News Kannada
Tuesday, November 29 2022

ಕರ್ನಾಟಕ

ಗಾಂಧಿ ಚಿಂತನೆಗಳು ಎಂದೆಂದಿಗೂ ಪ್ರಸ್ತುತ: ಚಿಂತಕ ಡಾ.ಎಸ್.ಶಿವರಾಜಪ್ಪ ಅಭಿಪ್ರಾಯ - 1 min read

Photo Credit :

ಗಾಂಧಿ ಚಿಂತನೆಗಳು ಎಂದೆಂದಿಗೂ ಪ್ರಸ್ತುತ: ಚಿಂತಕ ಡಾ.ಎಸ್.ಶಿವರಾಜಪ್ಪ ಅಭಿಪ್ರಾಯ

ಮಡಿಕೇರಿ: ‘ನನ್ನ ಬದುಕೇ ಸಮಾಜಕ್ಕೊಂದು ಸಂದೇಶ’ವೆಂದು ಸಾರಿದ ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಚಿಂತನೆಗಳು ಆರದ ಜ್ಯೋತಿಯಾಗಿದ್ದು, ಅದು ಎಂದೆಂದಿಗೂ ಪ್ರಸ್ತುತವೇ ಆಗಿರುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರು ಹಾಗೂ ಗಾಂಧೀಪರ ಚಿಂತಕರಾದ ಡಾ. ಎಸ್.ಶಿವರಾಜಪ್ಪ ಅನಿಸಿಕೆ ವ್ಯಕ್ತಪಡಿಸಿದರು.

ಕೊಡಗು ಪತ್ರಿಕಾಭವನ ಟ್ರಸ್ಟ್ ನ ‘ಪತ್ರಿಕಾ ಭವನದ 18ನೇ ವಾರ್ಷಿಕೋತ್ಸವ’ದಲ್ಲಿ ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿದ್ದು, ಗಿಡಕ್ಕೆ ನೀರೆರೆಯುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಆಗಿಹೋದ ಬುದ್ಧ, ಬಸವ, ಸ್ವಾಮಿ ವಿವೇಕಾನಂದ, ಕುವೆಂಪು ಸೇರಿದಂತೆ ಹಲ ಮಹಾನುಭಾವರ ಚಿಂತನೆಗಳನ್ನು ನಾವೆಷ್ಟು ಅಳವಡಿಸಿಕೊಂಡಿದ್ದೇವೆ ಎನ್ನುವುದು ಯಕ್ಷಪ್ರಶ್ನೆ. ಹೀಗಿದ್ದೂ, ಈ ಎಲ್ಲಾ ಮಹಾನುಭಾವರ ಚಿಂತನೆಗಳನ್ನು ಅರಿಯಬೇಕಾದಲ್ಲಿ ಮಹಾತ್ಮ ಗಾಂಧೀಜಿಯವರ ಸಮಗ್ರ ಬದುಕನ್ನು ಅರ್ಥೈಸಿಕೊಳ್ಳಬೇಕೆಂದು ತಿಳಿಸಿದರು.

ಸತ್ಯ, ಶೀಲ ಮತ್ತು ಕರುಣೆ ಎಂಬುದು ಮಹಾತ್ಮ ಗಾಂಧೀಜಿಯವರ ಬದುಕಿನ ಮೌಲ್ಯಗಳಾಗಿದ್ದವಲ್ಲದೆ, ಅವುಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದರಲ್ಲದೆ, ಅವರು ತಮ್ಮ ಬದುಕಿನುದ್ದಕ್ಕೂ ಪಾರದರ್ಶಕತೆಯನ್ನು ಕಾಯ್ದುಕೊಂಡ ಮಹಾನ್ ವ್ಯಕ್ತಿಯಾಗಿದ್ದರು. ಇಂದು ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ನಡೆಯುತ್ತಿರುವ ಬಹುತೇಕ ಕಾರ್ಯಕ್ರಮಗಳು ಕೇವಲ ತೋರಿಕೆಗಷ್ಟೆ ಆಗಿದ್ದು, ರಾಜಕಾರಣಿಗಳಿಗೆ ಗಾಂಧೀಜಿ ಒಂದು ತೋರಿಕೆಯ ಅಸ್ತ್ರವಷ್ಟೆ ಎಂದು ತೀಕ್ಷ್ಣವಾಗಿ ನುಡಿದು, ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳಾದ ಸರ್ವೋದಯ, ಗುಡಿ ಕೈಗಾರಿಕೆ, ಗ್ರಾಮ ಸ್ವರಾಜ್ಯ, ಸ್ತ್ರೀ ಸಬಲೀಕರಣ , ಅಹಿಂಸೆ ಈ ಎಲ್ಲಾ ವಿಚಾರಗಳು ಆರದ ಮೌಲ್ಯಗಳೇ ಆಗಿದೆಯೆಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿದ್ವಿಲಾಸ್ ಅವರು, ತಮ್ಮ ತಂದೆ ದಿ. ಗೋಪಾಲಕೃಷ್ಣ ಅವರು ತಮಗೆ, ಬದುಕಿನುದ್ದಕ್ಕೂ ಸ್ವಾಭಿಮಾನದ ಬದುಕಿನ ಪಾಠವನ್ನು ಕಲಿಸಿದ್ದಾರೆಂದು ಮನದುಂಬಿ ನುಡಿದು, ಕೌಟುಂಬಿಕ ವ್ಯವಸ್ಥೆಗಳು ಜಾಳು ಜಾಳಾಗುತ್ತಿರುವ ಪ್ರಸ್ತುತ ದಿನಮಾನಗಳಲ್ಲೂ ತಂದೆ ನೀಡಿದ ಮಾರ್ಗದರ್ಶನ ಹಾಗೂ ತನ್ನ ಸಹೋದರರು ಮತ್ತು ಒಟ್ಟು ಕುಟುಂಬ ತನ್ನ ಮೇಲೆ ಇಟ್ಟ ಅಭಿಮಾನ, ವಿಶ್ವಾಸ ಮತ್ತು ಜವಾಬ್ದಾರಿಗಳಿಗೆ ಕೃತಜ್ಞತೆ ಸಲ್ಲಿಸಿ, ಅವರೆಲ್ಲರ ಹಾರೈಕೆಯಿಂದ ಈ ಹಂತಕ್ಕೆ ಬಂದು ನಿಂತಿದ್ದೇನೆ. ಜಾತಿ ಮತ ಧರ್ಮಗಳ ಚೌಕಟ್ಟಿಗೆ ಸೀಮಿತವಾಗದೆ ಬೆಳೆದು ನಿಂತಿರುವ ಶಕ್ತಿ ಪತ್ರಿಕೆಯನ್ನು ಯಾವುದೇ ಕಾರಣಕ್ಕು ವೈಯಕ್ತಿಕ ವಿಚಾರಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

See also  ನಾಳೆಯಿಂದ ಸಾರಿಗೆ ಸಂಚಾರ ಆರಂಭ,ಅಂತರ ಜಿಲ್ಲಾ ಪ್ರಯಾಣಿಕರ ಬಗ್ಗೆ ಜಾಗೃತಿ ವಹಿಸಿ: ಸಚಿವ ಜಗದೀಶ ಶೆಟ್ಟರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು