News Kannada
Saturday, October 08 2022

ಕರ್ನಾಟಕ

ಕೊಡವರ ಕೋವಿ ಹಕ್ಕು: ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಲು ಆಗ್ರಹ - 1 min read

Photo Credit :

ಕೊಡವರ ಕೋವಿ ಹಕ್ಕು: ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಲು ಆಗ್ರಹ

ಮಡಿಕೇರಿ: ಕೊಡವರ ಕೋವಿ ಹಕ್ಕನ್ನು ರದ್ದುಪಡಿಸುವಂತೆ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ನೆಲಜಿ ಫಾರ್ಮರ್ಸ್ ಕ್ಲಬ್, ಕೋವಿಯ ಹಕ್ಕನ್ನು ರಕ್ಷಿಸಲು ಜಿಲ್ಲಾಡಳಿತ ಸರಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‍ನ ಅಧ್ಯಕ್ಷ ಎಂ.ಕೆ.ನಂಜಪ್ಪ ಅವರು, ಕೊಡವರು ಆದಿ ಕಾಲದಿಂದಲೂ ಬಂದೂಕನ್ನು ಪೂಜಾ ಪರಿಕರವೆಂದು ಪರಿಗಣಿಸಿ, ನೆಲ್ಲಕ್ಕಿಯಲ್ಲಿಟ್ಟು ಭಕ್ತಿಭಾವದಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಅಲ್ಲದೆ ಬಂದೂಕು ಕೊಡವರ ಧಾರ್ಮಿಕ ಸಂಕೇತ ಮತ್ತು ಸಾಂಸ್ಕೃತಿಕ ಲಾಂಛನವೂ ಆಗಿದ್ದು, ಉಡುಪಿನ ಅವಿಭಾಜ್ಯ ಅಂಗವಾಗಿಯೂ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಕೊಡವ ಕುಟುಂಬದಲ್ಲಿ ಗಂಡು ಮಗು ಜನಿಸಿದರೆ ಸಾಂಕೇತಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವೀರಯೋಧನೊಬ್ಬ ಭೂಮಿಗೆ ಬಂದನೆಂಬ ಶುಭ ಸಂದೇಶವನ್ನು ಸಾರಲಾಗುತ್ತದೆ. ಅಲ್ಲದೆ ಕೊಡವರ ಮದುವೆ, ಸಾವು, ಹಬ್ಬ, ಹರಿದಿನಗಳಲ್ಲಿ, ಪೂಜೆ ಪುನಸ್ಕಾರಗಳಲ್ಲೂ ಬಂದೂಕಿಗೆ ಮಹತ್ವದ ಸ್ಥಾನವಿದೆ. ಹೀಗಾಗಿ ಹುಟ್ಟಿನಿಂದ ಸಾವಿನವರೆಗೂ ಬಂದೂಕು ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಈ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಸರಿಯಲ್ಲವೆಂದರು.

ಕೊಡವರಿಗೆ ಕೋವಿ ಹೊಂದುವ ವಿಶೇಷ ಹಕ್ಕನ್ನು 1861ರಲ್ಲಿ ಬ್ರಿಟೀಷರೇ ನೀಡಿದ್ದು, ಸ್ವಾತಂತ್ರ್ಯ ನಂತರದಲ್ಲೂ 1959ರ ಶಸ್ತ್ರಾಸ್ತ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅನ್ವಯ ಕೊಡವ ರೇಸ್ ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲು ಇರುವ ವಿನಾಯಿತಿಯನ್ನು ಮುಂದುವರಿಸಲು 1963ರಲ್ಲಿ ವಿಶೇಷ ಆದೇಶವನ್ನು ಹೊರಡಿಸಲಾಗಿತ್ತು. ಈ ಬಂದೂಕು ಹಕ್ಕು ಹೊಂದಿರುವ ಕೊಡವರು ಯಾವುದೇ ಸಮಯದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಕೋವಿಯನ್ನು ದುರುಪೋಗಪಡಿಸಿಕೊಂಡ ನಿದರ್ಶನಗಳಿಲ್ಲ. ಕೊಡವರು ಶಾಂತಿಪ್ರಿಯ ದೇಶಪ್ರೇಮಿಗಳಾಗಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಾಗಲಿ, ಕೊಡಗನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಿದ ಸಮಯದಲ್ಲಾಗಲಿ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಾಗಲಿ, ಅಥವಾ ಪ್ರತೀಬಾರಿ ನಡೆಯುವ ಸಾರ್ವತ್ರಿಕ ಚುನಾವಣೆ, ಕೋಮು ಗಲಭೆಗಳ ಸಂದರ್ಭದಲ್ಲಾಗಲಿ ಕೋವಿಯನ್ನು ಬಳಸಿ ಹಕ್ಕನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ನಂಜಪ್ಪ ಸ್ಪಷ್ಟಪಡಿಸಿದರು.

ವ್ಯಕ್ತಿಯೊಬ್ಬರು ಕೊಡವರಿಗೆ ನೀಡಲಾದ ಕೋವಿ ಹೊಂದುವ ವಿಶೇಷ ಹಕ್ಕನ್ನು ರದ್ದುಗೊಳಿಸಬೇಕೆಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿರುವುದು ಖಂಡನೀಯ. ಕೊಡವರ ಕೋವಿ ಹೊಂದುವ ಹಕ್ಕನ್ನು ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಬೇಕೆಂದು ಹೋರಾಟ ನಡೆಸುತ್ತಿರುವ ಫೆಡರೇಷನ್ ಆಫ್ ಕೊಡವ ಸಮಾಜ, ಸಿಎನ್‍ಸಿ ಮುಖಂಡ ಎನ್.ಯು.ನಾಚಪ್ಪ, ಬೆಂಗಳೂರು ಕೊಡವ ಸಮಾಜ ಮತ್ತಿತರರ ಸಂಘಟನೆಗಳಿಗೆ ನೆಲಜಿ ಫಾರ್ಮರ್ಸ್ ಕ್ಲಬ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು. ಅಲ್ಲದೆ ಜಿಲ್ಲಾಡಳಿತವು ಸರಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಸೂಕ್ತವಾದ ಮಾಹಿತಿಯನ್ನು ನೀಡಿ ಈ ಹಕ್ಕನ್ನು ರಕ್ಷಿಸಲು ಮುಂದಾಗಬೇಕು ಎಂದು ನಂಜಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಮಂಡೀರ ಸಚಿನ್ ಗಣಪತಿ, ನಿರ್ದೇಶಕರುಗಳಾದ ಮಾಳೆಯಂಡ ವಿಜುಅಪ್ಪಯ್ಯ ಹಾಗೂ ಚಿಯಕಪೂವಂಡ ನವೀನ್ ನಾಚಪ್ಪ ಉಪಸ್ಥಿತರಿದ್ದರು.

 

See also  ನಕಲಿ ಐಡಿ ಕಾರ್ಡ್ ಮಾಡುತ್ತಿದ್ದ ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು