ಬೆಳ್ತಂಗಡಿ: ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರವಿವಾರ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಶಾಖಾ ಮಠವಾದ ಭಟ್ಕಳ್ ಕರಿಕ್ಕಳ್‍ನ ಶ್ರೀ ರಾಮ ಕ್ಷೇತ್ರ ಧ್ಯಾನ ಮಂದಿರಕ್ಕೆ ಬೇಟಿ ನೀಡಿದರು.
ಅಲ್ಲಿ ಉಪಸ್ಥಿತರಿದ್ದ ಕನ್ಯಾಡಿ ಶ್ರೀಗುರುದೇವಮಠದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು.
ಭಟ್ಕಳ ಕರಿಕ್ಕಳ್‍ನಲ್ಲಿ ವಿಶೇಷವಾದ ಕಾರ್ತಿಕ ಮಾಸದ ಒಂದು ತಿಂಗಳ ಕಾರ್ಯಕ್ರಮ ಇರುವುದರಿಂದ ಈ ಕಾರ್ತಿಕ ಮಾಸದ ವಿಶೇಷ ಪೂಜೆಯಲ್ಲಿ ಕಾಗೇರಿ ಭಾಗಿಯಾದರು.