News Kannada
Sunday, October 02 2022

ಕರ್ನಾಟಕ

ಎಲ್ಲಾ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ: ಈಶ್ವರಪ್ಪ - 1 min read

Photo Credit :

ಎಲ್ಲಾ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ: ಈಶ್ವರಪ್ಪ

ಶಿವಮೊಗ್ಗ: ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸೇರಿಸಿಕೊಂಡು ರಾಜ್ಯದಲ್ಲಿ ನಡೆಯುವ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಅವರು ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿಯರನ್ನೂ ಸೇರಿಸಿಕೊಂಡು ಪ್ರಚಾರ ನಡೆಸಿ ಎಲ್ಲಾ ಉಪ ಚುನಾವಣೆಯನ್ನು ಭಾರತೀಯ ಜನತಾ ಪಕ್ಷ ಗೆಲ್ಲಲಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬರಲು ಅನರ್ಹ ಶಾಸಕರ ಬೆಂಬಲ ಅಗತ್ಯವಿತ್ತು. ಆ ಬೆಂಬಲ ಮತ್ತು ಸಹಕಾರವನ್ನ ಅವರು ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಅವರನ್ನು ನಾವು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಮೂಲಕ ಮುಂದಿನ ಮೂರುವರೆ ವರ್ಷದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದರು.

ಮಾದ್ಯಮದ ಮೇಲೆ ಈಶ್ವರಪ್ಪ ಗರಂ

ರಾಣಿಬೆನ್ನೂರಿನಲ್ಲಿ ಪುತ್ರ ಕಾಂತೇಶ್ ರಿಗೆ ಟಿಕೇಟ್ ನೀಡುವ ಸಂಬಂಧ ಮಾದ್ಯಮದ ಪ್ರತಿನಿಧಿಗಳು ಪ್ರಶ್ನೆ ಎತ್ತುತ್ತಿದ್ದಂತೆ ಸಚಿವರು ಇದು ಹಳೇ ಕಥೆ ಬಿಡ್ರಿ.. ನಾನು ಪುತ್ರ ಕಾಂತೇಶ್ ಟಿಕೇಟ್ ಆಕಾಂಕ್ಷಿ ಅಲ್ಲವೆಂದರೂ ಮಾಧ್ಯಮದವರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ನಿನ್ನೆ ಎಷ್ಟು ಹೇಳಿದರೂ ನೀವು ಅದನ್ನೇ ಬಿಂಬಿಸಿದ್ದೀರಿ.

ಪೇಜಾವರ ಶ್ರೀಗಳನ್ನು ನನ್ನ ಪತ್ನಿ ಭೇಟಿ ನೀಡಿ ಆಶೀರ್ವಾದ ಪಡೆದರೂ ಅದನ್ನ ಕಾಂತೇಶ್ ಟಿಕೇಟ್ ಗೆ ಲಾಭಿ ಎನ್ನುವ ರೀತಿ ಬಿಂಬಿಸಿದ್ದೀರಿ. ಈಗಲೂ ನಾನು ಹೇಳುತ್ತೇನೆ ಪುತ್ರ ಕಾಂತೇಶ್ ಗೆ ರಾಣೀಬೆನ್ನೂರು ಟಿಕೆಟ್ ಗೆ ಪ್ರಯತ್ನಿಸುತ್ತಿಲ್ಲವೆಂದರು. ನೀವು ಪುನಃ ವಾಪಾಸ್ಸಾಗಿ ಮತ್ತೆ ಟಿಕೇಟ್ ಕಾಂತೇಶ್ ಗೆ ಎಂದು ಬಿಂಬಿಸುತ್ತೀರಿ.  ಮಾಧ್ಯಮದವರಿಗೆ ಏನು ಬಂದಿದೆಯೋ ಗೊತ್ತಿಲ್ಲವೆಂದು ಗರಂ ಆಗಿ ಮುಂದೆ ನಡೆದರು.

See also  ಟಿಪ್ಪು ಜಯಂತಿಯಲ್ಲಿ ಬಿಜೆಪಿ ಶಾಸಕ ಭಾಗಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು