News Kannada
Thursday, September 29 2022

ಕರ್ನಾಟಕ

ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ಮಗಳು ಆತ್ಮಹತ್ಯೆ - 1 min read

Photo Credit :

ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ಮಗಳು ಆತ್ಮಹತ್ಯೆ

ಪಿರಿಯಾಪಟ್ಟಣ: ಕೌಟುಂಬಿಕ ಕಲಹದಿಂದ ಮನನೊಂದ  ತಾಯಿ ಮತ್ತು ಮಗಳಿಬ್ಬರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತಾಯಿಯ ಶವ ದೊರೆತಿದ್ದು, ಮಗಳ ಶವಕ್ಕಾಗಿ ಶೋಧ ಮುಂದುವರೆದಿದೆ. ತಾಲೂಕಿನ ಅತ್ತಿಗೋಡು ಗ್ರಾಮದ ಬಳಿಯಿರುವ ಹಾರಂಗಿ ನಾಲೆಯಲ್ಲಿ ಈ ಘಟನೆ ನಡೆದಿದ್ದು, ಕೆಳಗನಹಳ್ಳಿ ದೊಡ್ಡಕೊಪ್ಪಲು ಗ್ರಾಮದ ಸಣ್ಣೇಗೌಡರ ಪತ್ನಿ ಲಕ್ಷ್ಮೀ(40), ಮಗಳು ಸುನಿತಾ(ಅಶ್ವಿನಿ)(16) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.

ಲಕ್ಷ್ಮಿ ಕೆ.ಆರ್.ನಗರ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದವರಾಗಿದ್ದು ಕಳಗನಹಳ್ಳಿ ಗ್ರಾಮದ ಸಣ್ಣೇಗೌಡರೊಂದಿಗೆ ವಿವಾಹವಾಗಿದ್ದರು. ದಂಪತಿ ನಡುವೆ ನ.13ರ ರಾತ್ರಿ ಮನೆಯಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತ ಲಕ್ಷ್ಮಿ  ನ.14ರಂದು ಬೆಳಗ್ಗೆ 9.55ರ ಸಮಯದಲ್ಲಿ ಅತ್ತಿಗೋಡು ಗ್ರಾಮದ ಬಳಿಯಿರುವ ಹಾರಂಗಿ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತ ಮನೆಯಲ್ಲಿ ತಾಯಿ ಲಕ್ಷ್ಮಿ, ಮಗಳು ಸುನಿತಾ ಕಾಣದಿದ್ದಾಗ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ನಾಲೆಯ ದಡದಲ್ಲಿ ಪರ್ಸ್, ಬ್ಯಾಗ್, ಚಪ್ಪಲಿ ಕಂಡು ಬಂದಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.

ಈ ನಡುವೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೆಟ್ಟದಪುರ ಪೊಲೀಸರು ಪರಿಶೀಲನೆ ನಡೆಸಿದರಲ್ಲದೆ, ಅಗ್ನಿಶಾಮಕ ಠಾಣೆಯ ಅಧಿಕಾರಿಗಳ ಸಹಾಯದಿಂದ ಗ್ರಾಮಸ್ಥರು ನೀಡಿದ ಸುಳಿವಿನ ಮೇರೆಗೆ  ತಾಯಿ ಲಕ್ಷ್ಮಿಯ ಶವವನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದೆ. ಮಗಳ ಶವಕ್ಕಾಗಿ ಶೋಧವನ್ನು ಮುಂದುವರೆಸಲಾಗಿದೆ.

 

ತಾಯಿ ಮಗಳ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದ್ದು, ಸಣ್ಣೇಗೌಡನಿಗೆ 17 ವರ್ಷದ ಹಿಂದೆ ಲಕ್ಷ್ಮಿಯನ್ನು 2ನೇ ಮದುವೆ ಮಾಡಿದ್ದು, ಸ್ವಾಮೀಗೌಡನ ಮೊದಲ ಹೆಂಡತಿಗೆ ಸ್ವಾಮಿ ಎಂಬ ಮಗನಿದ್ದು ಆಗಾಗ್ಗೆ ಆಸ್ತಿವಿಚಾರಕ್ಕಾಗಿ ನಡೆಯುತ್ತಿತ್ತು. ಸ್ವಾಮಿಗೌಡ ಪತ್ನಿ ಲಕ್ಷ್ಮಿ ಮತ್ತು ಮಗಳು ಸುನಿತಾ (ಅಶ್ವಿನಿ)ಗೆ ಕಿರುಕುಳ ನೀಡುತ್ತಿದ್ದನಲ್ಲದೆ, ನೀವು ನದಿಗೆ ಹಾರಿ ಸತ್ತರೆ ನನ್ನ ಮಗನಿಗೆ ಆಸ್ತಿ ಉಳಿಯುತ್ತದೆ ಎಂದು ಆತ್ಮಹತ್ಯಗೆ ಪ್ರೇರಣೆ ನೀಡುವ ರೀತಿಯಲ್ಲಿ ಬೈಯ್ಯುತ್ತಾ ಕಿರುಕುಳ ನೀಡುತ್ತಿದ್ದನು. ಗಂಡ ಸ್ವಾಮೀಗೌಡ, ಮಗ ಸ್ವಾಮಿ ಮತ್ತು ನಾದಿನಿ ಸೇರಿ ಕಿರುಕುಳ ನೀಡಿದ್ದರ ಪರಿಣಾಮ ನನ್ನ ತಂಗಿ ಲಕ್ಷ್ಮಿ ಮತ್ತು ಮಗಳು ಸುನಿತಾ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎಂದು ಮೃತಳ ಅಣ್ಣ ಸ್ವಾಮೀಗೌಡ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ಧಾರೆ.

ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಠಾಣಾಧಿಕಾರಿ ಕುಮಾರ್, ಸಿಬ್ಬಂದಿ ಮಂಜುನಾಥ್, ರುದ್ರೇಶ್, ಶೇಖರ್, ಸ್ವಾಮಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ಪಾದಪೂಜೆಯೊಂದಿಗೆ ಮಕ್ಕಳಿಗೆ ಅಕ್ಷರಾಭ್ಯಾಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು