ಕಾರವಾರ: ಶಾಸಕ ಮತ್ತು ಸಚಿವ ಸ್ಥಾನಗಳಿಗೆ ಇಡೀ ಜಿಲ್ಲೆಗೆ ಕಾಂಗ್ರೆಸ್‌ನಿಂದ ಭೀಮಣ್ಣ ಒಬ್ಬರೇ ಅಭ್ಯರ್ಥಿ ಎಂದು ಅನರ್ಹ ಶಾಸಕ ಶಿವರಾಮ ಹೆಬ್ಬಾರ ಲೇವಡಿ ಮಾಡಿದರು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಪಪಂ ಸಭಾಭವನದಲ್ಲಿ ನಡೆದ ಅಭಿಮಾನಿ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣಕ್ಕೆ ಬಂದು ಹೋದ ನಂತರ ನಮ್ಮ ನಿಜವಾದ ಹೇಳಿಕೆ ಆರಂಭ ಮಾಡುತ್ತೇವೆ. ದೇಶದ ಸರ್ವೋಚ್ಛ ನ್ಯಾಯಾಲಯ ಸುದೀರ್ಘವಾದ ಸಂಸದೀಯ ಚರ್ಚೆಯ ಫಲಶ್ರುತಿ ಬರುವ ಎರಡು ದಿನಗಳಲ್ಲಿ ನಿರ್ಣಯವಾಗುತ್ತದೆ.
ಸ್ಪೀಕರ್ ನೀಡಿದ ತೀರ್ಪು ಅಂತಿಮ ಎಂದು ತಾವು ಯಾರೂ ಭಾವಿಸಬಾರದು ಅಂತಾ ಈಗಾಗಲೇ ಚುನಾವಣಾ ಕಮೀಷನ್ ಹೇಳಿದೆ. ಈ ದೇಶಕ್ಕೆ ಚುನಾವಣಾ ಕಮೀಷನ್ ಕಾನೂನು ಪ್ರಕಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಸರ್ವೋಚ್ಛ ನ್ಯಾಯಾಲಯದ ಮೂರು ಜನರ ಬೆಂಚಿನ ಮಧ್ಯೆ ಚುನಾವಣಾ ಕಮೀಷನ್ ಅಡ್ವೋಕೇಟ್ ಜನರಲ್ ಚುನಾವಣೆಗೆ ನಿಲ್ಲುವುದನ್ನು ತಪ್ಪಿಸಲು ಆಗುವುದಿಲ್ಲ ಎಂದು ಲಿಖಿತವಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಕೊಟ್ಟಿದ್ದಾರೆ. ನಾನು ಇನ್ನೂ ಯಾವ ಪಕ್ಷದಿಂದಲೂ ಅಭ್ಯರ್ಥಿಯಾಗಲಿಲ್ಲ.
ಸುಪ್ರೀಂಕೋರ್ಟ್ ಆದೇಶ ಬಂದ ನಂತರ 15 ಜನರು ಸೇರಿ ನಮ್ಮ ನಿರ್ಣಯ ತೆಗೆದುಕೊಳ್ಳುತ್ತೇವೆ. ವೈಯಕ್ತಿಕವಾದ ತೇಜೋವಧೆ ಯಾವುದೇ ರಾಜಕೀಯ ಪಕ್ಷದ ವ್ಯಕ್ತಿಗೆ ಇರಬಾರದು. ಬರುವ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ ಅಭಿಮಾನಿಗಳು ಮತ್ತು ಕಾರ್ಯಕರ್ತರು ಯಾವುದೇ ರೀತಿಯಲ್ಲಿ ಧೃತಿಗೆಡುವುದು ಬೇಡ.
ಸರ್ಕಾರ 100 ದಿನಗಳ ಸಂಭ್ರಮದ ಆಚರಣೆಯಲ್ಲಿ ಇದ್ದರೆ ಸುದೀರ್ಘ ಕಠಿಣ ಪಯಣವನ್ನು ನಾವು ಅನುಭವಿಸಿದ್ದೇವೆ. ಕಳೆದ ಮೂರು ತಿಂಗಳಿಂದ ನಮ್ಮ ಬಗ್ಗೆ ಅಪಪ್ರಚಾರ ನಡೆಯುತ್ತಿದೆ.10-12ದಿನಗಳಿಂದ ಕ್ಷೇತ್ರದಲ್ಲಿ ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಯ ಬಾಯಿಯಲ್ಲಿ ಬರುವ ಅತ್ಯುತ್ತಮ ಶಬ್ದಗಳನ್ನು ಗಮನಿಸಿದ್ದೇನೆ. ಇದೆಲ್ಲದಕ್ಕೂ ಇನ್ನು 2-3ದಿನಗಳಲ್ಲಿ ಉತ್ತರ ಕೊಡುತ್ತೇನೆ ಎಂದರು.