ಬೆಂಗಳೂರು: ಬಸ್ ಪಾಸ್ ಇದ್ದು ಟಿಕೆಟ್ ನೀಡಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಂಡಕ್ಟರ್ ಬಸ್ ನಿಂದ ತಳ್ಳಿದ್ದರಿಂದ ತೀವ್ರವಾಗಿ ಗಾಯಗೊಂಡಿರುವ ಘಟನೆ ಈಚೆಗೆ ನಗರದಲ್ಲಿ ನಡೆದಿದೆ.
ಗಾಯಾಳು ಭೂಮಿಕಾ ನಗರದ ವಿದ್ಯಾಲಯದಲ್ಲಿ ಮೊದಲ ಪಿಯುಸಿ ವಾಸ್ಯಂಗ ಮಾಡುತ್ತಿದ್ದಾರೆ. ಈ ಘಟನೆ ಈ ತಿಂಗಳ 11ರಂದು ಮಧ್ಯಾಹ್ನ 3 ಗಂಟೆಗೆ ಸಂಜೆ ವೇಳೆ ನಡೆದಿದ್ದು. ಅವಮಾನೀಯ ರೀತಿ ನಡೆದುಕೊಂಡ ಕಂಡಕ್ಟರ್ ಶಿವಶಂಕರ್ ಅವರನ್ನು ಸಸ್ಪೆಂಡ್ ಮಾಡಿ ವಿಚಾರಣೆಗೆ ಆದೇಶಿಸಿದೆ ಸಾರಿಗೆ ಇಲಾಖೆ.
ಈ ಸಂಬಂಧ ಪ್ರತಿಕ್ರಿಯಿಸಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ, ವಿದ್ಯಾರ್ಥಿಗಳು ದೂರದ ಊರುಗಳಿಗೂ ಹೋಗಲು ಬಸ್ ಪಾಸ್ ತೋರಿಸುತ್ತಾರೆ, ಅದು ನಡೆಯುವುದಿಲ್ಲ. ಆದರೆ ನಮ್ಮ ಸಿಬ್ಬಂದಿಯ ನಡವಳಿಕೆ ಸರಿಯಲ್ಲ’ ಎಂದರು.