ಕೊಡಗು: ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ದುಬಾರೆ ಆನೆಗಳು ಫುಟ್ಬಾಲ್ ಆಡುತ್ತಾ ರಿಲ್ಯಾಕ್ಸ್ ಮೂಡ್ ನಲ್ಲಿ ಜನರಿಗೆ ಮನರಂಜನೆಯನ್ನು ನೀಡುತ್ತಿದೆ.
ದುಬಾರೆಯಲ್ಲಿ ಇದ್ದ 29 ಆನೆಗಳ ಪೈಕಿ 6 ಆನೆಗಳು ಈ ಬಾರಿಯ ಮೈಸೂರು ದಸರಾದಲ್ಲಿ ಭಾಗವಹಿಸಿತ್ತು. ಮೈಸೂರಿನಿಂದ ವಾಪಾಸ್ ಆಗಿರುವ ಆನೆಗಳನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದು, ಆನೆಗಳ ತುಂಟಾಟ ಹಾಗೂ ಅವುಗಳ ದಿನಚರಿಯನ್ನು ನೋಡಿ ಆನಂದಿಸುತ್ತಿದ್ದಾರೆ.
ಪ್ರವಾಸಿಗರೊಬ್ಬರು ಪ್ರತಿಕ್ರಿಯಿಸಿ, ಮೈಸೂರು ದಸರಾದಲ್ಲಿ ಭಾಗವಹಿಸಿ ಕೆಲವು ದಿನಗಳ ಬಳಿಕ ಆನೆಗಳು ಶಿಬಿರಕ್ಕೆ ವಾಪಾಸ್ ಆಗಿದೆ. ನದಿಯಲ್ಲಿ ಅವುಗಳ ಸ್ನಾನ ಹಾಗೂ ಆಟವಾಡುವುದನ್ನು ಕಣ್ತುಂಬಿಕೊಳ್ಳಲು ಖುಷಿಯಾಗುತ್ತಿದೆ.
ಆನೆಗಳು ಮಾವುತರ ಮಾತಿನಂತೆ ಸೆಲ್ಯೂಟ್ ನೀಡಿ, ಫುಟ್ಬಾಲ್ ಆಟವಾಡುತ್ತಾ ರೇಸ್ ನಲ್ಲೂ ಭಾಗವಹಿಸುತ್ತಿದೆ.
ಮೈಸೂರು ದಸರಾ 10 ದಿನಗಳ ಸಂಭ್ರಮವಾಗಿರುತ್ತದೆ. ಇದರಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾಗಿದ್ದು ತಿಂಗಳ ಹಿಂದೆಯೇ ಆನೆಗಳನ್ನು ಮೈಸೂರು ಅರಮನೆಗೆ ಸ್ವಾಗತಿಸಲಾಗುತ್ತದೆ.