News Kannada
Monday, September 26 2022

ಕರ್ನಾಟಕ

ಗುಂಡ್ಲುಪೇಟೆ ಆಸ್ಪತ್ರೆ ಅವ್ಯವಸ್ಥೆ ನೋಡಿ ಶಾಸಕ ಕೆಂಡಾಮಂಡಲ - 1 min read

Photo Credit :

ಗುಂಡ್ಲುಪೇಟೆ ಆಸ್ಪತ್ರೆ ಅವ್ಯವಸ್ಥೆ ನೋಡಿ ಶಾಸಕ ಕೆಂಡಾಮಂಡಲ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಶಾಸಕ ಸಿ.ಎಸ್.ನಿರಂಜನಕುಮಾರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಕಂಡು ಕೆಂಡಾಮಂಡಲರಾದರಲ್ಲದೆ,  ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಜೆನರಿಕ್ ಔಷಧಿ ವಿತರಣೆ ಕೇಂದ್ರಕ್ಕೆ ಭೇಟಿ ನೀಡಿದ ಅವರು ಸರಿಯಾದ ರೀತಿಯಲ್ಲಿ ಜೆನೆರಿಕ್ ಮಳಿಗೆ ತೆರೆಯುವುದಿಲ್ಲ ಎಂಬ ದೂರಿನ ಮೇರೆಗೆ ಭೇಟಿ ನೀಡಿದ ಅವರು ಯಾವುದೇ ರೀತಿ ಔಷಧಿಗಳು ಇಲ್ಲದೇ ಇರುವುದನ್ನು ನೋಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಜೆನರಿಕ್ ಔಷಧಿ ಮಳಿಗೆ ನಿರ್ವಹಣೆಯನ್ನು ಎಮ್.ಎಸ್.ಐ.ಎಲ್ ಮಾಡುತ್ತಿರುವುದಾಗಿ  ವೈದ್ಯರಾದ ನಾಗರಾಜುಚಾರ್ಯ ಸಬೂಬು ಹೇಳಿದರು. ತಕ್ಷಣ  ಎಮ್.ಎಸ್.ಐ.ಎಲ್.ವ್ಯವಸ್ಥಾಪಕ ಪರ್ವತ ರಾಜ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು ಔಷಧಗಳನ್ನು ಸಮರ್ಪಕವಾಗಿ ಸರಬರಾಜು ಮಾಡುವಂತೆ ಸೂಚನೆ ನೀಡಿದರು.

ಆ ನಂತರ ಆಸ್ಪತ್ರೆ ಹೊರಗಿರುವ  ಕಸದ ತೊಟ್ಟಿಯನ್ನು ವೀಕ್ಷಣೆ ಮಾಡಿದ ಶಾಸಕರು ಕಸವನ್ನು ನಿರ್ವಹಣೆ ಮಾಡದೇ ಇರುವುದನ್ನು ಕಂಡು ಅಧಿಕಾರಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಲ್ಲದೆ, ರೋಗಿಗಳಿಗೆ ಬಿಸಿನೀರಿನ ತೊಂದರೆ ಆಗುತ್ತಿರುವುದನ್ನು ಗಮನಸಿ, ಬಿಸಿ ನೀರಿನ ವ್ಯವಸ್ಥೆಯನ್ನು ಕೂಡಲೇ ರೋಗಿಗಳಿಗೆ ಒದಗಿಸಬೇಕು ಮತ್ತು ಕುಡಿಯುವ ನೀರಿನ ಘಟಕದ ಕಾಮಗಾರಿಯನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು

ಈ ಸಂದರ್ಭ ಶಾಸಕರೊಂದಿಗೆ ಮುಖಂಡರಾದ ರವಿಬುದ್ದಿ ಟಿ.ಎಸ್.ಮಹೇಶ. ಡಾ.ನಾಗಚಾರ್. ಮಂಜುನಾಥ. ರವೀಶ್ ಇದ್ದರು.

See also  ಮಂಗಳೂರಿನಲ್ಲಿ ಕಾರು ಅಪಘಾತ: ಗಾಯಗೊಂಡಿದ್ದ ಮಹಿಳೆ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು