News Kannada
Tuesday, December 06 2022

ಕರ್ನಾಟಕ

ಕೊಡವರೇ ಕೊಡಗಿನ ಜಾಗ ಮಾರಬೇಡಿ: ಮೇಜರ್ ಜನರಲ್ ಮುಪ್ಪಂಡ ನಂಜಪ್ಪ ಕರೆ

Photo Credit :

ಕೊಡವರೇ ಕೊಡಗಿನ ಜಾಗ ಮಾರಬೇಡಿ: ಮೇಜರ್ ಜನರಲ್ ಮುಪ್ಪಂಡ ನಂಜಪ್ಪ ಕರೆ

ಮಡಿಕೇರಿ: ಕೊಡವರು ನೀವು ಎಲ್ಲೇ ಇದ್ದರೂ ಕೊಡಗಿನಲ್ಲಿರುವ ಜಾಗವನ್ನು ಮಾರಾಟ ಮಾಡದೆ ಉಳಿಸಿಕೊಳ್ಳಿ, ಮತದಾರರ ಗುರುತಿನ ಚೀಟಿಯಲ್ಲಿ ಇಲ್ಲಿಯೇ ಮಾಡಿಸಿಕೊಳ್ಳಿ ಎಂದು ನಿವೃತ ಸೇನಾಧಿಕಾರಿ ಮೇಜರ್ ಜನರಲ್ ಮುಪ್ಪಂಡ ನಂಜಪ್ಪ ಹೇಳಿದರು.

ಕೊಡವ ಸಮಾಜಗಳ ಒಕ್ಕೂಟದಿಂದ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಕೊಡವ ನಮ್ಮೆಯ ಎರಡನೆ ದಿನ ಯೋಧರ ಯುದ್ದ ಸ್ಮಾರಕ ಸ್ಥಂಭಕ್ಕೆ ಗೌರವ ಸಮರ್ಪಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೊಡಗಿನಲ್ಲಿರುವ ಜಾಗವನ್ನು ಮಾರಾಟ ಅಥವಾ ಬೋಗ್ಯಕ್ಕೆ ಕೊಡುವುದನ್ನು ಮಾಡಬೇಡಿ. ಬೋಗ್ಯಕ್ಕೆ ನೀಡಿದರೆ ತೋಟದಲ್ಲಿರುವ ಮರಗಳನ್ನು ಕಡಿದು ಮಾರಾಟ ಮಾಡುತ್ತಾರೆ. ಪರಿಸರ ನಾಶವಾಗುತ್ತದೆ. ಬಹಳ ಜನರಿಗೆ ಯುದ್ದ ಸ್ಮಾರಕ ಎಂದರೆ ಏನು ಎಂಬ ಜಿಜ್ಞಾಸೆ ಇದೆ. ದೇಶ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಶತ್ರುಗಳ ಗುಂಡಿಗೆ ಬಲಿಯಾದ ಹುತಾತ್ಮರಿಗೆ ಗೌರವ ಸಲ್ಲಿಸಲು ಒಂದು ಸ್ಮಾರಕ. ಯುದ್ದ ಭೂಮಿಯನ್ನು ವರ್ಣಿಸಲು ಸಾಧ್ಯವಿಲ್ಲ. ಧೈರ್ಯ ಎದೆಗಾರಿಗೆ ಇದ್ದರೆ ಬದುಕಿ ಬರಲು ಸಾಧ್ಯ ಎಂದರು.

ಕೊಡಗಿನಲ್ಲಿ ಆಗುವ ಕಾರ್ಯಕ್ರಮಗಳಿಗೆ ಮಾಧ್ಯಮಗಳು ಉತ್ತಮ ಪ್ರಚಾರ ನೀಡುತ್ತಿದೆ. ಜಿಲ್ಲೆಯ ಹೊರ ಭಾಗದಲ್ಲಿ ನಡೆಯುವ ಕೊಡವ ಕಾರ್ಯಕ್ರಮಗಳನ್ನು ಅಲ್ಲಿನ ಎಫ್.ಎಂ ರೇಡಿಯೋಗಳೊಂದಿಗೆ ಟೈಆಪ್ ಮಾಡಿಕೊಳ್ಳುವುದು ಉತ್ತಮ. ವೀಡಿಯೋ ಚಿತ್ರೀಕರಿಸಿ ದೃಶ್ಯ ಮಾದ್ಯಮಗಳಿಗೆ ನೀಡಿದರೆ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬಹುದು. ಬೇರೆ ದೇಶಗಳಲ್ಲಿ ಕೊಡಗು ಎಂದರೆ ಗೊತ್ತೇ ಇಲ್ಲ. ಇಲ್ಲಿರುವ ಉತ್ತಮವಾದ ರೆಸಾರ್ಟ್‍ಗಳಿಂದ ಜಿಲ್ಲೆಯನ್ನು ಗುರುತಿಸುತ್ತಿದ್ದಾರೆ. ಅರಣ್ಯದಲ್ಲಿ ಟಿಕ್ ಮರಗಳನ್ನು ನೆಟ್ಟು ಇಲಾಖೆ ಹಣ ಮಾಡಿಕೊಳ್ಳುತ್ತಿದೆ. ಅದರ ಬದಲು ಕಾಡು ಬಿದುರು, ಹಲಸಿ ಮರಗಳನ್ನು ನೆಟ್ಟರೆ ಕಾಡು ಪ್ರಾಣಿಗಳಿಗೆ ಆಹಾರ ಸಿಗುತ್ತೆ. ಪರಿಸರ ಉಳಿಯುತ್ತದೆ ಎಂದು ಹೇಳಿದರು.

See also  ಆನೆಕಾಡು ಮಾವುತರ ಶೋಚನೀಯ ಬದುಕು..
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು