ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ನಡುರಸ್ತೆಯಲ್ಲೇ ಹತ್ಯೆ ಮಾಡಿರುವ ಘಟನೆ ಶಿರಾಳಕೊಪ್ಪದ ಬಳ್ಳಿಗಾವಿ ರಸ್ತೆಯ ಕರ್ನಾಟಕ ರೈಸ್ ಮಿಲ್ ಎದುರು ನಡೆದಿದೆ.
ಶಿಕಾರಿಪುರ ತಾಲೂಕಿನ ಉಡುಗಣಿ ನಿವಾಸಿ ಸೈಯದ್ ಜಾಫರ್ (30) ಕೊಲೆಯಾದ ವ್ಯಕ್ತಿ.
ಜಾಫರ್ ಶಿರಾಳಕೊಪ್ಪದಲ್ಲಿ ಕಬ್ಬಿನ ಹಾಲಿನ ಅಂಗಡಿ ನೇಸುತ್ತಿದ್ದ ಪಕ್ಕದಲ್ಲಿಯೇ ಜಾವೇದ್ ಎಂಬಾತ ಬಳ್ಳಿ ವಾಹನಗಳ ಸೀಟಿಗೆ ಕುಷನ್ ಕೂರಿಸುವ ಕೆಲಸ ಮಾಡುತ್ತಿದ್ದ. ಪ್ರತಿನಿತ್ಯ ಜಾಫರ್ ಅಣುಕಿಸುತ್ತಿದ್ದ, ಚೇಷ್ಟೆ ಮಾಡುತ್ತಿದ್ದ ಎಂಬ ಕಾರಕ್ಕೆ ಜಾವೇದ್ ಇಂದು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಚಾಕುವಿನಿಂದ ಜಾಫರ್ ಕುತ್ತಿಗೆ ಕೊಯ್ದು ಬಸ್ ವೊಂದರಲ್ಲಿ ಜಾವೇದ್ ಪರಾರಿ ಆಗಿರುವುದಾಗಿ ಅಲ್ಲಿ ನೆರೆದಿದ್ದ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.