News Kannada
Tuesday, November 29 2022

ಕರ್ನಾಟಕ

ಮೈತುಂಬಿ ಹರಿದು ಪ್ರವಾಸಿಗರ ಸೆಳೆಯುತ್ತಿರುವ ಜೋಗ್ ಜಲಪಾತ - 1 min read

Photo Credit :

ಮೈತುಂಬಿ ಹರಿದು ಪ್ರವಾಸಿಗರ ಸೆಳೆಯುತ್ತಿರುವ ಜೋಗ್ ಜಲಪಾತ

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಜೋಗ್ ಜಲಪಾತ ಅಕ್ಷರಶಃ ಮೈದುಂಬಿಕೊಂಡು ಪ್ರವಾಸಿಗರನ್ನು ಸೆಳೆಯುತ್ತಿದೆ.

ಸಹಜವಾಗಿ ಮಂಗಳವಾರ ಪ್ರವಾಸಿಗರ ಓಡಾಟ ಕಡಿಮೆ, ಆದರೆ ಜೋಗ ಇವತ್ತು ಪ್ರವಾಸಿಗರನ್ನು ಅಕ್ಷರಶಃ ಸೆಳೆದಿಟ್ಟುಕೊಂಡಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಒಳಹರಿವು ಸುಮಾರು 52 ಸಾವಿರ ಕ್ಯೂಸೆಕ್ ನೀರು ಒಳಹರಿವು ಪಡೆದುಕೊಂಡಿದೆ. 11 ಗೇಟ್ ಗಳ ಮೂಲಕ ಜಲಾಶಯದಲ್ಲಿ 45 ಸಾವಿರ ಕ್ಯುಸೆಕ್ ನೀರನ್ನ ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೋಗ್ ಮೈದುಂಬಿಕೊಂಡಿದೆ.

ರಾಜ, ರಾಣಿ, ರೋರಲ್, ರಾಕೆಟ್ ನಾಲ್ಕು ಭಾಗಗಳಾಗಿ ಧುಮ್ಮಿಕ್ಕುವ ಶರಾವತಿ ನದಿಯನ್ನು ನೋಡಲು ಈ ಬಾರಿ ಪ್ರವಾಸಿಗರು ಹರಿದುಬರುತ್ತಿರುವುದು ವಿಶೇಷವಾಗಿತ್ತು. ಸೆಪ್ಟಂಬರ್ ಮೊದಲ ವಾರವಾದರೂ ಮುಂಗಾರು ಮಳೆ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವುದರಿಂದ ಜೋಗ್ ಜಲಪಾತ ರಮಣೀಯವಾಗಿ ಕಾಣುತ್ತಿದೆ. ಭೊರ್ಗರೆಯುವ ರಾಜ, ರಾಣಿ, ರೋರಲ್ ಹಾಗೂ ರಾಕೆಟ್ ಗಳಿಗೆ ಮೋಡ ಆಗಾಗೆ ಬಂದು ನೋಡುಗರಿಗೆ ಮುದನೋಡುತ್ತಿತ್ತು.

See also  ಹಸೆಮಣೆಯೇರಿದ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು