ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೇರಳ ಹಾಗೂ ತಮಿಳುನಾಡು ಗಡಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹಪಡೆ ಸಿಬ್ಬಂದಿ ಕೂಂಬಿAಗ್ ಮುಂದುವರೆಸಿದ್ದಾರೆ.
ನಕ್ಸಲ್ ನಿಗ್ರಹದಳದ ಡಿವೈಎಸ್‌ಪಿ ಪ್ರಸನ್ನಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಎರಡು ತಂಡಗಳಾಗಿ ತಮಿಳುನಾಡಿನ ಗಡಿಯಲ್ಲಿನ ಕೆಕ್ಕನಹಳ್ಳ ಹಾಗೂ ಕೇರಳ ಗಡಿಯ ಮೂಲೆಹೊಳೆ ಪ್ರದೇಶದಲ್ಲಿ ಮೂರನೇ ದಿನವೂ ಕೂಂಬಿAಗ್ ನಡೆಸುವ ಮೂಲಕ ನಕ್ಸಲರು ಕರ್ನಾಟಕದತ್ತ ನುಸುಳದಂತೆ ಎಚ್ಚರಿಕೆ ವಹಿಸಿದ್ದಾರೆ.
ಮದ್ದೂರು-ಮೂಲೆಹೊಳೆ ಹೆದ್ದಾರಿಯಿಂದ ಸ್ವಲ್ಪ ಒಳಭಾಗದಲ್ಲಿ ಕೆಲವು ದಿನಗಳ ಹಿಂದೆ ಆಗಂತಕರು ಸ್ಯಾಟಲೈಟ್ ಫೋನ್ ಬಳಸಿರುವುದು ಬಯಲಾದ ಹಿನ್ನಲೆಯಲ್ಲಿ ಈ ಪ್ರದೇಶದಲ್ಲಿ ಒಂದಿAಚು ಬಿಡದಂತೆ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮದ್ದೂರಿನಿಂದ ಮೂಲೆಹೊಳೆವರೆಗೆ ಸುಮಾರು ೨೨ ಕಿಲೋ ಮೀಟರ್ ಉದ್ದದ ರಸ್ತೆಲ್ಲಿ ಸಂಚರಿಸುವ ಎಲ್ಲ ವಾಹನಗಳ ಸವಾರರ ಮೇಲೆ ಕಣ್ಣಿಟ್ಟು ಕಾಯಲಾಗುತ್ತಿದೆ. ಇದಲ್ಲದೆ, ಕೇರಳ-ತಮಿಳುನಾಡು ಸಂಪರ್ಕಿಸುವ ಟ್ರೆöÊಜಂಕ್ಷನ್‌ನಲ್ಲಿ ಅರಣ್ಯ ಇಲಾಖೆ ಕಳ್ಳಬೇಟೆ ತಡೆ ಶಿಬಿರ ಪ್ರಾರಂಭಿಸಿದರೆ ಅನುಕೂಲವಾಗಲಿದೆ ಎಂಬುದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.