ಕಾಸರಗೋಡು : ಬೈಕ್ ನ ಮೇಲೆ ಸಿಮೆಂಟ್ ಲಾರಿ ಮಗುಚಿದ ಪರಿಣಾಮ ಅಪಘಾತದಲ್ಲಿ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟ ಘಟನೆ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೂರು ತಿರುವಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಬಳ್ಳಮೂಲೆಯ ಈಶ್ವರ ಭಟ್ ( ೫೬) ಎಂದು ಗುರುತಿಸಲಾಗಿದೆ. ಕರ್ನಾಟಕದಿಂದ ಕಾಸರಗೋಡಿಗೆ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಲಾರಿ ಕೋಟೂರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ನ ಮೇಲೆ ಮಗುಚಿದ್ದು , ಅದರಡಿ ಸಿಲುಕಿದ್ದ ಈಶ್ವರ ಭಟ್ ರವರನ್ನು ಪರಿಸರವಾಸಿಗಳು ಹೊರತೆಗೆದು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ . ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
ಯಕ್ಷ ತೂಣೀರ ಸಂಪ್ರತಿಷ್ಠಾನ ದ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೆಡಿಕಲ್ ರೆಪ್ರಸೆಂಟಿವ್ ಆಗಿದ್ದರು. ಈಶ್ವರ ಭಟ್ ರವರ ತಾಯಿ ದೇವಕಿ ೨೦ ದಿನಗಳ ಹಿಂದೆ ನಿಧನರಾಗಿದ್ದರು