗಿನ ಪ್ರಸ್ತಾಪವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಈ ಬಗ್ಗೆ ಶೀಘ್ರದಲ್ಲೆ ಪರಿಶೀಲನೆ ನಡೆಸಿ ವಾಸ್ತವಾಂಶ ಪತ್ತೆಹಚ್ಚಲಾಗುವುದು. ಬಳಿಕ ಜನರ ಭಾವನೆಗಳಿಗೆ ಪೂರಕವಾಗಿ ಮುಂದುವರೆಯಲಾಗುವುದು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಈ ಪ್ರಸ್ತಾಪ ಜಾರಿಯಾಗಬಾರದು, ಜನರಿಗೆ ತೊಂದರೆಯಾಗುವ ರೀತಿ ಯಾವುದೇ ಮಾರ್ಗಸೂಚಿ ಬದಲಾಗಬಾರದು ಎಂದು ಬೋಪಯ್ಯ ಹೇಳಿದರು.

ತಿತಿಮತಿ-ಹುಣಸೂರು ಮುಖ್ಯ ರಸ್ತೆಯ ಎಡಬದಿಯಲ್ಲಿರುವ ದೇವಮಚ್ಚಿ ಮತ್ತು ಮಾವುಕಲ್ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶವನ್ನು ನಾಗರಹೋಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವನ್ಯಜೀವಿ ವಲಯಕ್ಕೆ ಸೇರ್ಪಡೆಗೊಳಿಸುವ ಕ್ರಮ ಕೂಡ ಅರಣ್ಯ ಇಲಾಖೆಯ ಕಾನೂನುಬಾಹಿರ ಕ್ರಮವಾಗಿದೆ. ಇಲ್ಲಿ ಪಾಲಿಸಬೇಕಾದ ಯಾವ ನಿಯಮಾವಳಿಯನ್ನು ಕೂಡ ಅರಣ್ಯ ಇಲಾಖೆ ಪಾಲಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕನಿಷ್ಠ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸಭೆಯ ಅನುಮೋದನೆಯನ್ನು ಕೂಡ ಪಡೆಯದೆ ಇಲಾಖೆಯ ಮೇಲ್ಮಟ್ಟದಲ್ಲಿ ಈ ಆದೇಶ ಮಾಡಲಾಗಿದೆ. ಸದಾ ಜನರಿಗೆ ವಿವಿಧ ರೀತಿಯಲ್ಲಿ ತೊಂದರೆ ನೀಡುವ ಅರಣ್ಯ ಇಲಾಖೆ ಇಲ್ಲಿಯೂ ಕೂಡ ತನ್ನ ಜನವಿರೋಧಿ ನೀತಿ ಅನುಸರಿಸಿದೆ. ಪರಿಸರವಾದಿಗಳ ಹಿಡಿತದಲ್ಲಿರುವ ಕೆಲ ಅರಣ್ಯಾಧಿಕಾರಿಗಳು ಅರಣ್ಯ ಭವನದಲ್ಲಿ ಕುಳಿತು ತಮ್ಮ ಮನಸೋಇಚ್ಚೆ ಆದೇಶ ನೀಡಿದರೆ ಕ್ಷೇತ್ರದ ಜನರ ಹಿತಾದೃಷ್ಠಿಯಿಂದ ಅದನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಇವರ ಜನವಿರೋಧಿ ನೀತಿಗಳನ್ನು ಎಲ್ಲಿ ಪ್ರಶ್ನೆ ಮಾಡಬೇಕೊ ಅಲ್ಲಿ ಮಾಡುತ್ತೇನೆ ಎಂದು ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ಉಂಟಾದ ಕೆಲ ಗೊಂದಲದ ವಾತವರಣದಿಂದಾಗಿ ಸಚಿವರಿಗೆ ಖಾತೆ ಹಂಚಿಕೆಯಾಗಿಲ್ಲ. ಶೀಘ್ರದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅರಣ್ಯ ಖಾತೆ ವಹಿಸಿಕೊಳ್ಳುವ ಸಚಿವರಿಗೆ ಇಲ್ಲಿನ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಟ್ಟು ಜನಜೀವನಕ್ಕೆ ಅನುಕೂಲವಾಗುವ ರೀತಿಯ ಆದೇಶ ಹೊರಡಿಸಲು ಪ್ರಯತ್ನಿಸಲಾಗುವುದು ಎಂದರು.

See also  ಉ.ಕ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯ ನಡುವೆ ಮೈತ್ರಿಗಳಿಂದ ಹಗ್ಗಜಗ್ಗಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು