News Kannada
Friday, September 30 2022

ಕರ್ನಾಟಕ

ಶೋಷಣೆ ತಡೆಯುವ ಕಾಯ್ದೆಗಳು ಸದ್ಬಳಕೆಯಾಗಲಿ : ಹಿರಿಯ ನ್ಯಾಯಾಧೀಶೆ ನೂರುನ್ನಿಸ ಸಲಹೆ - 1 min read

Photo Credit :

ಶೋಷಣೆ ತಡೆಯುವ ಕಾಯ್ದೆಗಳು ಸದ್ಬಳಕೆಯಾಗಲಿ : ಹಿರಿಯ ನ್ಯಾಯಾಧೀಶೆ ನೂರುನ್ನಿಸ ಸಲಹೆ

ಮಡಿಕೇರಿ: ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ವತಿಯಿಂದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮವು ಗುರುವಾರ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಮೇಲಿನ ಶೋಷಣೆ ತಡೆಯುವ ನಿಟ್ಟಿನಲ್ಲಿ ಬಹಳಷ್ಟು ಕಾಯ್ದೆ ಕಾನೂನುಗಳು ಜಾರಿಯಲ್ಲಿದ್ದು, ಇದರ ಸದ್ಬಳಕೆಯಾಗಬೇಕೆಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ರಾಧ ಅವರು ಮಾತನಾಡಿ, ತೊಂದರೆ ಇದ್ದರೆ ಪೋಷಕರಿಗೆ ಅಥವಾ ಗುರುಗಳಿಗೆ ತಿಳಿಸಿ. ಮಕ್ಕಳ ಹಕ್ಕುಗಳ ವಿರೋಧವಾಗಿ ಯಾವುದಾದರು ಘಟನೆ ಕಂಡುಬಂದರೆ ಮಕ್ಕಳ ಸಹಾಯವಾಣಿ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ಮಾತನಾಡಿ ಹದಿಹರೆಯದ ಮಕ್ಕಳ ಸಮಸ್ಯೆ ಹಾಗೂ ಅವರು ಎದುರಿಸುವ ಸವಾಲುಗಳನ್ನು ಮಕ್ಕಳ ಪ್ರತಿನಿಧಿಗಳು ತಿಳಿಯಪಡಿಸಲ್ಲಿದ್ದಾರೆ. ಹದಿಹರೆಯ ಎಂಬುದು ಬಾಲ್ಯಾವಸ್ಥೆಯಿಂದ ಫ್ರೌಡಾವಸ್ಥೆಗೆ ತಲುಪುವ ಪ್ರಮುಖ ಘಟ್ಟ. ಬಹಳಷ್ಟು ಬದಲಾವಣೆಯಾಗುತ್ತದೆ. ದೈಹಿಕ ಬದಲಾವಣೆ ಮಾತ್ರವಲ್ಲದೆ ಮಾನಸಿಕ ಬದಲಾವಣೆಯಾಗುತ್ತದೆ. ಆ ಸಂದರ್ಭದಲ್ಲಿ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಇಲ್ಲದಿದ್ದರೆ ಮಕ್ಕಳು ಪ್ರೀತಿ-ಪ್ರೇಮ, ಶೈಕ್ಷಣಿಕ ಆಸಕ್ತಿ ಕಡಿಮೆಯಾಗುತ್ತದೆ ಇಂತಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಬೆಂಗಳೂರಿನ ಸದಸ್ಯರಾದ ಲಕ್ಷ್ಮಿ ಪ್ರಸನ್ನ, ಶಿಕ್ಷಣ ಅಧಿಕಾರಿ ಕಾಶಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ, ಎಸ್‍ಜೆಎಂಪಿ ಘಟಕದ ಸುಮತಿ ಹಾಗೂ ಮಹೇಶ್ ಹಾಜರಿದ್ದರು.

See also  ಕಾಫಿ ಡೇ ಸಿದ್ದಾರ್ಥ್ ಇನ್ನು ನೆನಪು ಮಾತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು