News Kannada
Saturday, November 26 2022

ಕರ್ನಾಟಕ

ಸಫಿಯಾ ಕೊಲೆ ಪ್ರಕರಣ: ಅಪರಾಧಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದ ಕೇರಳ ಹೈಕೋರ್ಟ್ - 1 min read

Photo Credit :

ಸಫಿಯಾ ಕೊಲೆ ಪ್ರಕರಣ: ಅಪರಾಧಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದ ಕೇರಳ ಹೈಕೋರ್ಟ್

ಕಾಸರಗೋಡು: ಕೇರಳದಲ್ಲಿ ಭಾರಿ ಸುದ್ದಿಯಾಗಿದ್ದ ಸಫಿಯಾ(14) ಕೊಲೆ ಪ್ರಕರಣದ ಒಂದನೇ ಆರೋಪಿ ಮುಳಿಯಾರು ಮಸ್ತಿಕುಂಡು ನಿವಾಸಿ ಹಾಗೂ ಗೋವಾದಲ್ಲಿ ಗುತ್ತಿಗೆದಾರನಾಗಿದ್ದ ಕೆ.ಸಿ.ಹಂಝ(51)ನಿಗೆ ಘೋಷಿಸಿದ್ದ ಗಲ್ಲು ಶಿಕ್ಷೆಯನ್ನು ಕೇರಳ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಕಡಿತಗೊಳಿಸಿದೆ.

2017ರ ಜುಲೈ 16ರಂದು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಪ್ರಕರಣದ ಐದನೇ ಮೂರನೇ ಆರೋಪಿ ಆಗಿರುವ ಹಂಝನ ಪತ್ನಿ ಮೈಮೂನಾ(37) ಳಿಗೆ ಘೋಷಿಸಿದ್ದ ಮೂರು ವರ್ಷ ಸಜೆ, ದಂಡ, ನಾಲ್ಕನೇ ಆರೋಪಿ ಹಂಝನ ಸಂಬಂಧಿಕ ಕುಂಬಳೆ ಆರಿಕ್ಕಾಡಿಯ ಅಬ್ದುಲ್ಲ(58)ನಿಗೆ ನೀಡಲಾಗಿದ್ದ ಮೂರು ವರ್ಷದ ಕಠಿಣ ಸಜೆಯನ್ನು ಹೈಕೋರ್ಟಿನ ವಿಭಾಗೀಯ ಪೀಠ ರದ್ದುಗೊಳಿಸಿದೆ.

ಸಫಿಯಾಳನ್ನು ಹಂಝನ ಮನೆಗೆ ಕೆಲಸಕ್ಕೆ ತಲುಪಿಸಿದ್ದ ಮಧ್ಯವರ್ತಿಯಾಗಿರುವ ಮಡಿಕೇರಿ ದೊಡ್ಡಪಳ್ಳಿಯ ಮೊಯ್ದು ಹಾಜಿ, ಪ್ರಕರಣವನ್ನು ಮುಚ್ಚಿ ಹಾಕುವ ಆರೋಪಕ್ಕೆ ಸಿಲುಕಿದ್ದ ಆದೂರು ಠಾಣಾ ಎ ಎಸ್ ಐ ಉದುಮದ ಟಿ.ಎ. ಗೋಪಾಲ ಕೃಷ್ಣ ಮೊದಲಾದವರನ್ನು ನ್ಯಾಯಾಲಯ ಈ ಹಿಂದೆ ಖುಲಾಸೆಗೊಳಿಸಿತ್ತು.

ಮಡಿಕೇರಿ ಆಯ್ಯಂಗೇರಿಯ ನಿವಾಸಿ ಮೊಯ್ದು-ಆಯಿಷಾ ದಂಪತಿ ಪುತ್ರಿ ಸಫಿಯಾ(14) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷೆ ನೀಡಲಾಗಿತ್ತು. ಗೋವಾದಲ್ಲಿ ಗುತ್ತಿಗೆದಾರನಾಗಿದ್ದ ಕಾಸರಗೋಡು ಮುಳಿಯಾರು ಮಾಸ್ತಿಕುಂಡುವಿನ ಕೆ.ಸಿ. ಹಂಝ ಎಂಬವನ ಮನೆಯಲ್ಲಿ ಕೆಲಸಕ್ಕಿದ್ದ ಸಫಿಯಾ 2006ರ ಡಿಸೆಂಬರ್ ನಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮನೆಯವರು ಆದೂರು ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಸಫಿಯಾಳನ್ನು ಪತ್ತೆ ಹಚ್ಚಲು ವಿಫಲರಾಗಿದ್ದರು.

ಈ ಹಿನ್ನಲೆಯಲ್ಲಿ ನಾಗರಿಕರು ಕ್ರಿಯಾ ಸಮಿತಿ ರಚಿಸಿ ಹೋರಾಟ ನಡೆಸಿದ್ದರು. ಈ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿತ್ತು. ಹೋರಾಟದ ಫಲವಾಗಿ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿತ್ತು. ಕ್ರೈಂ ಬ್ರಾಂಚ್ ತನಿಖೆಯಿಂದ ಸಫಿಯಾ ಕೊಲೆಯಾಗಿರುವುದಾಗಿ ಬಯಲಿಗೆ ಬಂದಿತ್ತು.

ಇದರಿಂದ ಪ್ರಥಮ ಆರೋಪಿ ಹಂಝ ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ ಗೋವಾದ ಮಗಿಲಿ ಎಂಬಲ್ಲಿ ಆಣೆಕಟ್ಟು ನಿರ್ಮಾಣ ಸ್ಥಳದಲ್ಲಿ ಸಫಿಯಾಳ ಮೃತದೇಹವನ್ನು ಹೂತು ಹಾಕಿರುವುದು ಬೆಳಕಿಗೆ ಬಂದಿತ್ತು. 2008ರ ಜುಲೈ ಎಂಟರಂದು ಗೋವಾದ ಮಗಿಲಿ ಎಂಬಲ್ಲಿ ಹೂತು ಹಾಕಲಾಗಿದ್ದ ಸಫಿಯಾಳ ಮೃತದೇಹದ ಅಸ್ಥಿ ಪಂಜರವನ್ನು ಹೊರತೆಗೆಯಲಾಯಿತು.

2006 ಡಿಸೆಂಬರ್ 22ರಂದು ಕೊಲೆ ನಡೆದಿತ್ತು. ಮಾಸ್ತಿಕುಂಡುವಿನ ಮನೆಯಲ್ಲಿ ಕೆಲಸಕ್ಕೆ ನಿಂತಿದ್ದ ಸಫಿಯಾಳನ್ನು ಮಡಿಕೇರಿ ಅಯ್ಯಂಗೇರಿಯಲ್ಲಿದ್ದ ಹೆತ್ತವರಿಗೆ ತಿಳಿಸದೆ ಗೋವಾಗೆ ಕರೆದೊಯ್ದು, ಗೋವಾದ ಫ್ಲ್ಯಾಟ್ ನಲ್ಲಿ ಬಿಸಿ ಗಂಜಿ ನೀರು ಬಿದ್ದು ಸುಟ್ಟು ಗಾಯಗೊಂಡ ಸಫಿಯಾಳಿಗೆ ಸೂಕ್ತ ಚಿಕಿತ್ಸೆ ನೀಡದೆ ಕೊಲೆ ಮಾಡಿದ ಬಳಿಕ ಮೃತದೇಹವನ್ನು ತುಂಡರಿಸಿ ಗೋಣಿಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಕೊಂಡೊಯ್ದು ಸೇತುವೆಯ ಬಳಿ ಹೂತು ಹಾಕಲಾಗಿತ್ತು.

2008ರ ಜೂ.5ರಂದು ಸಫಿಯಾಳ ಮೃತದೇಹವನ್ನು ಗೋವಾದ ಮಗಿಲಿಯ ವರ್ಕ್‌ಸೈಟ್ ಬಳಿ ಹೂತು ಹಾಕಲಾದ ಸ್ಥಿತಿಯಲ್ಲಿ ಪತ್ತೆ ಹಚ್ಚಿದರು. ಕೊಲೆಗೈದು ಹೂತು ಹಾಕಲಾದ ಮೃತದೇಹವನ್ನು ಹಿಟಾಚಿ ಬಳಸಿ ಅಸ್ಥಿಪಂಜರ ಮತ್ತು ಬಟ್ಟೆಗಳನ್ನು ಪತ್ತೆ ಹಚ್ಚಿ, ವೈಜ್ಞಾನಿಕ ಪರೀಕ್ಷೆಗೊಳಪಡಿಸಿದರು. ಅದರಂತೆ ಮೃತದೇಹ ಸಫಿಯಾಳದ್ದೇ ಎಂದು ಖಾತರಿಯಾಗಿತ್ತು.

See also  ನೆರೆ ಸಂತ್ರಸ್ತರಿಗೆ ಚಾಮರಾಜನಗರದಿಂದ 1 ಲಕ್ಷ ಚಪಾತಿ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು