News Kannada
Friday, December 02 2022

ಕರ್ನಾಟಕ

ಸೆಪ್ಟಂಬರ್ 2 ನೇ ವಾರದಲ್ಲಿ ತೆರೆಗೆ ಬರಲಿದ್ದಾನೆ ‘ಕೊಡಗ್ ರ ಸಿಪಾಯಿ’

Photo Credit :

ಸೆಪ್ಟಂಬರ್ 2 ನೇ ವಾರದಲ್ಲಿ ತೆರೆಗೆ ಬರಲಿದ್ದಾನೆ ‘ಕೊಡಗ್ ರ ಸಿಪಾಯಿ’

ಸೆಪ್ಟಂಬರ್ 2 ನೇ ವಾರದಲ್ಲಿ ತೆರೆಗೆ ಬರಲಿದ್ದಾನೆ ‘ಕೊಡಗ್ ರ ಸಿಪಾಯಿ’ಮಡಿಕೇರಿ: ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್‍ನಡಿಯಲ್ಲಿ ಕೊಟ್ಟುಕತ್ತೀರ ಪ್ರಕಾಶ್ ನಿರ್ದೇಶನದ ದೇಶಪ್ರೇಮ, ಸೌಹಾರ್ದತೆ ಹಾಗೂ ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವ ಕೊಡವ ಕಾದಂಬರಿ ಆಧಾರಿತ ‘ಕೊಡಗ್ ರ ಸಿಪಾಯಿ’ ಚಲನಚಿತ್ರ ಸೆಪ್ಟಂಬರ್ 2 ನೇ ವಾರದಲ್ಲಿ ತೆರೆಗೆ ಬರಲಿದೆ.

ಮುಕ್ಕೋಡ್ಲು, ಹಟ್ಟಿಹೊಳೆ, ಮಕ್ಕಂದೂರು, ಮಡಿಕೇರಿ, ಚೆಟ್ಟಳ್ಳಿ ಮತ್ತು ಮುಕ್ಕೋಡ್ಲುವಿನ ವ್ಯಾಲಿಡ್ಯೂ ಹೋಮ್ಸ್ಸ್ಟೇಯಲ್ಲಿ ಚಿತ್ರೀಕರಣ ಪೂರೈಸಿರುವ ‘ಕೊಡಗ್ ರ ಸಿಪಾಯಿ’ ಸಂಕಲನ ಹಾಗೂ ರಿರೆಕಾರ್ಡಿಂಗ್ ಕಾರ್ಯವನ್ನು ಕೂಡ ಪೂರ್ಣಗೊಳಿಸಿದೆ.

ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶಿಸಿ, ಎಂ.ಡಿ.ಕೌಶಿಕ್ ಸಹ ನಿರ್ದೇಶನ ಮಾಡಿರುವ ಕೊಡವ ಚಲನಚಿತ್ರದಲ್ಲಿ ಖ್ಯಾತ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಅವರು ನಾಯಕರಾಗಿ ಹಾಗೂ ತೇಜಸ್ವಿನಿ ಶರ್ಮ ನಾಯಕಿಯಾಗಿ ನಟಿಸಿದ್ದಾರೆ.

“ಕೊಡಗ್ ರ ಸಿಪಾಯಿ” ಬರಹಗಾರ್ತಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿ, ಕೊಡವ ಮಕ್ಕಡ ಕೂಟ ಸಂಘಟನೆ ಪ್ರಕಟಿಸಿರುವ ಕೊಡವ ಕಾದಂಬರಿ ಆಧಾರಿತ ಚಿತ್ರವಾಗಿದೆ. ಕೊಡಗಿನ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿನಯಿಸಿರುವುದು ವಿಶೇಷ.

ನಿರ್ಮಾಣ ಮತ್ತು ನಿರ್ವಹಣೆ ಜವಬ್ದಾರಿಯನ್ನು ಬೊಳ್ಳಜಿರ ಬಿ.ಅಯ್ಯಪ್ಪ ನಿಭಾಯಿಸಿದ್ದು, ಯಶವಂತ್ ಛಾಯಾಗ್ರಹಣ, ಸಂಗೀತ ಆರ್‍ಜೆಬಿ, ಸಂಕಲನ ಸಂಜೀವರೆಡ್ಡಿ, ಚಿತ್ರಕಥೆ-ಸಂಭಾಷಣೆ ಹಂಸರಾಜ್ ಹಾಗೂ ಮಂಜು ಪಾಂಡವಪುರ ಸಹನಿರ್ದೇಶನ ಮಾಡಿದ್ದಾರೆ.

ದೇಶ ಕಾಯುವ ಸೈನಿಕನೊಬ್ಬ ನಿವೃತ್ತಿಯ ನಂತರ ತವರು ಜಿಲ್ಲೆ ಕೊಡಗಿಗೆ ಆಗಮಿಸಿ ಹೋಂಸ್ಟೇ ನಡೆಸುವ ಮೂಲಕ ತಮ್ಮ ಜೀವನವನ್ನು ಯಾವ ರೀತಿ ಸಾಗಿಸುತ್ತಾರೆ ಮತ್ತು ಆ ಹೊಂಸ್ಟೇಯಲ್ಲಿ ನಡೆಯುವ ಅನಾಹುತ, ಸವಾಲುಗಳ ಸುತ್ತ ಕಥಾ ಹಂದರ ಸಾಗಲಿದೆ. ಅರ್ಜುನ್ ದೇವಯ್ಯ ಎಂಬ ಪ್ರಮುಖ ಪಾತ್ರದ ಸುತ್ತ ಕಥೆಯನ್ನು ಹೆಣೆಯಲಾಗಿದೆ.

ಸೇನೆಯಿಂದ ನಿವೃತ್ತಿ ಹೊಂದುವ ಅರ್ಜುನ್ ದೇವಯ್ಯ ಮುಕ್ಕೋಡ್ಲು ಗ್ರಾಮಕ್ಕೆ ಬಂದು ನೆಲೆಸುತ್ತಾರೆ. ಪ್ರವಾಸೋದ್ಯಮದ ಬಗ್ಗೆ ಆಕರ್ಷಿತರಾಗಿ ಹೋಂಸ್ಟೇಯೊಂದನ್ನು ಆರಂಭಿಸುತ್ತಾರೆ. ಇದರ ಜೊತೆಯಲ್ಲೇ ಸಾಮಾಜಿಕ ಕಳಕಳಿಯನ್ನು ತೋರುವ ನಾಯಕ ತಾನು ಓದಿದ ಸರಕಾರಿ ಶಾಲೆ ಶಿಥಿಲಾವಸ್ಥೆಗೊಂಡು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವುದನ್ನು ಕಂಡು ಮರುಗುತ್ತಾರೆ. ಶಾಲೆಗೆ ಕಾಯಕಲ್ಪ ನೀಡುವ ಉದ್ದೇಶದೊಂದಿಗೆ ಕಾರ್ಯೋನ್ಮುಖರಾಗುತ್ತಾರೆ.

ಪ್ರಮುಖವಾಗಿ ತಮ್ಮ ಊರಿನ ಯುವ ಸಮೂಹ ಸೇನೆಗೆ ಸೇರಬೇಕೆನ್ನುವ ಹೆಬ್ಬಯಕೆಯಿಂದ ಸೇನಾ ಸೇರ್ಪಡೆಗೆ ಅಗತ್ಯವಿರುವ ಎಲ್ಲಾ ತರಬೇತಿಗಳನ್ನು ಯುವಕರಿಗೆ ನೀಡಲು ಆರಂಭಿಸುತ್ತಾರೆ. ಮೀನು ಮಾರುವ ಮುಸ್ಲಿಂ ವ್ಯಕ್ತಿಯ ಮಗನಿಗೂ ತರಬೇತಿ ನೀಡಿ ಸೌಹಾರ್ದತೆಯನ್ನು ಮೆರೆಯುತ್ತಾರೆ.

ಈ ನಡುವೆ ಹೋಂಸ್ಟೇಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಬಂದು ತಂಗುತ್ತಾರೆ. ಇದರ ಹಿಂದಿನ ರಹಸ್ಯಗಳು ನಿಧಾನವಾಗಿ ನಾಯಕ ಅರ್ಜುನ್‍ಗೆ ತಿಳಿಯುತ್ತಾ ಬರುತ್ತದೆ. ಹಲವು ದಿನಗಳ ನಂತರ ನಿಗೂಢವಾಗಿ ಭಯೋತ್ಪಾದಕರೂ ನಾಯಕನ ಹೋಂಸ್ಟೇಯಲ್ಲಿ ಆಶ್ರಯ ಪಡೆದು ದೇಶದ್ರೋಹಿ ಕುತಂತ್ರದಲ್ಲಿ ತೊಡಗುತ್ತಾರೆ.

ದೇಶಕ್ಕೇ ಕಂಟಕವಾಗಬಲ್ಲ ಈ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಲ್ಲಿ ನಾಯಕ ಅರ್ಜುನ್ ದೇವಯ್ಯ ಯಶಸ್ವಿಯಾಗುತ್ತಾರೆಯೇ ?, ತಾವು ಕಂಡ ಕನಸಿನಂತೆ ಸರಕಾರಿ ಶಾಲೆಗೆ ಕಾಯಕಲ್ಪ ದೊರೆಯುತ್ತದೆಯೇ ?, ಊರಿನ ಯುವಕರು ಸೇನೆಗೆ ಸೇರ್ಪಡೆಯಾಗುತ್ತಾರೆಯೇ ? ಎನ್ನುವ ಹಲವು ಕುತೂಹಲಗಳಿಗೆ ‘ಕೊಡಗ್‍ರ ಸಿಪಾಯಿ’ ಚಲನಚಿತ್ರದ ಕ್ಲೈಮ್ಯಾಕ್ಸ್ ಉತ್ತರ ನೀಡಲಿದೆ.

See also  ಕೊಡಗು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಛೇರಿ ಸೀಲ್ ಡೌನ್

::: ಸಿನಿಮಾಸಕ್ತಿಯ ಪ್ರಕಾಶ್ ಕಾರ್ಯಪ್ಪ :::

ನಿರ್ಮಾಪಕ ಹಾಗೂ ನಿರ್ದೇಶಕ ಕೊಡಗಿನ ಕೊಟ್ಟುಕತ್ತೀರ ಪ್ರಕಾಶ್‍ಕಾರ್ಯಪ್ಪ ಅವರು ಮೊದಲಿನಿಂದಲೂ ಸಿನಿ ಕ್ಷೇತ್ರದ ಮೇಲೆ ಹೆಚ್ಚು ಆಕರ್ಷಿತರಾದವರು. ಬಾಕೆಮನೆ ಕೊಡವ ಚಲನಚಿತ್ರ ಹಾಗೂ ಕನ್ನಡ ಚಿತ್ರ ಆಶ್ರಯಧಾಮವನ್ನು ನಿರ್ಮಿಸಿ, ನಟಿಸಿದ್ದಾರೆ.

ಮೇಷ್ಟ್ರುದೇವ್ರು, ಸ್ಮಶಾನಮೌನ ಹಾಗೂ ಮಕ್ಕಳ ತೀರ್ಪು ಕನ್ನಡ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದಾರೆ. ಇದೀಗ “ಕೊಡಗ್‍ರ ಸಿಪಾಯಿ” ಕೊಡವ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ.

“ಬಾಕೆಮನೆ” ಕೊಡವ ಚಿತ್ರ ಕೊಲ್ಕತ್ತದಲ್ಲಿ ಹಾಗೂ ಸ್ಮಶಾನಮೌನ ಕನ್ನಡ ಚಿತ್ರ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.

ಪ್ರಕಾಶ್ ಕಾರ್ಯಪ್ಪ ಅವರು 14 ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಕೊಡವ ಚಿತ್ರಗಳಾದ ನಂಗಕೊಡವ ಹಾಗೂ ಜಮ್ಮಾಭೂಮಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಗೆಜ್ಜೆತಂಡ್” ಇವರು ಅಭಿನಯಿಸಿದ ಮೊದಲ ಕೊಡವ ಧಾರಾವಾಹಿ. ತೆಳಂಗ್ ನೀರ್ ಕೊಡವ ಚಿತ್ರ, ಕನ್ನಡ ಚಿತ್ರಗಳಾದ ಮೀಸಲಾತಿ, ಹೊಸ ಕ್ಲೈಮ್ಯಾಕ್ಸ್, ಮೌನ ಚುಂಬನ, ಈಶ ಮಹೇಶ, ಕಾಲ್ ಏಜ್ ಚಿತ್ರಗಳಲ್ಲಿ ಅಭಿನಯಿಸಿರುವ ಪ್ರಕಾಶ್ ಕಾರ್ಯಪ್ಪ ಕಳೆದ 18 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ.

ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ತಾವೇ ರಚಿಸಿರುವ “ಬದುಕ್‍ರ ಸುಳಿಲ್” ಕಥೆಯಾಧಾರಿತ ಮತ್ತೊಂದು ಕೊಡವ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಲಿದ್ದಾರೆ. ಎರಡು ಪುಸ್ತಕಗಳನ್ನು ಕೂಡ ಬರೆದಿರುವ ಪ್ರಕಾಶ್ ಕಾರ್ಯಪ್ಪ ಅವರ “ಕರಗಿದ ಬದುಕು” ಪುಸ್ತಕ ಇದೇ ಸೆ.20 ರಂದು ಲೋಕಾರ್ಪಣೆಗೊಳ್ಳಲಿದೆ.

ಸೆಪ್ಟಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿರುವ “ಕೊಡಗ್‍ರ ಸಿಪಾಯಿ” ಕೊಡವ ಚಿತ್ರ ಅಭೂತಪೂರ್ವ ಯಶಸ್ಸನ್ನು ಕಾಣಲಿದೆ ಎಂದು ಪ್ರಕಾಶ್ ಕಾರ್ಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಕೊಡಗ್ ರ ಸಿಪಾಯಿ”ಯಲ್ಲಿ ವಾಂಚಿರ ವಿಠಲ್ ನಾಣಯ್ಯ, ವಾಂಚಿರ ಜಯಾನಂಜಪ್ಪ, ಕರ್ನಲ್ ಕಂಡ್ರತಂಡ ಸುಬ್ಬಯ್ಯ, ತಾತಂಡ ಪ್ರಭಾ ನಾಣಯ್ಯ, ಉಳುವಂಗಡ ಅಮಿತ್ ಬೋಪಣ್ಣ, ಕುಪ್ಪಳಮಡ ಭೂಮಿಕ, ತೇಲಪಂಡ ಪವನ್, ಬೊಳ್ಳಜಿರ ಬಿ.ಅಯ್ಯಪ್ಪ, ಕೊಟ್ರಮಾಡ ಹರೀಶ್, ಪಟ್ಟಡ ಧನು ರಂಜನ್, ಬೊಳ್ಳಜಿರ ಯಮುನಾ ಅಯ್ಯಪ್ಪ, ಕೋಳುಮಾಡಂಡ ಸಾಬು ಉತ್ತಪ್ಪ, ಈರಮಂಡ ವಿಜಯ ಉತ್ತಯ್ಯ, ತೆನ್ನೀರ ಕೈಲಾಶ್ ಕುಟ್ಟಪ್ಪ, ಬಲ್ಲಾರಂಡ ರಾಜೇಶ್, ಮಂಡುವಂಡ ಪುಟ್ಟ, ಕುಂದೀರ ಪ್ರತಾಪ್, ಮಂದೆಯಂಡ ರಾಜೀಬೆಳ್ಯಪ್ಪ, ಅಚ್ಚಪಂಡ ಪ್ರಸನ್ನ ಪ್ರಸು, ಅಚ್ಚಪಂಡ ಪ್ರತಾಪ್ ಪ್ರೀತಂ, ಬಿದ್ದಂಡ ಉತ್ತಮ ಪೊನ್ನಪ್ಪ, ಕುಪ್ಪಳಮಾಡ ಜಾನ್ಸಿ, ಹಂಚೆಟ್ಟೀರ ಮನುಮುದ್ದಪ್ಪ, ಹಂಚೆಟ್ಟೀರ ಸ್ನೇಹ ಮುದ್ದಪ್ಪ, ಹಂಚೆಟ್ಟೀರ ಶಿಂಶಾ ಮುದ್ದಪ್ಪ, ಹಂಚೆಟ್ಟೀರ ಸ್ಪರ್ಷಮುದ್ದಪ್ಪ, ನಕ್ಷ್ ತಮ್ಮಯ್ಯ, ಹಂಚೆಟ್ಟೀರ ನಯನಾ ಚಂಗಪ್ಪ, ಹಂಚೆಟ್ಟೀರ ಸೌಮ್ಯ ಚೆಂಗಪ್ಪ, ಹಂಚೆಟ್ಟೀರ ಸ್ಪಂದನ ಬೊಳ್ಳಮ್ಮ, ಹೊಟ್ಟೆಯಂಡ ಉತ್ತಯ್ಯ, ಹೊಟ್ಟೆಯಂಡ ತಿಮ್ಮಯ್ಯ, ಮೊಣ್ಣಂಡ ಮಿಥುನ್ ಪೂಣಚ್ಚ, ಅಪ್ಪು, ಶ್ರೀಕಾಂತ್, ಸೈದುಲ್ಲಾ, ಚೆನ್ನಪಂಡ ನಂದ, ಕೋಳುಮಾಡಂಡ ಮನುಮಾಚಯ್ಯ, ಸರ್ಕಂಡ ಅಭಿ, ಸರ್ಕಂಡ ಲೋಕೇಶ್, ಸರ್ಕಂಡ ನಾಣಯ್ಯ, ಮೊರ್ಕಂಡ ಕುಟ್ಟಪ್ಪ, ಅಡ್ಡಂಡ ಸಿ.ಬೋಪಯ್ಯ, ಸಂತೋಷ್ ರೈ, ಹರೀಶ್ ಮೊಗೇರ, ಗಯಾಜ್ ಕುಶಾಲ್, ನಾಪಂಡ ರಘು ತಿಮ್ಮಯ್ಯ, ಮೊಣ್ಣಂಡ ಮಿಟ್ಟುಪೂಣಚ್ಚ ಅಭಿನಯಿಸಿದ್ದಾರೆ.

See also  ಚಿಕ್ಕಮಗಳೂರಿನ ಕೆಲವೆಡೆ ಭೂಮಿ ಕಂಪನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು