News Kannada
Monday, September 26 2022

ಕರ್ನಾಟಕ

ಕೊನೆಗೂ ದಾಂಧಲೆ ನಡೆಸುತ್ತಿದ್ದ ಪುಂಡಾನೆಯ ಸೆರೆ - 1 min read

Photo Credit :

ಕೊನೆಗೂ ದಾಂಧಲೆ ನಡೆಸುತ್ತಿದ್ದ ಪುಂಡಾನೆಯ ಸೆರೆ

ಚಾಮರಾಜನಗರ: ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದು ದಾಂಧಲೆ ನಡೆಸಿ ಇಬ್ಬರನ್ನು ಗಾಯಗೊಳಿಸಿ, ಜಾನುವಾರುಗಳನ್ನು ಬಲಿ ತೆಗೆದುಕೊಂಡು ಜನರಲ್ಲಿ ಭಯ ಹುಟ್ಟಿಸಿದ ಪುಂಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯಕ್ಕೆ ತಮಿಳುನಾಡಿನಿಂದ ಕಾಲರ್ ಐಡಿ ಹಾಕಿರುವ ಪುಂಡಾನೆ ಏಕಾಏಕಿಯಾಗಿ ಬಂದು ದಾಂಧಲೆ ನಡೆಸಿ ಭಯ ಹುಟ್ಟಿಸಿತ್ತು.

ಮಂಗಳವಾರದಿಂದ ಸತತವಾಗಿ ಆರು ಸಾಕಾನೆಗಳ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಗುರುವಾರ ಮಧ್ಯಾಹ್ನದ ವೇಳೆಗೆ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದ ಸ್ವಾಮಿರವರ ಜಮೀನಿನಲ್ಲಿ ಬೆಳೆ ನಾಶ ಮಾಡುತ್ತಿದ್ದ ತಮಿಳುನಾಡಿನ ರೇಡಿಯೋ ಕಾಲರ್ ಇರುವ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದನ್ನು ವೈದ್ಯರು ಸಿಡಿಸುವ ಮೂಲಕ ನಿತ್ರಾಣಗೊಂಡ ಪುಂಡಾನೆಯನ್ನು ಸಾಕಾನೆಗಳ ಮೂಲಕ ಸೆರೆ ಹಿಡಿಯಲಾಗಿದೆ.

ಬುಧವಾರ ಆಪರೇಷನ್ ಎಲಿಪ್ಯಾಂಟ್ ಕಾರ್ಯಚರಣೆಯನ್ನು ಪಾರ್ವತಿ ಬೆಟ್ಟದ ಆಸುಪಾಸಿನಲ್ಲಿ ಅರಣ್ಯಾಧಿಕಾರಿಗಳು ನಡೆಸಿದರೂ ಅರಣ್ಯಾಧಿಕಾರಿಗಳ ಕಣ್ಣಿಗೆ ಆನೆ ಹೆಜ್ಜೆ ಗುರುತು ಕಂಡರೂ ಆನೆ ಮಾತ್ರ ಬೀಳಲಿಲ್ಲ. ಇದರಿಂದ ಆತ್ಮಸ್ಥೈರ್ಯ ಕಳೆದುಕೊಳ್ಳದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಯನ್ನು ಗುರುವಾರ ಮುಂದುವರೆಸಿ ಪಾರ್ವತಿ ಬೆಟ್ಟದ ಅರಣ್ಯದಿಂದ ತಮಿಳುನಾಡಿನಿಂದ ಬಂದ ಪುಂಡಾನೆ ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರಿನಲ್ಲಿ ಕಾಣಿಸಿಕೊಂಡ ಮಾಹಿತಿಯನ್ನು ಆಧರಿಸಿದ ಅಧಿಕಾರಿಗಳು ಅದರಂತೆ ಗುರುವಾರ ಪುಂಡಾನೆÉಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಕಾರ್ಯಾಚರಣೆಯಲ್ಲಿ ಸಾಕಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ, ಜಯಪ್ರಕಾಶ್, ರೋಹಿತ್, ಪುಟ್ಟ ಇತರೆ ಸಾಕಾನೆ ಮೂಲಕ ಅಲ್ಲಿಗೆ ತೆರಳಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದು ಕ್ರೈನ್ ಮೂಲಕ ಸೆರೆ ಹಿಡಿದ ಆನೆಯನ್ನು ಲಾರಿಯಲ್ಲಿ ಹಾಕಿಕೊಂಡು ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಸಾಗಿಸಲಾಗಿದೆ.

See also  ವೇತನಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲು ಗ್ರಾ.ಪಂ ನೌಕರರ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು